ಗದಗ

ಮಳೆ: ಮನೆಗಳಿಗೆ ನುಗ್ಗಿದ ನೀರು

Published On :

ಕೊಟ್ಟೂರು: ಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ರಭಸದ ಮಳೆ ಪಟ್ಟಣದ ನಾಗರಿಕರನ್ನು ಬಹುವಾಗಿ ಫಜೀತಿಗೆಡಿಸಿತ್ತು.
ಗುಡುಗು, ಮಿಂಚುಗಳ ಆರ್ಭಟಗಳೊಂದಿಗೆ ಆರಂಭಗೊಂಡ ಮಳೆ ಒಂದೇ ಸಮನೆ ಅರ್ಧಗಂಟೆವರೆಗೂ ಸುರಿದ ಪರಿಣಾಮ ಪಟ್ಟಣದಲ್ಲಿನ ಅನೇಕ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿತು.
ಇಲ್ಲಿನ ಅಂಬೇಡ್ಕರ್‌ನಗರ, ಶ್ರೀ ತೇರುಬಯಲು ಬಸವೇಶ್ವರ ದೇವಸ್ಥಾನದ ಎಡಭಾಗ, ಮುದುಕನಕಟ್ಟೆ, ಬಳ್ಳಾರಿ ಕ್ಯಾಂಪ್, ಜಯಪ್ರಕಾಶ ನಾರಾಯಣ ಕಾಲೋನಿ, ರಾಜೀವ್ ಗಾಂಧಿನಗರ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ತೊಂದರೆ ಉಂಟುಮಾಡಿತು. ಈ ನಿವಾಸದ ಜನತೆ ಮನೆಗಳಿಗೆ ಹೊಕ್ಕ ನೀರನ್ನು ಹೊರಸಾಗಿಸಲು ಹರಸಾಹಸ ಪಟ್ಟರು.
ತಡವಾಗಿಯಾದರೂ ಎಚ್ಚೆತ್ತ ಪಟ್ಟಣ ಪಂಚಾಯಿತಿ ಸಿಬ್ಬಂದಿ ಚರಂಡಿಗಳನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಶುಕ್ರವಾರ ಆರಂಭಗೊಳಿಸಿದರು.
ಭೇಟಿ: ಮಳೆ ನೀರು ಹೊಕ್ಕ ಪಟ್ಟಣದ ತೇರುಬಯಲು ಬಸವೇಶ್ವರ ದೇವಸ್ಥಾನದ ಹಿಂಭಾಗದ ಪ್ರದೇಶಗಳಿಗೆ ಕೂಡ್ಲಿಗಿ ತಾಲೂಕು ತಹಸೀಲ್ದಾರ್ ಜವರೇಗೌಡ ಭೇಟಿ ನೀಡಿ ಪರಿಶೀಲಿಸಿದರು.
ಪಪಂ ಮುಖ್ಯಾಧಿಕಾರಿ ಹನುಮಂತಮ್ಮ ಕಿರಿಯ ಎಂಜಿನಿಯರ್ ಅರುಣಾ ಪಾಟೀಲ್, ಜೊತೆಗಿದ್ದು ತಕ್ಷಣವೇ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ತೊಡಗಿಸಿಕೊಳ್ಳುತ್ತೇವೆ ಎಂದು ಜನತೆಗೆ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.