22ರಂದು ಗುರುಪೂರ್ಣಿಮಾ ಕಾರ್ಯಕ್ರಮ: ಜಯಶ್ರೀ
ಗದಗ: ಸನಾತನ ಸಂಸ್ಥೆ, ಹಿಂದೂ ಜಾಗೃತಿ ಸಮಿತಿ ಮತ್ತು ಇತರ ಆಧ್ಯಾತ್ಮಿಕ ಸಂಸ್ಥೆಗಳ ವತಿಯಿಂದ ಜು. 22ರಂದು ಹಿಂದೂ ಸಂಸ್ಕೃತಿಯಲ್ಲಿ ತನ್ನದೇಯಾದ ಮಹತ್ವ ಹೊಂದಿದ ಗುರುಪೂರ್ಣಿಮಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸನಾತನ ಸಂಸ್ಥೆಯ ಜಯಶ್ರೀ ಹೆಬಸೂರ ಹೇಳಿದರು.
ಅವರು ಶುಕ್ರವಾರ ನಗರದ ಸಂಸ್ಥೆಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರದ ತಪ್ಪು ನಿರ್ಧಾರದಿಂದ ಆಂಗ್ಲ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿ ಮೈಗೂಡಿ ಹೋಗಿದೆ. ಇದರಿಂದ ಭಾರತೀಯ ಪರಂಪರೆ ಹಾಳಾಗುತ್ತಿದ್ದು, ಪ್ರಸ್ತುತ ಗುರು-ಶಿಷ್ಯ ಪರಂಪರೆ ಕಾಪಾಡುವುದು ಸಂಘಟನೆಯ ಉದ್ದೇಶವಾಗಿದೆ. ಈ ಗುರುಪೂರ್ಣಿಮಾ ಮಹೋತ್ಸವದಲ್ಲಿ ರಾಷ್ಟ್ರ, ಧರ್ಮ ಮತ್ತು ಆಧ್ಯಾತ್ಮಿಕ ಸಂಶೋಧನೆಗಳ ಕುರಿತಾದ ಭವ್ಯ ಪ್ರದರ್ಶನ, ಗ್ರಂಥ ಮತ್ತು ಸಾತ್ವಿಕ ಉತ್ಪಾದನೆಗಳ ಪ್ರದರ್ಶನ ಸನಾತನ ಸಂಸ್ಥೆಯ ರಾಷ್ಟ್ರ ಹಾಗೂ ಧರ್ಮದ ಕುರಿತಾದ ಕಾರ್ಯ ಹಾಗೂ ವೈಶಿಷ್ಟ್ಯಗಳು ಮತ್ತು ಧರ್ಮಾಧೀಷ್ಟಿತ ಹಿಂದೂ ರಾಷ್ಟ್ರದ ಸ್ಥಾಪನೆ ಮತ್ತು ಆ ಕುರಿತಾದ ದಿಕ್ಕು ಈ ಕುರಿತು ಪ್ರಮುಖ ವಕ್ತಾರರ ಪ್ರಭೋಧನಾತ್ಮಕ ಮಾರ್ಗದರ್ಶನ ಆಯೋಜಿಸಲಾಗಿದ್ದು, ಭಾರತೀಯ ಪರಂಪರೆಯನ್ನು ಪುನರ್ ನಿರ್ಮಾಣಗೊಳಿಸಲು ಪ್ರಾಮುಖ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜು. 20ರಂದು ಸಂಜೆ 5ಕ್ಕೆ ನಗರದ ಜೋಡುಮಾರುತಿ ದೇವಸ್ಥಾನದಿಂದ ಮರಾಠಾ ಮಂಡಳದ ವರೆಗೆ ಪ್ರಚಾರ ಮೆರವಣಿಗೆ ಆಯೋಜಿಸಲಾಗಿದೆ ಎಂದರು. ರತ್ನಾ ಎನ್. ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

