ಉತ್ತಮ ಸೇವಾ ಗುಣ ಬೆಳೆಸಿಕೊಳ್ಳಲು ಕರೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 4
ಒಬ್ಬ ವ್ಯಕ್ತಿ ಯಾವುದೇ ಹುದ್ದೆಯಲ್ಲಿದ್ದು ತನ್ನ ಸೇವಾ ಅವಧಿಯಲ್ಲಿ ಆತನು ಮಾಡಿರುವ ಉತ್ತಮ ಕಾರ್ಯಗಳಿಂದ ಆತನನ್ನು ಜನರು ಸದಾಕಾಲ ಸ್ಮರಣೆಯಲ್ಲಿರುತ್ತಾರೆ. ಅಧಿಕಾರದಲ್ಲಿದ್ದಾಗ ಮಾಡುವ ಉತ್ತಮ ಸೇವೆ ಮಾಡುವ ಗುಣಗಳನ್ನು ಎಲ್ಲ ನೌಕರ ವರ್ಗದವರು ಬೆಳೆಸಿಕೊಳ್ಳಬೇಕಾಗಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯ ಪಟ್ಟರು.
ಅವರು ಭಾನುವಾರ ಪಟ್ಟಣದ ಕೆಎಸ್ಆರ್ಟಿಸಿ ಘಟಕದಲ್ಲಿ ನಡೆದ ಸಾರಿಗೆ ಸಿಬ್ಬಂದಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿ ಸನ್ಮಾನಿಸಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಅಧ್ಯಾಪಕ ಡಾ. ಜಿ.ಎಸ್.ಕೋಟಿಮಠ ಮಾತನಾಡಿ, ಜನತೆಯ ಹಿತದೃಷ್ಟಿಯಿಂದ ಸೇವೆ ಸಲ್ಲಿಸುವಂತಹ ಸೌಭಾಗ್ಯ ಎಲ್ಲರಿಗೂ ದೊರಕುವುದಿಲ್ಲ, ಆದರೆ ಅಂತಹ ಭಾಗ್ಯ ದೊರೆತಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಉತ್ತಮ ಸೇವೆ ನೀಡಿ ಸಂಸ್ಥೆಯ ಹಿರಿಯ ಕಿರಿಯ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಂದಾಗಲೆ ನಾವು ಮಾಡುತ್ತಿರುವ ಸೇವೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.
ನಿಷ್ಠೆಯಿಂದ ಸೇವೆ ಸಲ್ಲಿಸಿ ನಿವೃತ್ತಿಯಾದವರನ್ನು ಗೌರವಿಸುವಂತೆ ನಾವಾಗಬೇಕು. ಈ ದಿಸೆಯಲ್ಲಿ ಇಲ್ಲಿನ ನೌಕರ ವರ್ಗ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಘಟಕ ವ್ಯವಸ್ಥಾಪಕ ನಿತೀನ್ ಗಡದೆ ಹಾಗೂ ಎಸ್.ಎಸ್. ಪಡಸಾಲಿ ಅವರು ಶಾಸಕರಿಗೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ವಿಜಯ ಕುಂಬಿ, ಅಮರೇಶ ತೆಂಬದಮನಿ, ಪಿ.ಬಿ. ಕೆರಿ, ಬಸವರಾಜ ಮಜ್ಜಿಗುಡ್ಡದ, ಕಾರ್ಮಿಕ ಮುಖಂಡ ವೈ.ಆರ್.ಮಾಳವಾಡ ಮುಂತಾದವರು ಉಪಸ್ಥಿತ ರಿದ್ದರು.
ಸಾರಿಗೆ ಸಂಸ್ಥೆಯಲ್ಲಿ 37 ವರ್ಷಗಳಿಂದ ಚಾಲಕರಾಗಿ ಸೇವೆ ಸಲ್ಲಿಸಿದ ಎಸ್.ಪಿ. ಬಾಳೇಶ್ವರಮಠ, ಸಿ.ವಿ. ಬೆಟಗೇರಿ, ಜ್ಯೂ. ಅಸಿಸ್ಟಂಟ್ ಆಗಿ 20 ವರ್ಷಗಳಿಂದ ಸೇವೆ ಸಲ್ಲಿಸಿದ ಎಸ್.ಜಿ. ಜನಿವಾರದ, 40 ವರ್ಷಗಳಿಂದ ಸೇವೆ ಸಲ್ಲಿಸಿದ ಎಂ.ಎಸ್. ಗಜಾಕೋಶ, 32 ವರ್ಷಗಳಿಂದ ಕುಶಲಕರ್ಮಿಯಾಗಿ ಸೇವೆ ಸಲ್ಲಿಸಿದ ವಿ.ಎನ್. ಹಣಗಿ, ಈ 5 ಜನ ಸಿಬ್ಬಂದಿ ಹಾಗೂ ಗದಗ ಟಿ.ಸಿ. ಆಗಿದ್ದ ಆರ್.ಸಿ.ಕುಲಕರ್ಣಿ ಅವರನ್ನು ಸಂಸ್ಥೆಯ ಸಿಬ್ಬಂದಿ ವತಿಯಿಂದ ಗೌರವಿಸಲಾಯಿತು. ಬಿ.ವಿ. ವಡಕಣ್ಣವರ ಸ್ವಾಗತಿಸಿ, ವಂದಿಸಿದರು. ಸಿ.ಆರ್.ಹಿರೇಮಠ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

