ನೊಂದ ಕುಟುಂಬಗಳಿಗೆ ನಿವೃತ್ತ ಸೈನಿಕರೇ ಆಸರೆ
ಗದಗ: ಗದಗ ಸಣ್ಣ ಜಿಲ್ಲೆಯಾದರೂ ರಾಷ್ಟ್ರ ನಿರ್ಮಾಣದಲ್ಲಿ ಸಾವಿರಾರು ಸೈನಿಕರನ್ನು ಕೊಡುಗೆಯಾಗಿ ನೀಡಿದೆ. ಪ್ರತಿ ವರ್ಷವೂ ಗದಗ ಜಿಲ್ಲೆಯಿಂದಲೇ ವಿವಿಧ ಸೇನಾ ವಿಭಾಗಗಳಿಗೆ, ಸರಾಸರಿ 550 ಯುವಕರು ಆಯ್ಕೆಯಾಗುತ್ತಿದ್ದಾರೆ.
ಅದೇ ರೀತಿ ಪ್ರತಿ ವರ್ಷವೂ ಸಾಕಷ್ಟು ಸಂಖ್ಯೆಯ ಸೈನಿಕರು ಸೇವೆ ಮುಗಿಸಿಕೊಂಡು ನಿವೃತ್ತಿಯಾಗುತ್ತಿದ್ದು, ನಿವೃತ್ತರಲ್ಲಿ ಕೆಲವರು ವಿವಿಧೆಡೆ ನೌಕರಿ ಹುಡುಕಿಕೊಂಡಿದ್ದಾರೆ. ಇನ್ನು ಕೆಲವರು ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಮುಖ್ಯವಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ನಿವೃತ್ತ ಸೈನಿಕ ಸಂಘದ ಕಾರ್ಯ ಮಾತ್ರ ಮೆಚ್ಚುವಂತದ್ದು. ನಿವೃತ್ತ ಸೈನಿಕರ ಕುಟುಂಬಕ್ಕೆ ತೊಂದರೆ ಬಂದರೆ, ಯೋಧರ ಆರೋಗ್ಯದಲ್ಲಿ ಏರುಪೇರಾದಲ್ಲಿ ಸಂಘ ನೆರವಿಗೆ ಧಾವಿಸುತ್ತದೆ. ಯೋಧನ ಮನೆಯಲ್ಲಿ ಸಾವು ನೋವುಗಳು ಸಂಭವಿಸಿದರೂ ನಿವೃತ್ತ ಸೈನಿಕರ ಸಂಘದವರು ಹಾಜರಿರುತ್ತಾರೆ.
ಮುಖ್ಯವಾಗಿ ನಿವೃತ್ತರೇ ಸೇರಿಕೊಂಡು ಸಹಕಾರಿ ಸಂಘವನ್ನು ಸ್ಥಾಪಿಸಿದ್ದು, ನಿವೃತ್ತರಿಂದ ಷೇರು ಸಂಗ್ರಹಿಸಿ, ಸದಸ್ಯರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ. ಇನ್ನು ಸಂಘದ ವತಿಯಿಂದಲೇ ಜಮೀನು ಖರೀದಿಸಿ, ನಿವೃತ್ತರಾಗಿ ಬರುವ ಸೈನಿಕರಿಗೆ ಗದಗ ಜಿಲ್ಲಾ ಕೇಂದ್ರದಲ್ಲಿ ನಿವೇಶನ ನೀಡುವ ಹೊಸ ಕಾರ್ಯಕ್ಕೆ ಸಂಘ ಈಗಾಗಲೇ ಚಾಲನೆ ನೀಡಿದೆ.
ಹೊಸದಾಗಿ ಸೈನ್ಯಕ್ಕೆ ಸೇರುವ ಯುವಕರಿಗೆ ಬೇಕಾಗುವ ಅಗತ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಸಂಘದ ಕಚೇರಿಯಲ್ಲಿ ಒಂದು ಕೇಂದ್ರವನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಗದಗ ಜಿಲ್ಲಾ ನಿವೃತ್ತ ಸೈನಿಕರ ಸಂಘ ಕಾರ್ಯ ಪ್ರವೃತ್ತವಾಗಿದೆ. ನಿವೃತ್ತರಿಗಾಗಿ ಸ್ಥಾಪಿಸುವ ಕ್ಯಾಂಟಿನ್ ಗದಗನಲ್ಲಿ ಇಲ್ಲದೇ ಇರುವುದು, ಇವರಲ್ಲಿ ಬೇಸರಕ್ಕೆ ಕಾರಣವಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆನ್ನುವುದು ಇವರ ಪ್ರಮುಖ ಬೇಡಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

