ಗದಗ

ಪಿಂಚಣಿ ಅದಾಲತ್: ಆದೇಶ ಪ್ರತಿ ವಿತರಣೆ

Published On :

ಕನ್ನಡಪ್ರಭ ವಾರ್ತೆ, ಹೊಳೆಆಲೂರ, ಜು. 21
ಸಮೀಪದ ಗಾಡಗೋಳಿ ರಸ್ತೆಯಲ್ಲಿರುವ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾಯ ಸ್ಮಾರಕ ಭವನದಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಶುಕ್ರವಾರ ಜರುಗಿತು.
ಗದಗ ಉಪವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ರದ್ದಾಗಿದ್ದ ವೃದ್ಧಾಪ್ಯ, ಅಂಗವಿಕಲ, ಸಂಧ್ಯಾ ಸುರಕ್ಷಾ, ವಿಧವಾ ವೇತನಗಳ ಫಲಾನುಭವಿಗಳ ಮರು ಪರಿಶೀಲನೆ ಮಾಡಿ, ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮರು ಮಂಜೂರಾತಿ ಆದೇಶ ಪ್ರತಿಗಳನ್ನು ವಿತರಿಸಲಾಯಿತು. ಒಟ್ಟು 25 ಫಲಾನುಭವಿಗಳು ಅರ್ಹತೆ ಪಡೆದು, 20 ಅರ್ಜಿಗಳು ರದ್ದಾದವು. ಈ ಸಂದರ್ಭದಲ್ಲಿ ಹೊಳೆಆಲೂರ, ಗಾಡಗೇಳಿ, ಮೆಣಸಗಿ, ಭೋಪಳಾಪುರ, ಕರಮುಡಿ, ಮೇಗೂರ, ಅಸೂಟಿ, ಕರ್ಕಿಕಟ್ಟಿ, ಹುನಗುಂಡಿ, ಬೆನಹಾಳ, ಹುಲ್ಲೂರ, ಬೆಳವಣಕಿ, ಯಾವಗಲ್, ಸಂದಿಗವಾಡ, ಮಲ್ಲಾಪುರ, ಹೊನ್ನಾಪುರ, ಹೊಳೆಮಣ್ಣೂರ, ಬೇಲೇರಿ, ಹೊಳೆಹಡಗಲಿ, ಕುರುವಿನಕೊಪ್ಪ, ಅಮರಗೋಳ, ಕೌಜಗೇರಿ, ಮೇಲ್ಮಠ 28 ಹಳ್ಳಿಗಳ ಫಲಾನುಭವಿಗಳು ಆಗಮಿಸಿದ್ದರು.
ರೋಣ ಉಪಖಜಾನೆ ಅಧಿಕಾರಿ ಆರ್.ಎನ್. ಜೋಗೇರ, ಪ್ರಭಾರಿ ಉಪತಹಸೀಲ್ದಾರ್, ಕಂದಾಯ ನಿರೀಕ್ಷಕ ಆರ್.ಎಂ. ಬೋಮ್ಮಕರ, ಗ್ರಾಮಲೆಕ್ಕಾಧಿಕಾರಿಗಳಾದ ಎಂ.ಆರ್. ಕುದರಿ, ಆರ್.ಎನ್. ನೆಗಳೂರ, ಎಚ್.ಎಂ. ಪಾಟೀಲ, ಕಂದಾಯ ಇಲಾಖೆ ಸಿಬ್ಬಂದಿ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಶಾರದಾ ನಾಗನಾಥ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.