ಟ್ಯಾಂಕ್ ಮೂಲಕ ಶೇ. 70 ನೀರು ಪೂರೈಕೆ
ಕನ್ನಡಪ್ರಭ ವಾರ್ತೆ, ಗದಗ, ಜೂ 1
ಅವಳಿ ನಗರದ 34ನೇ ವಾರ್ಡ್ವೊಂದನ್ನು ಹೊರತುಪಡಿಸಿ ಇನ್ನುಳಿದ 34 ವಾರ್ಡ್ಗಳಲ್ಲಿ ಶೇ. 70 ರಷ್ಟು ಕುಡಿಯುವ ನೀರನ್ನು ನಗರದ 10 ಬೃಹತ್ ಟ್ಯಾಂಕ್ ಮೂಲಕ ಪೂರೈಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಸಂಜೆ ಗದಗ-ಬೆಟಗೇರಿ ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೇ 25 ರಿಂದ ಅವಳಿ ನಗರದಲ್ಲಿ 10 ಬೃಹತ್ ಟ್ಯಾಂಕ್ಗಳಿಗೆ ಪ್ರತಿನಿತ್ಯ ನೀರು ತುಂಬಿಸಿ ಜನತೆಗೆ ಪೂರೈಸುವ ಸಂಬಂಧವಾಗಿ ನಡೆಸಿದ ಪ್ರಯೋಗದಲ್ಲಿ ಉತ್ತಮವಾದ ಯಶಸ್ಸು ಕಾಣುತ್ತಿದ್ದು, ಶೇ. 70 ರಷ್ಟು ನೀರು ಈಗಾಗಲೇ ಪೂರೈಸಿದೆ. ಇನ್ನುಳಿದ ಶೇ. 30ರಷ್ಟು ಕಾರ್ಯವನ್ನು ಶೀಘ್ರದಲ್ಲಿ ಪೂರೈಸಿ ಯಶಸ್ಸು ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಯೋಗಿಕವಾಗಿ ಕೈಗೊಂಡ ಯೋಜನೆಯಲ್ಲಿ ಕೆಲವು ಪೈಪ್ಲೈನ್ ಒಡೆದು ಹೋಗಿರುವುದು, ಬಂದ್ ಆಗಿರುವುದು ಹಾಗೂ ನೀರಿನ ಒತ್ತಡ ಕಡಿಮೆಯಾಗಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಅಲ್ಲದೇ ಅವುಗಳನ್ನು ದುರಸ್ತಿಗೊಳಿಸಲು ಬೇಕಾಗಿರುವ ಉಪಕರಣ ಖರೀದಿಸಿ ಶೀಘ್ರದಲ್ಲಿಯೇ ಅವುಗಳನ್ನು ಸರಿಪಡಿಸಿ ನೀರು ಪೂರೈಸಲಿದ್ದಾರೆ.
ಅವಳಿ ನಗರದ 10 ಟ್ಯಾಂಕ್ಗಳಲ್ಲಿ ಈಗಾಗಲೇ 20 ಸಿಸ್ಟನ್ ಅಳವಡಿಸಲಾಗಿದೆ. ಇನ್ನೂ 20 ಸಿಸ್ಟನ್ ಅಳವಡಿಸಲು ಸೂಚಿಸಲಾಗಿದೆ. ಅಂತರ್ಜಲ ಕುಸಿತಗೊಂಡ ಹಿನ್ನೆಲೆಯಲ್ಲಿ 10 ಬೋರ್ವೆಲ್ಗಳನ್ನು ಸ್ವಚ್ಛಗೊಳಿಸಿ ಅಂತರ್ಜಲ ವೃದ್ಧಿಸಲಾಗಿದೆ ಇದರಲ್ಲಿ ಒಂದು ಬೋರ್ವೆಲ್ ವಿಫಲವಾಗಿದೆ.
ನಗರದ ಬೋರ್ವೆಲ್ಗೆ ಅಳವಡಿಸಲು ಈಗಾಗಲೇ 20 ಮೋಟರ್ ಖರೀದಿಸಲಾಗಿದೆ. ಇನ್ನೂ 20 ಮೋಟರ್ ಖರೀದಿಸಲು ಸೂಚಿಸಲಾಗಿದೆ. ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪ್ರಾಯೋಗಿಕವಾಗಿ ಕೈಗೊಂಡ ಕಾರ್ಯ ಯಶಸ್ಸು ಆಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ, ಗದಗ ಉಪವಿಭಾಗಾಧಿಕಾರಿ ಇಸ್ಲಾವುದ್ಧಿನ್ ಗದ್ಯಾಳ, ನಗರಸಭೆ ಸದಸ್ಯ ಭರತ ಇರಾಳ, ಸುರೇಶ ಕಟ್ಟಿಮನಿ, ಎಂ.ಸಿ. ಶೇಖ, ಅನಿಲ ಗರಗ, ಅನಿಲ ಶಿಂಗಟಾಲಕೇರಿ, ಮಂಜುನಾಥ ಪೂಜಾರ, ಉಮರಫಾರೂಕ್ ಹುಬ್ಬಳ್ಳಿ, ಅಶೋಕ ಮಂದಾಲಿ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

