ಗದಗ

ಮಕ್ಕಳನ್ನು ಶಾಲೆಗೆ ಕಳಿಸಿ

Published On :

ಗದಗ: ಪಾಲಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸುವ ಮೂಲಕ ಮಕ್ಕಳ ಕಲಿಕಾ ಪ್ರಗತಿಗೆ ಸಹಕರಿಸುವಂತೆ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಬಾರಕೇರ ಹೇಳಿದರು.
ಈಚೆಗೆ ಅವರು ಸ್ಥಳೀಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 10 ಗದಗ ಸೆಂಟ್ರಲ್ ಸ್ಕೂಲಿನಲ್ಲಿ ಮಕ್ಕಳ ದಾಖಲಾತಿ ಹಾಜರಾತಿ ಆಂದೋಲನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಎಸ್. ಎನ್. ಬಳ್ಳಾರಿ ಮಾತನಾಡಿದರು. ಇದೇ ಸಂದರ್ಭ ದಾಖಲಾತಿ, ಹಾಜರಾತಿ ಕಾರ್ಯಕ್ರಮದ ಪೋಷಣೆಯೊಂದಿಗೆ ನಗರದ ತಳಗೇರಿ ಓಣಿ, ಡೋರಗಲ್ಲಿ ಮ್ಯಾಗೇರಿಓಣಿ, ಜನತಾ ಕಾಲನಿ, ಜವಳಗಲ್ಲಿ ಮುಂತಾದ ಪ್ರದೇಶಗಳಲ್ಲಿ ಮಕ್ಕಳೊಂದಿಗೆ ಸಹಶಿಕ್ಷಕರು ಸಂಚರಿಸಿ ಶೈಕ್ಷಣಿಕ ಜಾಗೃತಿ ಮೂಡಿಸಿದರು. ದೈಹಿಕ ಶಿಕ್ಷಕಿ ಜೆ.ಜಿ. ಬಿಸರಳ್ಳಿ, ಎಸ್.ಎ. ಚಂದಪ್ಪನವರ, ಎಸ್.ಎ. ಕುರಹಟ್ಟಿ, ಜಿ.ಆರ್. ಪಾಸ್ತೆ, ಎಸ್.ಎ. ಹಾನಗಲ್ಲ, ಎನ್.ಸಿ. ಹದ್ಲಿ, ಎಸ್.ಆರ್. ಹಲಕುರ್ಕಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.