ಯೋಜನೆಗಳ ಸದುಪಯೋಗಕ್ಕೆ ನೆಗಳೂರು ಕರೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 17
ಸರ್ಕಾರ ಕುರಿಗಾರರಿಗೆ ಹಾಗೂ ನೇಕಾರರಿಗೆ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಕುರಿಗಾರರು ಸರ್ಕಾರ ನೀಡಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಎನ್.ಟಿ. ನೆಗಳೂರು ಹೇಳಿದರು.
ಈಚೆಗೆ ಅವರು ಪಟ್ಟಣದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಕುರಿ ಸಂಗೋಪನಾ ಹಾಗೂ ಉತ್ಪಾದಕರ ಸಹಕಾರಿ ಸಂಘ, ಬೀರೇಶ್ವರ ಸೇವಾ ಸಮಿತಿ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಪಶು ಸಂಗೋಪನಾ ಇಲಾಖೆ ಆಶ್ರಯದಲ್ಲಿ ಸಂಘದ ಸದಸ್ಯರ ಕುರಿಗಳಿಗೆ ಔಷಧ ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುರಿಗಳಿಗೆ ವಿವಿಧ ಬಗೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಸಾವನ್ನಪ್ಪುತ್ತಿವೆ. ಇದ ರಿಂದ ಕುರಿಗಾರರು ಹೆಚ್ಚಿನ ಹಾನಿ ಅನುಭವಿಸುತ್ತಿದ್ದಾರೆ. ಸರ್ಕಾರ ಉಚಿತವಾಗಿ ನೀಡುವ ಔಷಧವನ್ನು ರೋಗ ಬರದಂತೆ ಮುಂಗಡವಾಗಿ ವರ್ಷದಲ್ಲಿ 3 ರಿಂದ 4 ಬಾರಿ ಪ್ರತಿ ಕುರಿ-ಮೇಕೆಗಳಿಗೆ ನೀಡುವಲ್ಲಿ ಕುರಿಗಾರರು ಜಾಗೃತಿ ವಹಿಸಬೇಕು. ಆಧುನಿಕ ವೈಜ್ಞಾನಿಕ ಪದ್ಧತಿಯಿಂದ ಕುರಿ ಸಾಕಾಣಿಕೆ ಮಾಡುವುದರೊಂದಿಗೆ ಉದ್ಯಮವನ್ನು ಲಾಭದಾಯಕವಾಗಿ ಮಾಡಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಎಸ್.ಎನ್. ಪಾಟೀಲ ಮಾತನಾಡಿ, ಕುರಿಗಾರರು ವೈದ್ಯರ ಸಲಹೆ ಪಡೆಯದೇ ಕುರಿಗಳಿಗೆ ಔಷಧೋಪಚಾರ ಮಾಡುವುದರಿಂದ ಕಾಯಿಲೆ ಮತ್ತಷ್ಟು ಹೆಚ್ಚಾಗುತ್ತಿದೆ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಗೆ ಮುಂದಾಗಬೇಕು. ಸರ್ಕಾರ ಸದ್ಯ 10 ಕುರಿಗಳಿಗೆ ಮಾತ್ರ ಆರೋಗ್ಯ ವಿಮೆ ನೀಡುತ್ತಿದ್ದು, ಇದು ಸರಿಯಾದ ಕ್ರಮವಲ್ಲ, ಎಲ್ಲ ಕುರಿಗಳಿಗೂ ವಿಮೆ ನೀಡುವಂತೆ ಆಗ್ರಹಿಸಿದರು.
ಬೀರೇಶ್ವರ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಘಂಟಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಡಾ. ಬಿ.ವಿ. ಮುಲ್ಕಿಪಾಟೀಲ ಮಾತನಾಡಿದರು.
ಸಿದ್ದಯ್ಯ ಷಣ್ಮುಖಯ್ಯ ಅಮೋಘಿಮಠ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿದ್ಲಿಂಗಪ್ಪ ಖಾನಾಪುರ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ಎಚ್.ಡಿ. ಮಾಗಡಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ.ಎಸ್. ಪಾಟೀಲ, ಕೆ.ಎನ್. ಸ್ವಾಮಿ, ಎನ್.ವೈ. ಕರಿಗಾರ, ಪರಸಪ್ಪ ಪೂಜಾರ, ದೇವಪ್ಪ ಬಟ್ಟೂರ, ಫಕ್ಕಣ್ಣ ಪೂಜಾರ, ಸಹಾಯಕ ಪಶು ವೈದ್ಯಾಧಿಕಾರಿ ಡಾ. ಡಿ. ಮೋಹನ್ ಮುಂತಾದವರು ಇದ್ದರು. ಪಪಂ ಸದಸ್ಯ ಗೂಳಪ್ಪ ಕರಿಗಾರ, ಸಂತೋಷ ಕುರಿ, ಕಾಶವ್ವ ಹುಲಕಡ್ಡಿ ಅವರನ್ನು ಸನ್ಮಾನಿಸಲಾಯಿತು. ನಿಂಗಪ್ಪ ಕರಿಗಾರ ಸ್ವಾಗತಿಸಿದರು. ಮಹೇಶ ಹಾರೂಗೇರಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

