ಗದಗ

ರೈತರನ್ನು ಕಡೆಗಣಿಸಿದರೆ ಮತ್ತೊಂದು ಬಂಡಾಯ

Published On :

ನರಗುಂದ: ರೈತರನ್ನು ಕಡೆಗಣಿಸಿದರೆ ಮತ್ತೊಂದು ಬಂಡಾಯವನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸರ್ಕಾರವನ್ನು ಎಚ್ಚರಿಸಿದರು. ಅವರು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸತತವಾಗಿ 3 ವರ್ಷಗಳಿಂದ ಬರಗಾಲ ಬಿದ್ದರೂ ಹಿಂದಿನ ಬಿಜೆಪಿ ಸರ್ಕಾರ ಸೇರಿದಂತೆ ಈ ಕಾಂಗ್ರೆಸ್ ಸರ್ಕಾರವೂ ರೈತ ಸಮುದಾಯವನ್ನು ಸಂಪೂರ್ಣವಾಗಿ ಮರೆತಿವೆ. ಈ ಹಿಂದೆ 1980 ಜುಲೈ 21ರಂದು ಅಂದಿನ ಗುಂಡೂರಾವ್ ಸರ್ಕಾರದ ವಿರುದ್ಧ ಈ ಭಾಗದ ರೈತ ಸಮುದಾಯ ಬಂಡಾಯ ಎದ್ದು ಸರ್ಕಾರವನ್ನೇ ಕಿತ್ತೊಗೆದ ಇತಿಹಾಸವಿದೆ. ಆದರೂ ಇಂದಿನ ಸರ್ಕಾರಗಳಿಗೆ ಈ ಭಾಗದ ರೈತರ ಸಮಸ್ಯೆಗಳ ಕುರಿತು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಶೀಘ್ರದಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ರೈತರ ಕೃಷಿ ಸಾಲವನ್ನು, ಸಹಕಾರಿ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಮಾಡಬೇಕು. ಒಂದು ವೇಳೆ ಸರ್ಕಾರ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಬರುವ ದಿನಗಳಲ್ಲಿ ರೈತರೇ ಪಾಠ ಕಲಿಸಲಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕೇವಲ ರು. 9 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಈ ಹಣವು ಈ ಸದ್ಯ ನಡೆಯುವ ಯೋಜನೆಗಳಿಗೆ ಸಾಕಾಗುವುದಿಲ್ಲ. ಅದಕ್ಕೆ ಸುಮಾರು ರು. 25 ಸಾವಿರ ಕೋಟಿ ಅನುದಾನ ಕಾಯ್ದಿರಿಸಿದರೆ ರೈತರ ಎಲ್ಲ ಯೋಜನೆಗಳು ಸಂಪೂರ್ಣವಾಗಿ ಪೂರ್ಣಗೊಳ್ಳಲು ಸಾಧ್ಯವಾಗುತ್ತವೆ.  ಈ ದೇಶದಲ್ಲಿಯೇ ಅನ್ನ ಹಾಕುವಂತಹ ಅನ್ನದಾತನಿಗೆ ಯಾವುದೇ ಭದ್ರತೆಯಿಲ್ಲ. 4 ಗೋಡೆಗಳ ಮಧ್ಯ ಸರ್ಕಾರಿ ಸೇವೆ ಸಲ್ಲಿಸುವಂತಹ ಅಧಿಕಾರಿಗಳು ನಿವೃತ್ತಿ ಹೊಂದಿದ ಮೇಲೆಯೂ ಅವರಿಗೆ ಜೀವನ ಭದ್ರತೆ ಇರುತ್ತದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರತ ದೇಶ ಕೃಷಿ ಪ್ರಧಾನವಾದ ದೇಶ ಎಂದು ಬಾಯಿಮಾತಿಗೆ ಹೇಳಿಕೊಳ್ಳದೇ ದೇಶದಲ್ಲಿನ ಶೇ. 65ರೈತ ಸಮುದಾಯದ ಭದ್ರತೆಗೆ ಮುಂದಾಗಬೇಕೆಂದು ಕೋಡಿಹಳ್ಳಿ ಚಂದ್ರಶೇಖರ ಒತ್ತಾಯಿಸಿದರು.
ಶಾಲಾ ಸಂಸತ್ ರಚನೆ
ಗದಗ: ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ಈಚೆಗೆ 2013-14ನೇ ಸಾಲಿಗೆ ಶಾಲಾ ಸಂಸತ್‌ನ್ನು ರಚಿಸಲಾಯಿತು. ಶಾಲಾ ಪ್ರಧಾನಿಯಾಗಿ ಶಿವಕುಮಾರ ರಾಠೋಡ, ಉಪಪ್ರಧಾನಿಯಾಗಿ ರುಬಿನಾ ಪಲ್ಲೇದ, ಹಣಕಾಸು ಸಚಿವರಾಗಿ ಎಸ್.ಪಿ. ತಳವಾರ, ಶಿಕ್ಷಣ ಸಚಿವರಾಗಿ ಪಿ.ಬಿ. ಕೋತಂಬ್ರಿ, ಕ್ರೀಡಾ ಸಚಿವರಾಗಿ ಕೆ.ಎಚ್. ರಾಠೋಡ, ಚರ್ಚಾಕೂಟ ಸಚಿವೆಯಾಗಿ ರಾಣಿ ಶ್ಯಾವಿ, ಪರಿಸರ ಸಚಿವರಾಗಿ ಎಸ್.ಟಿ. ರಬಕವಿ, ಆರೋಗ್ಯ ಸಚಿವರಾಗಿ ಆರ್.ಎಂ. ಮೆಣಸಿನಕಾಯಿ, ಪ್ರವಾಸ ಸಚಿವರಾಗಿ ಡಿ.ವೈ. ಜೀರಾಳ, ಸಮಾಜ ಕಲ್ಯಾಣ ಸಚಿವರಾಗಿ ಎಸ್.ಎಚ್. ಗೌಡ್ರ, ಸಾಂಸ್ಕೃತಿಕ ಸಚಿವೆಯಾಗಿ ಜ್ಯೋತಿ ಪೆನಗುಂಡಿ, ಆಹಾರ ಸಚಿವರಾಗಿ ಕೆ.ಎಸ್. ಸಾಬೋಜಿ ಅವರನ್ನು ಆಯ್ಕೆಗೊಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.