ಗದಗ

ಬದುಕುವುದು ಒಂದು ಕಲೆ: ಸ್ವಾಮೀಜಿ

Published On :

ಗದಗ: ಬದುಕುವುದು ಒಂದು ಕಲೆ, ಎಷ್ಟು ವರ್ಷ ಮನುಷ್ಯ ಬದುಕಿದ ಎನ್ನುವುದು ಮುಖ್ಯವಲ್ಲ, ಹೇಗೆ ಬದುಕಿದ, ಎಷ್ಟು ಜನರಿಗೆ ಉಪಕಾರಿಯಾಗಿದ್ದ ಎನ್ನುವುದು ಮುಖ್ಯವಾಗುತ್ತದೆ ಎಂದು ಹೊಸಳ್ಳಿಯ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.
ಈಚೆಗೆ ಅವರು ನಗರದ ಪ್ರೊಬಸ್ ಕ್ಲಬ್ ಗದಗ-ಬೆಟಗೇರಿ ಇದರ ರಜತಮಹೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಪ್ರೊಬಸ್ ಕ್ಲಬ್ ಹಿರಿಯ ಸದಸ್ಯರ ಬದುಕು ಕಿರಿಯರಿಗೆ ಮಾದರಿಯಾಗಿದೆ. ಸಂಘಟನೆ ಮೂಲಕ ಅವರು ಸಮಾಜದಲ್ಲಿ ಕ್ರಿಯಾಶೀಲತೆಯಿಂದ ಸಾಗುವುದು ಇತರರಿಗೆ ಮಾದರಿಯಾದ ಕಾರ್ಯ ಎಂದರು. ನೇತೃತ್ವ ವಹಿಸಿದ್ದ ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ಕ್ಲಬ್‌ನ ಕಾರ್ಯಚಟುವಟಿಕೆ, ಸದಸ್ಯರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿ ಅಭಿನಂದಿಸಿದರು.
ಬಸಯ್ಯಶಾಸ್ತ್ರಿ ಹಿರೇಮಠ ಮಾತನಾಡಿದರು. ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕ ಡಾ. ಉಮೇಶ ಪುರದ, ಹಿರಿಯರು ಅನುಭವಿಸುವ ಅನಾರೋಗ್ಯದ ವಿವರ ನೀಡಿ ವಿವಿಧ ಪರಿಹಾರ ಮಾರ್ಗವನ್ನು ತಿಳಿಸಿಕೊಟ್ಟರು. ಪ್ರೊಬಸ್ ಕ್ಲಬ್ ಅಧ್ಯಕ್ಷ ಎಸ್.ಟಿ. ಜಕ್ಕನಗೌಡರು ಅಧ್ಯಕ್ಷತೆ ವಹಿಸಿದ್ದರು. ಪ್ರೊಬಸ್ ಕ್ಲಬ್‌ನ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಪಿ.ಸಿ. ಕತ್ತಿಶೆಟ್ಟರ ಅಧ್ಯಕ್ಷರಿಗೆ ಕಾಲರ್ ಧಾರಣೆ ಮಾಡಿದರು. ಅಕ್ಕಮ್ಮ ಗುರುಸ್ವಾಮಿಮಠ ಪ್ರಾರ್ಥಿಸಿದರು. ಪ್ರೊ. ಕೆ.ಎಚ್. ಬೇಲೂರ ಸ್ವಾಗತಿಸಿದರು. ಅಂದಾನೆಪ್ಪ ವಿಭೂತಿ ನಿರೂಪಿಸಿದರು. ಎಸ್.ಎ. ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.