ಸುದ್ದಿ ಸಂಕ್ಷೇಪ
ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿ: ಕುಲಕರ್ಣಿ
ಗದಗ: ಸರ್ಕಾರ ಅಥವಾ ಬ್ಯಾಂಕ್ ನೀಡಿದ ಸಾಲವನ್ನು ಗ್ರಾಹಕರು ಪ್ರಾಮಾಣಿಕವಾಗಿ ಮರುಪಾವತಿಸಿ ಸಾಲ ಸದುಪಯೋಗ ಪಡಿಸಿಕೊಂಡು ಬ್ಯಾಂಕ್ನ್ನು ಅಭಿವೃದ್ಧಿಪಡಿಸಲು ಸಹಕರಿಸಬೇಕೆಂದು ಸಿಂಡಿಕೇಟ್ ಬ್ಯಾಂಕ್ ಪ್ರಭಂದಕ ಎನ್.ಎಸ್. ಕುಲಕರ್ಣಿ ಹೇಳಿದರು. ಈಚೆಗೆ ಅವರು ತಾಲೂಕಿನ ಲಕ್ಕುಂಡಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಮಾವೇಶದಲ್ಲಿ ಮಾತನಾಡಿದರು. ಸಿಂಡಿಕೇಟ್ ಬ್ಯಾಂಕ್ ರೈತರ, ಹಿಂದುಳಿದವರ ಅಭಿವೃದ್ಧಿಗಾಗಿ ಆರ್ಥಿಕವಾಗಿ ಸಹಾಯ ನೀಡಲಿದ್ದು, ಸರ್ಕಾರ ನೀಡುವ ಸಬ್ಸಿಡಿ ಹಾಗೂ ಇತರೆ ಸಾಲವನ್ನು ಸದುಪಯೋಗಪಡಿಸಿಕೊಂಡು ಪ್ರಾಮಾಣಿಕವಾಗಿ ಸಾಲ ಮರುಪಾವತಿಸಬೇಕೆಂದು ವಿನಂತಿಸಿ, 2012-13ರ ಬ್ಯಾಂಕಿನ ಸಾಧನೆ ವಿವರಿಸಿದರು. ರೈತ ಮುಖಂಡ ರಮೇಶ ಹಳ್ಳಿ, ಎ.ಎಂ. ಹಂದ್ರಾಳ, ಯಮನಪ್ಪ ಈಳಿಗೇರ ಅವರು ಬ್ಯಾಂಕಿನ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಹಾಯಕ ಪ್ರಭಂದಕ ಅಲ್ತಾಫ್ ಅವರು ಬ್ಯಾಂಕಿನ ವಿವಿಧ ಸೇವೆಗಳು ಹಾಗೂ ಸಾಲ ಸೌಲಭ್ಯಗಳ ಕುರಿತು ವಿವರಿಸಿದರು. ಅಥಿತಿಗಳಾಗಿ ಸಿ.ಟಿ. ಪಾಟೀಲ ಆಗಮಿಸಿದ್ದರು. ಹನುಮೇಶ ಎಂ.ಜಿ. ಸ್ವಾಗತಿಸಿದರು. ಶಿಲ್ಪಾ ಶಿಲ್ಲೆದಾರ ವಂದಿಸಿದರು.
ಜೂಜಾಟ: 7 ಜನರ ಬಂಧನ
ಗದಗ: ತಾಲೂಕಿನ ನಾಗಾವಿ ಗುಡ್ಡದಲ್ಲಿ ಇಸ್ಪೀಟ್ ಆಡುತ್ತಿದ್ದ 7 ಜನರನ್ನು ಬಂಧಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಆರೋಪಿಗಳು ಗುಡ್ಡದ ಭಾಗದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆಯಲ್ಲಿ ದಾಳಿ ಮಾಡಿದ ಗದಗ ಗ್ರಾಮೀಣ ಪೊಲೀಸರು ಆರೋಪಿಗಳನ್ನು ಬಂಧಿಸುವುದರೊಂದಿಗೆ ರು. 30 ಸಾವಿರ ನಗದು, 10 ಬೈಕ್ ಹಾಗೂ 5 ಮೊಬೈಲ್ ಸೇರಿದಂತೆ ಇಸ್ಪೀಟ್ ಆಟದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಗದಗ ಗ್ರಾಮೀಣ ಪಿಎಸ್ಐ ಆನಂದ ವಣಗುದರಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಬಂಧಿತರಲ್ಲಿ ಬಹುತೇಕರು ಗದಗ ಮೂಲದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

