ಗದಗ

ಸುದ್ದಿ ಸಂಕ್ಷೇಪ

Published On :

ಇಂದಿನಿಂದ ಉರೂಸ್
ನರೇಗಲ್ಲ:
ಜೂ. 3 ರಿಂದ 5 ರವರೆಗೆ ಪಟ್ಟಣದ ಖಲೀಫ ರಹಿಮಾನ್ ಶಾವಲಿ ಶರಣರ 83ನೇ ಉರೂಸ್ ಜರುಗಲಿದೆ. ಜೂ. 3 ರಂದು ಸಂಜೆ 5 ಗಂಟೆಗೆ ಸಮೀಪದ ಕೊಚಲಾಪುರದಿಂದ ಲಕ್ಷ್ಮವ್ವನ ಪಲ್ಲಕ್ಕಿ ಹಾಗೂ ಗಂಧದ ನಿಮಿತ್ತ ಸ್ಥಳೀಯ ತೆಗ್ಗಿನಕೇರಿ ಓಣಿಯ ಮುಜಾವರರ ಮನೆಯಿಂದ ಗಂಧದ ಮೆರವಣಿಗೆ ಹೊರಡುವುದು. ಜೂ. 4ರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸಾಧು ಸಂತರಿಗೆ ಅನ್ನ ಸಂತರ್ಪಣೆ ಹಾಗೂ ಉರೂಸ್‌ನ ಉದ್ಘಾಟನಾ ಸಮಾರಂಭ ಜರುಗಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ದರ್ಗಾದ ಕಲೀಫ ಅಬ್ದುಲ್ ರೆಹಮಾನ್ ಶಾವಲಿಯವರು, ರೋಣದ ಗುಲಗಂಜಿ ಮಠದ ಗುರುಪಾದ ಶ್ರೀಗಳು, ನರೇಗಲ್ಲನ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ನವಲಗುಂದದ ಅಡ್ನೂರು ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯರು, ರೋಣದ ಸಜ್ಜಾದೆ ನಶೀನ ದರ್ಗಾದ ಬಜರತ ಸೈಯ್ಯದ ಷಾ ಸುಲೇಮಾನ ಶ್ಯಾವಲಿಯವರು ವಹಿಸುವರು. ಅಧ್ಯಕ್ಷತೆಯನ್ನು ನಿಡಗುಂದಿಕೊಪ್ಪದ ಶಿವಯೋಗ ಮಂದಿರ ಶಾಖಾಮಠದ ಶಿವಬಸವ ಶ್ರೀಗಳು ವಹಿಸುವರು. ಸಂಜೆ 6 ಗಂಟೆಗೆ ದೀಪೋತ್ಸವ ಹಾಗೂ ಮದ್ದು ಹಾರಿಸುವುದು ಮತ್ತು ಧಾರ್ಮಿಕತೆ ಕುರಿತು ಕಾರ್ಯಕ್ರಮ ಜರುಗಲಿದೆ. ಜೂ. 5ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮರಿ ಉರೂಸ್ ಜರುಗಲಿದೆ. ಜೂ. 3 ರಿಂದ 5ರ ವರೆಗೆ ಪ್ರತಿದಿನ ರಾತ್ರಿ 10 ಗಂಟೆಗೆ ಖವ್ವಾಲಿ ಹಾಡುಗಳು ಜರುಗುವವು ಎಂದು ದರ್ಗಾದ ಪ್ರಕಟಣೆ ತಿಳಿಸಿದೆ.
ಸದಸ್ಯತ್ವ ನವೀಕರಣಕ್ಕೆ ಅರ್ಜಿ ಆಹ್ವಾನ
ರೋಣ:
ಕೇಂದ್ರ ಸಂಘದ ಆದೇಶದ ಮೇರೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲ ಇಲಾಖೆಗಳ ಎಲ್ಲ ಹಂತದ ಸಾರ್ವತ್ರಿಕ ಚುನಾವಣೆಯು ಜುಲೈ ತಿಂಗಳಲ್ಲಿ ನಿಗದಿಪಡಿಸಿಲಾಗಿದೆ. ತಾಲೂಕಿನ  ಎಲ್ಲ ಸರ್ಕಾರಿ ನೌಕರರು 2012-13ನೇ ಸಾಲಿನ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ರು. 100 ಸದಸ್ಯತ್ವ ವಂತಿಗೆಯನ್ನು ನೀಡಿ ಸದಸ್ಯತ್ವ ನವೀಕರಿಸಿ ಮುಂಬರುವ ದಿನಗಳಲ್ಲಿ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರೋಣ ತಾಲೂಕು ಘಟಕದ ಅಧ್ಯಕ್ಷ ಜಗದೀಶ ಮಡಿವಾಳರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಗದಗ:
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೋರ್ವಳು ಜೀವನದಲ್ಲಿ ಜಿಗುಪ್ಸೆ ಹೊಂದಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಮೃತ ಮಹಿಳೆಯನ್ನು ಲಕ್ಕುಂಡಿ ಗ್ರಾಮದ ನಿವಾಸಿ ಶೋಭಾ ಹರ್ಲಾಪುರ (35) ಎಂದು ಗುರುತಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಪೂರ್ವಭಾವಿ ಸಭೆ
ನರೇಗಲ್ಲ:
ಜೂ. 3ರ ಸಂಜೆ 5ಕ್ಕೆ ಸ್ಥಳೀಯ ಶ್ರೀ ರೇಣುಕಾಚಾರ್ಯ ಪೂರ್ವಪ್ರಾಥಮಿಕ ಶಾಲೆಯಲ್ಲಿ ರೋಣ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದು, ತಾಲೂಕಿನ ಎಲ್ಲ ಪದಾಧಿಕಾರಿಗಳು ಸಾಹಿತ್ಯಾಸಕ್ತರು ಹಾಗೂ ತಾಲೂಕು ಪದಾಧಿಕಾರಿಗಳು ಭಾಗವಹಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11ರಂದು ಸಮಿತಿ ಸಭೆ
ಗದಗ: 
ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರು ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಅಧ್ಯಕ್ಷತೆಯಲ್ಲಿ ಜೂ. 11ರಂದು ಬೆಳಗ್ಗೆ 11 ಗಂಟೆಗೆ ಗದಗ ಜಿಪಂ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು  ತಿಳಿಸಿದ್ದಾರೆ.
ತರಬೇತಿಗೆ ಆಹ್ವಾನ
ಗದಗ:
ಜೈ ವಿಜಯ ಶಿಕ್ಷಣ ಸಂಸ್ಥೆಯ ವೃತ್ತಿ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಂತಹ ಕಂಪ್ಯೂಟರ್ ಕೋರ್ಸ್‌ಗಳ ತರಬೇತಿಗಳನ್ನು ಜೂನ್ 5 ರಿಂದ ಪ್ರಾರಂಭಿಸಲಾಗುವುದು. ಆಸಕ್ತಿವುಳ್ಳವರು ಜೈ ವಿಜಯ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ಮೊದಲನೇ ಮಹಡಿ, ಅರಳಿ ಬಿಲ್ಡಿಂಗ್ 3ನೇ ಅಡ್ಡರಸ್ತೆ ಗದಗ. ಮೊ. 9480619808, 7899927036 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.