ನಾಳೆಯಿಂದ ಬೂದೀಶ್ವರ ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ, ಗದಗ, ಜೂ. 3
ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಬಸವ ಜಯಂತಿ ಆಚರಣೆ ಶತಮಾನೋತ್ಸವ, ಬೂದೀಶ್ವರ ಶ್ರೀಗಳ 154ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ, ಸಾಮೂಹಿಕ ವಿವಾಹ ಮತ್ತು ಶರಣ ಸಂಸ್ಕೃತಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳನ್ನು ಜೂ. 5ರಿಂದ 8ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೊಸಳ್ಳಿಯ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.
ಅವರು ಸೋಮವಾರ ಸಂಜೆ ನಗರದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಲಘು ರಥೋತ್ಸವ: ಜೂ. 4ರಂದು ಬಸವ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ. ಜೂ. 5ರಂದು ಬೆಳಗ್ಗೆ 11.30 ಗಂಟೆಗೆ ಶರಣಮ್ಮ ಮಹಾಲಕ್ಷ್ಮೀದೇವಿ ಪೂಜೆ ನೆರವೇರಲಿದೆ. ಸಂಜೆ 5 ಗಂಟೆಗೆ ಲಘು ರಥೋತ್ಸವ ಜರುಗಲಿದೆ. ಜೂ. 6ರಂದು ಬೆಳಗ್ಗೆ 10.30 ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಕಮತಗಿ ಕೋಟೇಕಲ್ನ ಹುಚ್ಚೀರೇಶ್ವರ ಸಂಸ್ಥಾನ ಮಠದ ಹುಚ್ಚೀರೇಶ್ವರ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣ ಮಠದ ಶಿವಶಾಂತವೀರ ಶ್ರೀಗಳು ವಹಿಸುವರು. ಅತಿಥಿಗಳಾಗಿ ಅನಿಲ ಮೆಣಸಿನಕಾಯಿ, ಸದಾಶಿವಯ್ಯ ಮದರಿಮಠ, ವಿಜಯಕುಮಾರ ಗಡ್ಡಿ, ರಾಜು ಕುರಡಗಿ, ರೇವಣಪ್ಪ ಕೊಂಡಿಕೊಪ್ಪ, ಅಪ್ಪಣ್ಣ ಇನಾಮತಿ, ಗಿರೀಶ ಡಬಾಲಿ, ಸಿ.ಬಿ. ಕರಿಕಟ್ಟಿ ಮಂತಾದವರು ಆಗಮಿಸುವರು. ಬೆಳಗ್ಗೆ 11.30 ಗಂಟೆಗೆ ಮಹಾಪ್ರಸಾದ ನೆರವೇರಲಿದೆ. ಮಧ್ಯಾಹ್ನ 3.30 ಗಂಟೆಗೆ ಜಂಗಮೋತ್ಸವ ಕಾರ್ಯಕ್ರಮ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವೈಭವಗಳೊಂದಿಗೆ ಸಾಗಿ ಶ್ರೀಮಠಕ್ಕೆ ತಲುಪುವುದು. ಸಂಜೆ 6.15 ಗಂಟೆಗೆ ಬೂದೀಶ್ವರ ಶ್ರೀಗಳ ರಥೋತ್ಸವವ ಹರ-ಗುರು-ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಜರುಗುವುದು.
ಸಂಜೆ 6.30 ಗಂಟೆಗೆ ಅನುಭವ ಮಂಟಪದ ಅಡಿಗಲ್ಲು ಸಮಾರಂಭ ಹಾಗೂ ಮುಂಡರಗಿ ಅನ್ನದಾನೀಶ್ವರ ಮಠದ ಅನ್ನದಾನ ಶ್ರೀಗಳ ಗುರುವಂದನಾ ಕಾರ್ಯಕ್ರಮ ಜರುಗಲಿದೆ.
ಸಾನ್ನಿಧ್ಯವನ್ನು ಮುರುಗೋಡ ದುರದುಂಡೇಶ್ವರ ಮಠದ ನೀಲಕಂಠೇಶ್ವರ ಶ್ರೀಗಳು, ಹಾವನೂರಿನ ಶಿವಕುಮಾರ ಶ್ರೀಗಳು ವಹಿಸುವರು. ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಗೌರವ ಸಮರ್ಪಣೆ ಜರುಗಲಿದೆ. ನಂತರ ಶ್ರೀಮಠದಿಂದ ನೂತನವಾಗಿ ಕೊಡಮಾಡುವ ಹೊಸಹಳ್ಳಿ ಶ್ರೀ ಗುರುಕಾರುಣ್ಯ ಪ್ರಶಸ್ತಿಯನ್ನು ಸಂತ ಶಿಕ್ಷಕ ಬಿ.ಜಿ. ಅಣ್ಣಿಗೇರಿ ಅವರಿಗೆ ನೀಡಲಾಗುವುದು. ನಂತರ ಬಸವಣ್ಣ, ವಿವೇಕಾನಂದರ ಒಂದು ಚಿಂತನ ಕುರಿತು ಹುನ್ನೂರು-ಮದರಖಂಡಿಯ ಬಸವಜ್ಞಾನ ಗುರುಕುಲದ ಉಪನ್ಯಾಸಕ ಈಶ್ವರ ಮಂಟೂರ ಅವರಿಂದ ಉಪನ್ಯಾಸ ಜರುಗಲಿದೆ.
ಕಡುಬಿನ ಕಾಳಗ: ಜೂ. 7ರಂದು ಸಂಜೆ 5.30 ಗಂಟೆಗೆ ಅಭಿನವ ಬೂದೀಶ್ವರ ಶ್ರೀಗಳಿಂದ ಕಡುಬಿನ ಕಾಳಗ ಜರುಗಲಿದೆ. ನಂತರ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ಧರಾಮ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ ಜರುಗಲಿದೆ.
ಅಧ್ಯಕ್ಷತೆಯನ್ನು ಮುನವಳ್ಳಿ-ಮಂಡಾರ ಹಳ್ಳಿಯ ಸೋಮಶೇಖರ ಮಠದ ಮುರುಘರಾಜೇಂದ್ರ ಶ್ರೀಗಳು ವಹಿಸುವರು. ಹೂವಿನಶಿಗ್ಲಿಯ ಚನ್ನವೀರ ಶ್ರೀಗಳಿಂದ ನುಡಿನಮನ ಜರುಗಲಿದೆ.
ಜೂ. 8ರಂದು ಸಂಜೆ 5.30 ಗಂಟೆಗೆ ಮಾಸಿಕ ಶಿವಾನುಭವ ಹಾಗೂ ಜಾತ್ರಾ ಮಂಗಲೋತ್ಸವ ಜರುಗಲಿದ್ದು, ಸಾನ್ನಿಧ್ಯವನ್ನು ಹೊಸಳ್ಳಿಯ ಅಭಿನವ ಬೂದೀಶ್ವರ ಶ್ರೀಗಳು ವಹಿಸುವರು ಎಂದರು. ಸುದ್ದಿಗೋಷ್ಟಿಯಲ್ಲಿ ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

