ಪಕ್ಷದ್ರೋಹಿಗಳನ್ನು ಜನ ಕ್ಷಮಿಸಲ್ಲ: ಕರಿಗೌಡ್ರ
ಲಕ್ಷ್ಮೇಶ್ವರ: ಅಧಿಕಾರದಲ್ಲಿದ್ದಾಗ ಎಲ್ಲವನ್ನೂ ಅನುಭವಿಸಿ ಈಗ ಕೆಲವರು ಬಿಜೆಪಿಗೆ ಪಕ್ಷದ್ರೋಹ ಮಾಡುತ್ತಿರುವುದು ನೋವಿನ ಸಂಗತಿ. ಅಂಥವರನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ವಾಯವ್ಯ ಕರ್ನಾಟರ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಎಮ್.ಎಸ್. ಕರಿಗೌಡರ ಹೇಳಿದರು.
ಶಿರಹಟ್ಟಿ ತಾಲೂಕು ಮತ್ತು ಲಕ್ಷ್ಮೇಶ್ವರ ನಗರ ಘಟಕದ ಬಿಜೆಪಿ ಕಾರ್ಯಕರ್ತರು ಪಟ್ಟಣದ ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ಯಾವುದೇ ನಾಯಕರ ಪಕ್ಷವಲ್ಲ, ಅದು ಕಾರ್ಯಕರ್ತರ ಪಕ್ಷ. ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದವರನ್ನು ಪಕ್ಷ ಎಂದಿಗೂ ಕೈಬಿಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಕಾರಣರೇ ಹೊರತು, ಯಾವುದೇ ನಾಯಕರಲ್ಲ. ಪಕ್ಷ ದ್ರೋಹಿಗಳನ್ನು ಜನರು ಕ್ಷಮಿಸಲಾರರು. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಪಕ್ಷವನ್ನು ಕಟ್ಟಲು ನಡೆಸಿದ ಕಷ್ಟ-ನಷ್ಟವನ್ನು ಅಧಿಕಾರ ದಾಹದಲ್ಲಿ ಮರೆತಿದ್ದೇವೆ ಎನ್ನುವಾಗ ಅವರು ಭಾವುಕರಾಗಿ, ಕಣ್ಣೀರು ಸುರಿಸಿದರು.
ಕರ್ನಾಟಕದ ಪ್ರತಿ ಮನೆಯೂ ಬಿಜೆಪಿ ಸರ್ಕಾರ ನೀಡಿದ ಸವಲತ್ತು ಪಡೆದಿದೆ. ಅಲ್ಪಾವಧಿಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಅಭಿವೃದ್ಧಿ ಹಾಗೂ ಪ್ರಯಾಣಿಕರ ಹಿತ ಕಾಯುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ಚೆಂಬಣ್ಣ ಬಾಳಿಕಾಯಿ ಉದ್ಘಾಟಿಸಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ಪ್ರೊ ಎನ್.ಎಸ್. ಪಾಟೀಲ, ಸೋಮಣ್ಣ ಮುಳಗುಂದ, ತಾಪಂ ಸದಸ್ಯರಾದ ತಿಮ್ಮರೆಡ್ಡಿ ಅಳವಂಡಿ, ನಿಂಬಣ್ಣ ಮಡಿವಾಳರ, ಬಸವರಾಜ ಪಲ್ಲೆದ ಹಾಗೂ ಸಿ.ವಿ. ಕೆರಿಮನಿ ಮಾತನಾಡಿದರು.
ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಜಿಪಂ ಸದಸ್ಯೆ ಕಮಲವ್ವ ಸಜ್ಜನ, ಲಕ್ಷ್ಮೇಶ್ವರ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವಯೋಗಿ ಅಂಕಲಕೋಟಿ, ತಾಲೂಕು ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಈಶ್ವರಪ್ಪ ಲಮಾಣಿ, ಜಾನು ಲಮಾಣಿ, ಮಂಜುನಾಥ ಮಾಗಡಿ, ನಜೀರ್ಸಾಬ ಅಣ್ಣಿ, ಜಗದೀಶ ಪುರಾಣಿಕಮಠ ಇದ್ದರು. ತಾಲೂಕು ಬಿಜೆಪಿ ಕಾರ್ಯದರ್ಶಿ ನಾಗರಾಜ ಕುಲಕರ್ಣಿ ಸ್ವಾಗತಿಸಿದರು, ರಾಮರಾವ್ ವೆರ್ಣೇಕರ ನಿರೂಪಿಸಿದರು, ಚೆಂದ್ರು ಹಂಪಣ್ಣವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

