ಹರಿಹರ ನಡುಗನ್ನಡ ಕಾಲದ ಶ್ರೇಷ್ಠ ಶಿವಕವಿ
ಕನ್ನಡಪ್ರಭ ವಾರ್ತೆ, ಗದಗ, ಜು. 25
ಹರಿಹರ ಶೈವ ಸಾಹಿತ್ಯಕ್ಕೆ ಶ್ರಮಿಸಿದ ನಡುಗನ್ನಡ ಕಾಲದ ಶ್ರೇಷ್ಠ ಶಿವಕವಿಯಾಗಿದ್ದು, ಆಕಾಲದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಹರಿಹರನಿಗೆ ಸಲ್ಲುತ್ತದೆ ಎಂದು ಸಿ.ಜಿ. ಹುಡೇದಗಡ್ಡಿ ಹೇಳಿದರು.
ಈಚೆಗೆ ಅವರು ತಾಪಂ ಆವರಣದಲ್ಲಿ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಮಾಲಿಕೆ-30ರಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.
ಹರಿಹರ ಬಸವರಾಜ ದೇವರ ರಗಳೆ, ನಂದಿಯಣ್ಣನ ರಗಳೆ, ಮಾಹಾದೇವಿ ಅಕ್ಕನ ರಗಳೆ, ಇಳೆಯಾಂಡಗುಡಿಮಾರನ ರಗಳೆ, ಪುಷ್ಪ ರಗಳೆ ಹೀಗೆ ಕನಿಷ್ಠ 50ಕ್ಕೂ ಹೆಚ್ಚು ರಗಳೆಗಳನ್ನು ರಚಿಸಿದ ಧೀಮಂತ ಕವಿ ಹರಿಹರ. ರಗಳೆಯ ಕವಿ ಎಂದೆ ಪ್ರಸಿದ್ಧನಾದ ಹರಿಹರನು ಹಂಪಿಯ ವಿರೂಪಾಕ್ಷನ ಅಪ್ಪಟ ಭಕ್ತನಾಗಿದ್ದನು. ಈತನ ರಗಳೆಗಳು ಸರ್ವಕಾಲಿಕವಾಗುವಂತೆ, ಸಹಜ ಮತ್ತು ಸರಳ ಆಡುಭಾಷೆಯನ್ನು ನಡುಗನ್ನಡ ಶೈಲಿಯಲ್ಲಿ ಬಳಸಿ ಆಕಾಲದ ಸಾಹಿತ್ಯವನ್ನು ಜನಮನದಲ್ಲಿ ನೆಲೆಸುವಂತೆ ಮಾಡಿದ್ದಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಮಾತನಾಡಿ, 12ನೇ ಶತಮಾನದಿಂದ 18ನೇ ಶತಮಾನದ ವರೆಗಿನ ಸಾಹಿತ್ಯಿಕ ಅಧ್ಯಯನದ ಕಾಲವನ್ನು ನಡುಗನ್ನಡದ ಸಾಹಿತ್ಯವೆಂದು ಗುರುತಿಸಲಾಗಿದೆ. ಆ ಕಾಲದಲ್ಲಿ ಹರಿಹರ ಒಬ್ಬ ಶ್ರೇಷ್ಠ ರಗಳೆ ಕವಿಯಾಗಿ ಪ್ರಸಿದ್ಧನಾಗಿದ್ದಾನೆ ಎಂದರು.
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಿ.ಎಚ್. ಮಲ್ಲೇಶ, ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಪ್ರಾ. ಕೆ.ಎಚ್. ಬೇಲೂರ, ಪ್ರೊ. ಎಸ್. ಸಾವಂತ, ಡಾ. ಸದಾಶಿವ ದೊಡ್ಡಮನಿ, ಪ್ರೊ. ವಿನಾಯಕ ಕಮತದ, ಪ್ರಾ. ಆರ್.ಜಿ. ಚಿಕ್ಕಮಠ, ಆರ್.ಎನ್. ಸಜ್ಜಗಾರ, ಹನುಮಂತರಾಯ ಬಿರಾದರ, ವಿ.ಬಿ. ಪಠಾಣಿ, ಎಸ್.ಎ. ಹವಳದ, ಎಸ್.ಬಿ. ಗಾಣಿಗೇರ, ಪ್ರಕಾಶ ಗಿಡ್ಡನ್ನವರ, ಎಚ್.ಟಿ. ಸಂಜೀವಸ್ವಾಮಿ, ಪಂಚಾಕ್ಷರಯ್ಯ ಹಿರೇಮಠ, ಜಗದೀಶ ರೇವಡಿಹಾಳ, ಎಸ್.ಎ. ಅರಮನಿ, ಶಿವಾನಂದ ಗಿಡ್ನಂದಿ, ಸೋಮಶೇಖರ, ಮಹಾಂತೇಶ ಮದ್ನೂರ, ಬಸಯ್ಯ ನಂದಿಕೋಲಮಠ ಮುಂತಾದವರು ಇದ್ದರು.
ಸೌಜನ್ಯ ತಮ್ಮನಗೌಡರ ಪ್ರಾರ್ಥಿಸಿದರು. ರಾಜಶೇಖರಯ್ಯ ಕಾಲವಾಡಮಠ ಸ್ವಾಗತಿಸಿದರು. ಡಾ. ಸಂಗಮೇಶ ತಮ್ಮನಗೌಡರ ನಿರೂಪಿಸಿದರು. ಜೆ.ಎಂ. ರೇವಡಿಹಾಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

