ನಾಳೆ ಉರ್ದು ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ
ಮುಂಡರಗಿ: ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಜ. 29ರಂದು ಗದಗ ಜಿಲ್ಲಾ ಮಟ್ಟದ ಉರ್ದು ಶಿಕ್ಷಕ -ಶಿಕ್ಷಕಿಯರಿಗೆ ಶೈಕ್ಷಣಿಕ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಹಾಪೀಜ್ ಅಮ್ಜದಿ, ಕರ್ನಾಟಕಿ ಹಾಗೂ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ವಿಭಾಗದ ಮುಖ್ಯಸ್ಥ ಡಾ ಎಂ.ಬಿ. ದಿಲ್ಶಾದ್, ಧಾರವಾಡದ ಮನೋವೈದ್ಯ ಡಾ ಆನಂದ ಪಾಂಡುರಂಗಿ, ಜಿಲ್ಲಾ ಉಪನಿರ್ದೇಶಕ ರಾಜೀವ್ ನಾಯಕ ಪಾಲ್ಗೊಳ್ಳಲಿದ್ದಾರೆ. ವಿವಿಧ ವಿಷಯಗಳಲ್ಲಿ ಪರಿಣತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳು ಶೈಕ್ಷಣಿಕ ಕಾರ್ಯಾಗಾರಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲ ಉರ್ದು ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಹಾಗೂ ಉರ್ದು ಭಾಷಾ ಆಸಕ್ತರು ಪಾಲ್ಗೊಳ್ಳಬೇಕೆಂದು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋದಿನಸಾಬ್ ಡಂಬಳ ಹಾಗೂ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು, ನಾಳೆ ಕೂಗು ಕಾರ್ಯಕ್ರಮ
ಗದಗ: ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಪ್ರದರ್ಶನಕ್ಕೆ, ನಾಡು-ನುಡಿ ಸಂಸ್ಕೃತಿಯ ಜಾಗೃತಿಯನ್ನು ಮೂಡಿಸಲು ಗವಿಸಿದ್ದಯ್ಯ ಹಳ್ಳಿಕೇರಿಮಠ ಸಂಸ್ಥಾಪನೆಯ 'ಕೂಗು ಧ್ವನಿ ಪ್ರತಿಧ್ವನಿ' ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜ. 28ರಂದು ಸಂಜೆ 5 ಗಂಟೆಗೆ ಮುಂಡರಗಿ ತಾಲೂಕಿನ ಡ.ಸ. ರಾಮೇನಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ರಂಗಮಂದಿರದಲ್ಲಿ ಜರುಗಲಿದೆ. ಜನಪದ ಸಾಹಿತ್ಯದಲ್ಲಿ ಲಾವಣಿ ಗೀತೆಗಳ ಕುರಿತು ಯಾವಗಲ್ಲಿನ ಜಾನಪದ ಕಲಾವಿದ ರಂಗನಾಥ ದಾಸರ ಅವರಿಂದ ಉಪನ್ಯಾಸ ನಡೆಯಲಿದೆ. ರಾಖೇಶ ಹಿರೇಮನಿ ತಂಡದವರಿಂದ ಲಾವಣಿ ಗೀತೆಗಳ ಪ್ರಾತ್ಯಕ್ಷಿಕೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜ. 29ರಂದು ಸಂಜೆ 5 ಗಂಟೆಗೆ ಮುಂಡರಗಿ ತಾಲೂಕಿನ ಪೇಠಾಲೂರ ಹಾಲಶಿವಯೋಗೇಶ್ವರ ಪಪೂ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆಯಲಿದೆ. ಕನ್ನಡ ಜಾನಪದ ಸಾಹಿತ್ಯದಲ್ಲಿ ಹಂತಿ ಪದಗಳು ಕುರಿತು ಕಲಾವಿದ ಬೀರೇಶ ಪೂಜಾರ ಉಪನ್ಯಾಸ ನೀಡಲಿದ್ದಾರೆ. ಪವನಕುಮಾರ ಮೋಖಾಸಿ, ಕಾಶಿನಾಥ ಚುಂಗಿನ, ಕುಮಾರ ಸವಡಿ ಅವರಿಂದ ಹಂತಿ ಪದಗಳ ಪ್ರಾತ್ಯಕ್ಷಿಕೆ ಜರುಗಲಿದೆ ಎಂದು ಮಹಾಂತೇಶ ನಾಯಕವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

