ಸಮಾಜ ಶಕ್ತಿಯಿಂದ ವ್ಯಕ್ತಿ ಹೆಮ್ಮರವಾಗಿ ಬೆಳೆಯಲು ಸಾಧ್ಯ
ಕನ್ನಡಪ್ರಭ ವಾರ್ತೆ, ಗದಗ, ಜೂ. 2
ಸಮಾಜದ ಶಕ್ತಿಯಿಂದ ವ್ಯಕ್ತಿ ಹೆಮ್ಮರವಾಗಿ ಬೆಳೆಯಲು ಸಾಧ್ಯ. ಕವಲುದಾರಿಯ ವೈಮನಸ್ಸನ್ನು ತೊರೆದು ಪ್ರತಿಯೊಬ್ಬರು ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿದ್ಯಾನಿಧಿ ಪ್ರಕಾಶನ ಮಾಲೀಕ ಜಯದೇವ ಮೆಣಸಗಿ ಹೇಳಿದರು.
ಈಚೆಗೆ ಅವರು ನಗರದ ಡಾ. ಎಸ್.ಬಿ.ಗೋವಿಂದಪ್ಪನವರ ಮನೆಯಲ್ಲಿ ನಡೆದ 20ನೇ ಕುರುಬರ ಒಡ್ಡೋಲಗದಲ್ಲಿ ಮಾತನಾಡಿದರು.
ಸಮಾಜವು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಆರ್ಥಿಕವಾಗಿ ಸಬಲರಾದವರು 2 ಮಕ್ಕಳನ್ನು ದತ್ತು ಪಡೆದು ಮಕ್ಕಳಿಗೆ ಶಿಕ್ಷಣ ನೀಡಲು ಮುಂದೆ ಬರುವ ಮೂಲಕ ಸಮಾಜ, ತಂದೆ-ತಾಯಿ, ಗುರುವಿನ ಋಣವನ್ನು ತೀರಿಸಬೇಕು. ಮುಂದಿನ ದಿನಗಳಲ್ಲಿ ಸಂಘಟನೆಯಿಂದ ವಧು-ವರರ ಮಾಹಿತಿ ಕೇಂದ್ರ ಹಾಗೂ ಪ್ರತಿ ವರ್ಷ ಸಮಾವೇಶ, ಮಹಿಳಾ ಘಟಕ, ಪ್ರತಿಭಾ ಪುರಸ್ಕಾರ, ಯುವ ಸಮ್ಮೇಳನ ಮುಂತಾದ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಮಾಜದ ಮುಖಂಡ ರವಿ ದಂಡಿನ ಮಾತನಾಡಿ, ನಮ್ಮಲ್ಲಿರುವ ಕೀಳರಿಮೆಯನ್ನು ಮೊದಲು ಹೋಗಲಾಡಿಸಬೇಕು, ಸ್ವಚ್ಛ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಮಾಜದಿಂದ ನಿರಂತರವಾಗಿ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿ. ಪ್ರಸ್ತುತ ವಸತಿ ನಿಲಯಗಳಲ್ಲಿ ಮಕ್ಕಳಿಗೆ ವಸತಿಯ ಕೊರತೆಯಿದ್ದು, ಸಮಾಜದ ಬಡಮಕ್ಕಳಿಗೆ ಶಿಕ್ಷಣಕ್ಕೆ ಸಹಾಯವಾಗಲು ನಗರದಲ್ಲಿ ಹಾಸ್ಟೆಲ್ ಅಗತ್ಯವಿದೆ. ಎಲ್ಲರ ಸಹಾಯ, ಸಹಕಾರದಿಂದ ಅದನ್ನು ನಿರ್ಮಿಸೋಣ ಎಂದರು.
ಮಾಜಿ ಯೋಧ ಹಾಲಪ್ಪ ಹರ್ತಿ ಮಾತನಾಡಿ, ಪ್ರತಿ ಹಳ್ಳಿಯ ಮನೆ-ಮನೆಗೆ ತೆರಳಿ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ಶಿಕ್ಷಣದಿಂದ ವಂಚಿತರಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅಗತ್ಯವಿದೆ ಎಂದರು. ಬಿ.ಡಿ.ಹರ್ತಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಬಿ.ಗೋವಿಂದಪ್ಪ ಅತಿಥಿಗಳಾಗಿ ಆಗಮಿಸಿದ್ದ ಡಿ.ಎಂ. ಕೆರೂರ ಮಾತನಾಡಿದರು.
ಈ ಸಂದರ್ಭದಲ್ಲಿ ಎನ್.ಎಚ್. ಗುಡಿಸಾಲಿ, ವೈ.ಕೆ.ಚೌಡಾಪುರ, ಎಸ್.ಎಚ್. ಕರಿಯಣ್ಣವರ, ಐ.ಎಚ್.ಹಳಿಯಾಳ ಉಪಸ್ಥಿತರಿದ್ದರು. ರವಿ ಜೋಗಿನ ಸ್ವಾಗತಿಸಿದರು. ಡಾ. ಅಶೋಕ ಮತ್ತಿಗಟ್ಟಿ ನಿರೂಪಿಸಿದರು. ಎಂ.ಬಿ. ದೊಡ್ಡಮನಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

