ಹಡಪದ ಅಪ್ಪಣ್ಣ ಜಯಂತಿ: ಹಾಲು, ಹಣ್ಣು ವಿತರಣೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 30
ಇಲ್ಲಿನ ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಮಿತಿಯ ಆಶ್ರಯದಲ್ಲಿ ಹಡಪದ ಅಪ್ಪಣ್ಣ ಜಯಂತಿ ನಿಮಿತ್ತ ಮಂಗಳವಾರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು. ನಾಗನೂರ ರುದ್ರಾಕ್ಷಿಮಠದ ಶ್ರೀಕುಮಾರಸ್ವಾಮಿಗಳು ರೋಗಿಗಳಿಗೆ ಹಣ್ಣು-ಹಾಲು ವಿತರಿಸಿದರು. ಕೊಟ್ರೇಶ ಅಂಗಡಿ, ಪಾಲಾಕ್ಷಿ ಗನದಿನ್ನಿ, ದೇವು ಹಡಪದ, ದೇವರಾಜ ಹಡಪದ, ಮಹೇಶ ಹಡಪದ, ಹುಚ್ಚಪ್ಪ ಹರ್ಲಾಪುರ, ಅಂಬರೇಶ ಹಡಪದ, ಶಂಕರ ಹಡಪದ, ಹನಮಪ್ಪ ಹಡಪದ, ಡಾ. ಶಂಕರ ಭಾವಿಮನಿ, ಜಗದೀಶ ಬರದೂರ, ಶೇಖಪ್ಪ ಹಡಪದ, ಮಂಜು ಹಡಪದ ಇದ್ದರು.
--
ಇಂದು ಧಾರ್ಮಿಕ ಸಭೆ, ಉಪನ್ಯಾಸ
ರೋಣ: ಬಸಮ್ಮ ಸಂಗನಗೌಡ ಪಾಟೀಲ ಇವರ 9ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಜು. 31 ರಂದು ಸಂಜೆ 7 ಗಂಟೆಗೆ ಧಾರ್ಮಿಕ ಸಭೆ ಹಾಗೂ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ಗುಲಗಂಜಿಮಠದ ಗುರಪಾದ ಶ್ರೀಗಳು, ಬಳಗಾನೂರ ಶಿವಶಾಂತವೀರ ಶರಣರು ವಹಿಸುವರು. ಉದ್ಘಾಟನೆಯನ್ನು ಹಿರಿಯ ನ್ಯಾಯವಾದಿ ವಿ.ಆರ್. ಗುಡಿಸಾಗರ ನೆರವೇರಿಸುವರು. ಅಧ್ಯಕ್ಷತೆಯನ್ನು ಸಿ.ಕೆ. ಸುಂಕದ ವಹಿಸುವರು. ಶಾಸಕ ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ ಅವರನ್ನು ಸನ್ಮಾನಿಸಲಾಗುವುದು. ಜಾನಪದದಲ್ಲಿ ತಾಯಿ ವಿಷಯ ಕುರಿತು ಸಿದ್ದಣ್ಣ ಜಕಬಾಳ ಹಾಗೂ ಬಸವಣ್ಣನವರು ಧರ್ಮವನ್ನು ಸಮಾಜಕ್ಕೆ ತಿಳಿಸಿದ ರೀತಿ ವಿಷಯ ಕುರಿತು ಶಿಕ್ಷಕ ಬಿ.ಎಸ್. ಬಸನಗೌಡ್ರ ಅವರಿಂದ ಉಪನ್ಯಾಸ ಜರುಗಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

