ಗದಗ

ನೌಕರರಿಗೆ ಕಾಯಕ ನಿಷ್ಠೆ ಅಗತ್ಯ: ಕಾಳಪ್ಪನವರ

Published On :

ರೋಣ: ಸರ್ಕಾರಿ ನೌಕರರು ವೃತ್ತಿ ಜೀವನದ ಸಾರ್ಥಕತೆಗೆ ಕಾಯಕ ನಿಷ್ಠೆ, ಪ್ರಾಮಾಣಿಕತೆ, ಸೇವಾ ಮನೋಭಾವನೆ ಹೊಂದಿ ಅದರಂತೆ ನಡೆದುಕೊಳ್ಳುವುದು ಅತ್ಯಗತ್ಯ ಎಂದು ಪಂಚಾಯತ್ ರಾಜ್ ಎಂಜಿನಿಯರ್ ಉಪವಿಭಾಗದ ಎಇಇ ವಿ.ಕೆ. ಕಾಳಪ್ಪನವರ ಹೇಳಿದರು.
ಅವರು ಶುಕ್ರವಾರ ಸಂಜೆ ತಾಪಂ ಸಭಾಭವನದಲ್ಲಿ ತಾಪಂ ಸದಸ್ಯರು, ಕಾರ್ಯಾಲಯ ಸಿಬ್ಬಂದಿ, ಪಂಚಾಯತ್ ರಾಜ್ ಉಪವಿಭಾಗದ ಎಂಜಿನಿಯರ್ ಮತ್ತು ಸಿಬ್ಬಂದಿ ಇವರಗಳು ಏರ್ಪಡಿಸಿದ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಇಓ ಎಸ್.ಎಂ. ರುದ್ರಸ್ವಾಮಿ,  ಪಂಚಾಯತ್ ರಾಜ್ ಉಪವಿಭಾಗದ ಪ್ರಭಾರಿ ಎಂ.ಡಿ. ತೋಗುಣಸಿ ಮಾತನಾಡಿದರು. ತಾಪಂನ ಮಾಜಿ ಉಪಾಧ್ಯಕ್ಷ ದಶರಥ ಗಾಣಿಗೇರ, ತಾಪಂ ಸದಸ್ಯೆ ಗಾಯತ್ರಿ ನಾಗನೂರ, ಮಾಲಾನಭಿ ಗಡಾದ, ಶಿವಕುಮಾರ ಸಾಲಮನಿ, ಎಸ್.ಕೆ. ಹಾಳಕೇರಿ, ಎಸ್.ಎಸ್. ಮೇಗೂರ, ಮಲ್ಲಪ್ಪ ಪೂಜಾರ, ಬಿ.ಬಿ. ಅನಸಾರಿ, ಹೊನ್ನಮ್ಮ ಕಾಳಪ್ಪನವರ, ಬಿ.ವಿ. ಯಲಿಗಾರ, ಎಂ.ಎನ್. ಓಲೇಕಾರ ಇದ್ದರು. ಎಂ.ವಿ. ಅರಳಿಕಟ್ಟಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.