ಸಚಿವ ಬಂಡಿ ಪ್ರವಾಸ (ಸುದ್ದಿ ಸಂಕ್ಷೇಪ)
ಗದಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಜ. 26 ರಂದು ಬೆಳಗ್ಗೆ 9ಗಂಟೆಗೆ ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಹರ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಜ. 27ರ ಬೆಳಗ್ಗೆ 10ಕ್ಕೆ ಕ್ಷೇತ್ರ ಭೇಟಿ, ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸುವರು. ಮಧ್ಯಾಹ್ನ 1ಗಂಟೆಗೆ ಗೋಗೇರಿ ಸುವರ್ಣ ಗ್ರಾಮದ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ನಿಡಗುಂದಿ ಸುವರ್ಣ ಗ್ರಾಮದ ಸಮುದಾಯ ಭವನದ ಉದ್ಘಾಟನೆ ನೆರವೇರಿಸುವರು. ಸಂಜೆ 6ಗಂಟೆಗೆ ಜಿಲ್ಲಾ ಗ್ರಾಮೀಣ ಮಟ್ಟದ ನಾಟಕೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಜ. 28 ರಂದು ಬೆಳಗ್ಗೆ 10.30ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ನಿಂದ ನಡೆಸುವ ಕೆ. ಬಂಡಿ ಗಾರ್ಡನ್ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಗ್ಗೆ 11ಗಂಟೆಗೆ ಕೊತಬಾಳ ಸುವರ್ಣ ಗ್ರಾಮದ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. 11.30ಕ್ಕೆ ಗಜೇಂದ್ರಗಡದ ಎಪಿಎಂಸಿ ಆವರಣದಲ್ಲಿ ಹೊಳೆಆಲೂರ ಎ.ಪಿ.ಎಂ.ಸಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮ ಹಾಗೂ ದಾಸ್ತಾನು ಕೊಠಡಿ ಉದ್ಘಾಟನೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 1ಗಂಟೆಗೆ ಮುದೇನಗುಡಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯಲ್ಲಿ ಭಾಗವಹಿಸುವರು. ಜ. 29ರಂದು ಬೆಳಗ್ಗೆ 10.30ಕ್ಕ ಗದಗನ ಕನಕಭವನದಲ್ಲಿ ಬಾಲವಿಕಾಸ ಅಕಾಡೆಮಿಯಿಂದ ನಡೆಸುವ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವರು. 11.30ಕ್ಕೆ ಗದಗ ಜಿಪಂದಲ್ಲಿ ಕೆಡಿಪಿ ಸಭೆಯಲ್ಲಿ ಭಾಗವಹಿಸುವರು ಎಂದು ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ವಿವೇಕಾನಂದ ನಗರ, ಜೆ.ಟಿ. ಕಾಲೇಜು ರೋಡ್, ವಕೀಲಚಾಳ, ಟ್ಯಾಗೋರ ರಸ್ತೆ, ಹಣಗಿ ಜೀನ್, ಮಹೇಂದ್ರಕರ ಸರ್ಕಲ್, ಜವುಳಭಾಗ, ಡಿ.ಸಿ. ಮಿಲ್ ರೋಡ್, ತಳಗೇರಿ ಓಣಿ ಈ ಭಾಗಗಳಲ್ಲಿ ಶನಿವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ಗದಗ-ಬೆಟಗೇರಿ ನಗರಸಭೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಗಣರಾಜ್ಯೋತ್ಸವ
ಗದಗ: ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದ ಎದುರಿಗಿರುವ ಐ.ಜೆ. ಅಬ್ಬಿಗೇರಿ ಬಲ್ಡಿಂಗ್ನಲ್ಲಿರುವ ಕಾರ್ಯಾಲಯದಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಜ. 26ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುವುದು. ಧ್ವಜಾರೋಹಣವನ್ನು ಪಕ್ಷದ ಗದಗ ಜಿಲ್ಲಾ ಸಂಚಾಲಕ ಅನಿಲ ಮೆಣಸಿನಕಾಯಿಯವರು ನೆರವೇರಿಸಲಿದ್ದಾರೆ. ಪಕ್ಷದ ಎಲ್ಲ ಅಭಿಮಾನಿಗಳು ಭಾಗವಹಿಸಬೇಕೆಂದು ಪಕ್ಷದ ಮುಖಂಡ ರವೀಂದ್ರ ಲಕ್ಕುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ಟಿಇ ಯೋಜನೆಯಡಿ ಪ್ರವೇಶಾವಕಾಶ: ಸೂಚನೆ
ಮುಂಡರಗಿ: ಆರ್ಟಿಇ ಯೋಜನೆ ಅಡಿಯಲ್ಲಿ 2013-14ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ ಮತ್ತು 1ನೇ ತರಗತಿಗೆ ಮಕ್ಕಳ ದಾಖಲಾತಿ ಮಾಡುವ ಸಂಬಂದ ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಅನುದಾನಿತ ಶಾಲೆಗಳಲ್ಲಿ ಶೇ. 50ರಷ್ಟು ಮತ್ತು ಅನುದಾನರಹಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ದುರ್ಬಲ ವರ್ಗದವರಿಗೆ ಕಾಯ್ದಿರಿಸಲಾಗಿದೆ. ಆಸಕ್ತರು ಪ್ರವೇಶ ಪಡೆಯಬಹುದು. ಅರ್ಜಿ ನಮೂನೆಗಳು ಆಯಾ ಶಾಲೆಗಳಲ್ಲಿ ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಬಿಇಓ ಎಂ.ಎ. ರಡ್ಡೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪಘಾತ: ಓರ್ವ ಸಾವು
ಗದಗ: ತಾಲೂಕಿನ ಹುಲಕೋಟಿ ಸಮೀಪದ ಹೊಸಳ್ಳಿ ಕ್ರಾಸ್ ಬಳಿ ಟಂಟಂ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಟಂಟಂ ಚಾಲಕ ಅಶೋಕ ಹೊಂಬಳ (44) ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

