ಮಕ್ಕಳ ಅಂತರಾತ್ಮ ತಲುಪುವಂತೆ ಬೋಧಿಸಿ
ಗಜೇಂದ್ರಗಡ: ಮೌಲ್ಯಾಧಾರಿತ ಅಧ್ಯಯನ ಮೂಲಕ ಸಂಪಾದಿಸಿದ ಜ್ಞಾನವನ್ನು ಮಕ್ಕಳ ಅಂತರಾತ್ಮ ತಲುಪುವಂತೆ ಶಿಕ್ಷಕರು ಬೋಧಿಸಿದಾಗ ಮಕ್ಕಳು ಅಕ್ಷರ ಜ್ಞಾನ ಹೊಂದಲು ಸಾಧ್ಯ. ಸಮುದಾಯದ ಸರ್ವರನ್ನೂ ಸಾಕ್ಷರರನ್ನಾಗಿಸುವ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ ಎಂದು ಉಪನ್ಯಾಸಕ ಎಸ್.ಎನ್. ಶಿವರೆಡ್ಡಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಶಾಲಾ ಮುಖ್ಯೋಪಾಧ್ಯಾಯ ಆರ್.ಕೆ. ಮಾಳೋದೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು.
ಭಾಷಾ ಪ್ರಭುತ್ವ, ಸಚ್ಚಾರಿತ್ರ್ಯೆತೆ ಶಿಕ್ಷಕನಿಗೆ ಅವಶ್ಯಕ. ಕರ್ತವ್ಯ ನಿಷ್ಠೆ ಮೈಗೂಡಿಸಿಕೊಂಡು ಮಕ್ಕಳಿಗೆ ಜ್ಞಾನಾಮೃತ ನೀಡಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಶ್ರಮಿಸಬೇಕು ಎಂದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಆರ್.ಕೆ. ಮಾಳೋದೆ ಮಾತನಾಡಿ, ಶಿಕ್ಷಕರು ಮಕ್ಕಳ ಸಂಬಂಧ ಹಾಲು ಜೇನಿನಂತೆ. ಈ ನಿಟ್ಟಿನಲ್ಲಿ ನಿರ್ಮಲ ಮನಸ್ಸಿನ ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಪಾಠ ಮಾಡಿದಾಗ ಶಿಕ್ಷಣದ ಮೌಲ್ಯ ವೃದ್ಧಿಸುವುದು ಎಂದರು.
ಈ ಸಂದರ್ಭದಲ್ಲಿ ತಮ್ಮ ಸೇವಾವಧಿ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿ ಶಿಕ್ಷಕ ಸಹೋದ್ಯೋಗಿಗಳಿಗೆ ವಂದಿಸಿದರು. ನಂತರ ಸೇವಾ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಆರ್.ಕೆ. ಮಾಳೋದೆಯವರನ್ನು ಸಂಸ್ಥೆಯ ಹಾಗೂ ಶಿಕ್ಷಕವೃಂದದ ಪರವಾಗಿ ಸನ್ಮಾನಿಸಲಾಯಿತು.
ಬಿ.ಎ. ಕೆಂಚರೆಡ್ಡಿ ಎಂ.ಎಂ. ಹಳಿಹಾಳ, ವಿ.ಎಸ್. ರಾಯನಗೌಡರ, ಬಿ.ವಿ. ಮುನವಳ್ಳಿ, ಕೆ.ಎಂ. ವಸ್ತ್ರದ, ಎಂ.ಎಚ್. ರಂಗಣ್ಣನವರ, ಜಿ.ಜಿ. ಬೋವಿ ಮುಂತಾದವರು ಪಾಲ್ಗೊಂಡಿದ್ದರು.
ಕೆ.ಬಿ. ಚಾಗರಿ ಸ್ವಾಗತಿಸಿ, ನಿರೂಪಿಸಿದರು. ಎಸ್.ಎಸ್.ನರೇಗಲ್ಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

