ವಿಧಾನಸಭೆಯಲ್ಲಿ ರೈತರಿಗಾಗಿ ಹೋರಾಟ: ಪುಟ್ಟಣ್ಣಯ್ಯ
ನರಗುಂದ: ಕೃಷಿ ಪ್ರಧಾನ ದೇಶವೆಂದು ಹೇಳಿಕೊಂಡು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ರೈತ ಸಮುದಾಯನ್ನು ದಿವಾಳಿ ಎಬ್ಬಿಸಿವೆ. ಈ ಬಗ್ಗೆ ವಿಧಾನ ಸಭೆಯಲ್ಲಿ ಹೋರಾಟ ಮಾಡಲು ರೈತರು ನನಗೆ ಧ್ವನಿ ಕೊಟ್ಟಿದ್ದಾರೆಂದು ಸರ್ವೋದಯ ಪಕ್ಷದ ಶಾಸಕ, ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಹೇಳಿದರು.
ಅವರು ಪಟ್ಟಣದಲ್ಲಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ 1980 ಜುಲೈ 21ರಂದು ಪೊಲೀಸರ ಗುಂಡಿಗೆ ಬಲಿಯಾದ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ದೇಶದಲ್ಲಿ ರೈತರ ಹೆಸರಿನಲ್ಲಿ ರಾಜಕಾರಣ ಮಾಡಿ, ಇಂದು ದೇಶದ ರೈತ ಸಮುದಾಯವನ್ನು ದುರ್ಬಲ ಸ್ಥಿತಿಗೆ ತಂದ ಕೀರ್ತಿ ಹೆಚ್ಚು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ.
ಈ ದೇಶದ ರೈತನಿಗೆ ಬೇಕಾದ ನೀರು, ವಿದ್ಯುತ್, ಸೇರಿದಂತೆ ರೈತನ ಕೃಷಿ ಕಾರ್ಯಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಪೂರೈಕೆ ಮಾಡಲು ಇವರಿಗೆ ಸಾಧ್ಯವಾಗಿಲ್ಲ. ಇದಕ್ಕೆ ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಇದುವರೆಗೂ ದೇಶ ಹಾಗೂ ರಾಜ್ಯವನ್ನಾಳಿದ ಎಲ್ಲ ಪಕ್ಷಗಳು ಕಾರಣವಾಗಿವೆ.
ರಾಷ್ಟ್ರದಲ್ಲಿ ಎಷ್ಟೋ ನದಿಗಳು ಯಾವುದೇ ಉಪಯೋಗವಿಲ್ಲದೇ ಸಮುದ್ರ ಸೇರುತ್ತಿವೆ. ಆದರೂ ಕೇಂದ್ರ ಸರ್ಕಾರ ಗಮನ ನೀಡಿಲ್ಲ. ಕೇವಲ ತನ್ನ ಹಗರಣಗಳಿಂದ ಹೇಗೆ ಪಾರಾಗಬೇಕೆಂದು ಚಿಂತನೆಯಲ್ಲಿ ಸಿಲುಕಿದೆ ಎಂದು ಟೀಕಿಸಿದರು.
ಪಟ್ಟಣದ ಬಾಬಾಸಾಹೇಬ ಕ್ರೀಡಾ ಸಂಸ್ಥೆ, ಹಾಗೂ ಚೋಪ್ರ್ ಕ್ರಿಕೆಟ್ ಕ್ಲಬ್, ತಾಲೂಕು ಪಂಡಿತ ಪುಟ್ಟರಾಜ ಗವಾಯಿಗಳ ವಿಕಲ ಚೇತನರ ಸಂಘ, ತಾಲೂಕು ಜೆಡಿಎಸ್, ಅಖಲ ಭಾರತ ವಿದ್ಯಾರ್ಥಿ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೈತ ಸಮುದಾಯಕ್ಕೆ ಜಯ ಘೋಷ ಹಾಕಿ, ವೀರ ಗಲ್ಲಿಗೆ ಮಾಲರ್ಪಣೆ ಮಾಡಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

