ಇಟ್ಟಿಗೆರೆ ಕೆರೆ ತುಂಬಿಸಿ: ನೆಲುವಿಗಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 27
ತುಂಗಭದ್ರಾ ನದಿಯ ನೀರಿನಿಂದ ಪಟ್ಟಣದ ಇಟ್ಟಿಗೆರೆ ಕೆರೆಯನ್ನು ತುಂಬಿಸಬೇಕು. ಇದರಿಂದ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟ ಹೆಚ್ಚಾಗುವುದರ ಜತೆಗೆ ದನ ಕರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ ಎಂದು ಸರ್ಕಾರ ಹಾಗೂ ಶಾಸಕರನ್ನು ಉದ್ಯಮಿ ಬಸವರಾಜ ನೆಲುವಿಗಿ ಆಗ್ರಹಿಸಿದ್ದಾರೆ.
ಅವರು ಶನಿವಾರ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2-3 ವರ್ಷಗಳಿಂದ ಪಟ್ಟಣದ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿಲ್ಲ. ಹೀಗಾಗಿ ಇಟ್ಟಿಗೆರೆ ಕೆರೆ ನೀರಿಲ್ಲದೆ ಬಣಗುಡುತ್ತಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿಯೂ ಉತ್ತಮ ಮಳೆಯಾಗದೇ ಕೆರೆಯು ಬತ್ತಿ ಹೋಗುವ ಹಂತಕ್ಕೆ ತಲುಪಿದೆ. ಕಳೆದ ಬೇಸಿಗೆಯ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ತೊಂದರೆ ಎದುರಾಯಿತು. ಇಟ್ಟಿಗೆರೆಯ ಪಕ್ಕದಲ್ಲಿಯೇ ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಸುವ ಪೈಪ್ಲೈನ್ ಹಾದು ಹೋಗಿರುವುದರಿಂದ ಕೆರೆಗೆ ನೀರನ್ನು ಯಾವುದೇ ತೊಂದರೆ ಇಲ್ಲದೆ ತುಂಬಿಸಬಹುದಾಗಿದೆ.
ನೀರನ್ನು ತುಂಬಿಸಲು ಜಿಲ್ಲಾಧಿಕಾರಿಗಳ ಪರವಾನಗಿ ಬೇಕಾದರೆ ತೆಗೆದುಕೊಳ್ಳಲು ಶಾಸಕರು ಹಾಗೂ ಪುರಸಭೆಯ ಆಡಳಿತ ಮಂಡಳಿ ಕಾರ್ಯಪ್ರವೃತ್ತರಾಗಲಿ, ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುವಂತೆ ಮನವಿ ಮಾಡಲಿ ಎಂದರು.
ಪಕ್ಕದ ತಾಲೂಕು ಸವಣೂರಿನ ಮೋತಿ ಲತಾಬ್ ಕೆರೆಯನ್ನು ತುಂಗಭದ್ರಾ ನದಿಯ ನೀರಿನಿಂದ ತುಂಬಿಸುವಲ್ಲಿ ಅಲ್ಲಿನ ಶಾಸಕರು ಮುತುವರ್ಜಿವಹಿಸಿದ್ದಾರೆ. ಅದೇ ರೀತಿಯಾಗಿ ನಮ್ಮ ಪಟ್ಟಣದ ಇಟ್ಟಿಗೆರೆ ಕೆರೆಯನ್ನು ತುಂಬಿಸುವುದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಹಾನಗಲ್ಲ ತಾಲೂಕಿನ ಅನೇಕ ಕೆರೆಗಳನ್ನು ನದಿಯ ನೀರಿನಿಂದ ತುಂಬಿಸುವುದು ಸೂಕ್ತವಾಗಿದ್ದು, ಅದೇ ಪ್ರಯತ್ನ ನಮ್ಮ ತಾಲೂಕಿನಲ್ಲಿ ನಡೆಯಬೇಕಿದೆ ಎಂದರು. ಈ ಸಂದರ್ಭದಲ್ಲಿ ಪ್ರಶಾಂತ ನೆಲುವಿಗಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

