ಗದಗ

ಸಮಾಜಮುಖಿ ಸಾಹಿತ್ಯ: ಮಹಿಳೆ ಕೊಡುಗೆ ಅನನ್ಯ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 18
ಮಹಿಳೆಯು ಪ್ರಾಚೀನ ಕಾಲದಿಂದಲೂ ತನ್ನದೆ ನೆಲೆಗಟ್ಟಿನಲ್ಲಿ ಸೃಜನಾತ್ಮಕ ಸಾಹಿತ್ಯವನ್ನು ರಚಿಸುತ್ತ ಬಂದಿದ್ದಾಳೆ. ಸಮಾಜದ ಕಟ್ಟಳೆ ಮಧ್ಯೆಯು ಸಮಾಜಮುಖಿಯಾದ ಸಾಹಿತ್ಯ ಕೃಷಿ ಮಾಡಿ ಜಗತ್ತಿಗೆ ಉತ್ತಮವಾದ ಸಂದೇಶವನ್ನು ನೀಡುತ್ತಾ ಬಂದಿದ್ದಾಳೆ ಎಂದು ಗದಗ ಶಹರದ ಸಿಆರ್‌ಪಿ, ಸಾಹಿತಿ ಜಯಶ್ರೀ ಶ್ರೀಗಿರಿ ಹೇಳಿದರು.
ಈಚೆಗೆ ಅವರು ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿರುವ ತಾಪಂ ಆವರಣದಲ್ಲಿ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಮಾಲಿಕೆ-29 ರಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.
ಮಹಿಳಾ ಸಾಹಿತ್ಯವು ಸ್ವಾತಂತ್ರ್ಯ ಪೂರ್ವಕಾಲದಿಂದಲೂ ಹುಲಸಾಗಿ ಬೆಳೆಯದಿದ್ದರೂ ನವೋದಯ, ನವ್ಯ ಮತ್ತು ಇತ್ತೀಚಿನ ಆಧುನಿಕ ಕನ್ನಡ ಸಾಹಿತ್ಯವು ಬಹಳಷ್ಟು ಬೆಳೆದಿದೆ. ಇಲ್ಲಿ ಸ್ತ್ರೀ ಧೋರಣೆಯು ಸಾಹಿತ್ಯದ ಮುಖ್ಯ ವಸ್ತುವಾಗಿದೆ. ಈ ಹಿನ್ನೆಲೆಯಲ್ಲಿ ಜಯದೇವಿತಾಯಿ ಲಿಗಾಡೆ, ಗೀತಾ ನಾಗಭೂಷಣ, ಸಾರಾಅಬೂಬಕರ, ಅನುಪಮ ನಿರಂಜನ, ತಿರುಮಲಾಂಬ, ಕಮಲಾ ಹಂಪನಾ, ಶಾಂತಾದೇವಿ ಮಾಳವಾಡ, ಶಾಂತಾದೇವಿ ಕಣವಿ, ವೈದೇಹಿ, ಹೇಮಾ ಪಟ್ಟಣಶೆಟ್ಟಿ, ಗೀತಾ ಕುಲಕರ್ಣಿ ಮುಂತಾದ ಲೇಖಕಿಯರ ಸಾಮಾಜಿಕ ಕಳಕಳಿಯನ್ನು ನಾವು ಮೆಚ್ಚಲೇಬೇಕು. ಸ್ವಾಸ್ಥ್ಯ ಸಮಾಜದ ಚಿಂತನೆಯನ್ನು ತಮ್ಮ ಸಾಹಿತ್ಯದ ಮೂಲಕ ಮಾಡಿದ್ದು ಸ್ಮರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಿ.ಎಚ್.ಮಲ್ಲೇಶ, ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಪ್ರಾ. ಕೆ.ಎಚ್. ಬೇಲೂರ, ಕೆ.ವಿ. ಕನ್ನೂರ, ಮಲ್ಲಿಕಾರ್ಜುನ ಪೂಜಾರ, ಟಿ.ಸಿ. ಕಲಹಾಳ, ಕಿಶೋರಬಾಬು ನಾಗರಕಟ್ಟಿ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಕವಿತಾ ದಂಡಿನ, ಡಾ. ಎನ್.ಎಂ.ಅಂಬಲಿಯವರ, ಡಾ. ರಾಜೇಂದ್ರ ಗಡಾದ, ಬಾಹುಬಲಿ ಜೈನರ, ಪ್ರಾ. ಹೇಮಂತ ದಳವಾಯಿ, ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.