ಗದಗ

ಗುಟ್ಕಾ ಮಾರಾಟ ಅಂಗಡಿ ಮೇಲೆ ದಾಳಿ

Published On :

ರೋಣ: ರಾಜ್ಯದಲ್ಲಿ ಗುಟ್ಕಾ ನಿಷೇಧ ಕುರಿತು ಕಟ್ಟುನಿಟ್ಟಿನ ಆದೇಶವಿದ್ದರೂ, ಮಾರಾಟದಲ್ಲಿ ತೊಡಗಿದ್ದ ಅಂಗಡಿಗಳಿಗೆ ಗುಟ್ಕಾ ನಿಷೇಧ ಕಾಯ್ದೆ ತಾಲೂಕು ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಎಂ.ಬಿ. ಪಾಟೀಲ್ ನೇತೃತ್ವದ ತಂಡ ಶನಿವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿ ಅಪಾರ ಪ್ರಮಾಣದ ಗುಟ್ಕಾ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಗ್ಯ ಇಲಾಖೆ, ಆರಕ್ಷಕ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯನ್ನೊಳಗೊಂಡ ತಹಸೀಲ್ದಾರ್ ನೇತೃತ್ವದ ತಂಡವು ಪಟ್ಟಣದ ಪೋತರಾಜನ ಕಟ್ಟೆ, ಮುಲ್ಲಾನಬಾವಿ ವೃತ್ತ, ಸೂಡಿ ವೃತ್ತದ ಹತ್ತಿರದ ಹಾಗೂ ಪುರಸಭೆ ಮಳಗಿಯಲ್ಲಿನ ಗುಟ್ಕಾ ಮಾರಾಟ ಅಂಗಡಿ ಮತ್ತು ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿ ಗುಟ್ಕಾ ಪ್ಯಾಕೆಟ್ ವಶಪಡಿಸಿಕೊಂಡು, ಮಾರಾಟಗಾರರ ಎದುರಲ್ಲಿಯೇ ಅಂಗಡಿಗೆ ಸೀಲ್ ಮಾಡಲಾಯಿತು.
ಎಚ್ಚರಿಕೆ: ಪ್ರತಿಯೊಂದು ಅಂಗಡಿಗಳನ್ನು ಜಾಲಾಡಿ ಗುಟ್ಕಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡ ತಂಡ, ಈಗಾಗಲೇ ಮಾಧ್ಯಮಗಳ ಮೂಲಕ ಎಚ್ಚರಿಸಿದರೂ ಈಗಲೂ ಮಾರಾಟ ಮಾಡುತ್ತಿದ್ದೀರಿ, ನಿಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು. ದಾಳಿ ಸಂದರ್ಭದಲ್ಲಿ ಗುಟ್ಕಾ ನಿಷೇಧ ಕಾಯ್ದೆ ತಾಲೂಕು ಸಮಿತಿ ಕಾರ್ಯದರ್ಶಿ, ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಬಿ. ಭಜಂತ್ರಿ, ಕಂದಾಯ ನಿರೀಕ್ಷಕ ಯು.ಜಿ. ಕೊಪ್ಪದ, ಕುಮಾರಸ್ವಾಮಿ ಹಿರೇಮಠ, ರಾಮಜಿ ರಡ್ಡೇರ, ಬಿ.ಎಸ್. ಬೇವಿನಗಿಡದ, ಬಾಗಲಿ, ಎ.ಎಸ್.ಐ. ದೊಡ್ಡಮನಿ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
ಸ್ಥಳಾಂತರವಾಗದ ಗುಟ್ಕಾ ಚೀಟಿ: ಸರ್ಕಾರ ಗುಟ್ಕಾ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಿಯೂ ಗುಟ್ಕಾ ಮಾರಾಟ ಮಾಡುವಂತಿಲ್ಲ. ಅಕ್ರಮವಾಗಿ ಕದ್ದುಮುಚ್ಚಿ ಮಾರಾಟ ಮಾಡಿದಲ್ಲಿ ಅಂಥ ಅಂಗಡಿಗಳನ್ನು ಸೀಜ್ ಮಾಡಲಾಗುವದು. ವಾಮಮಾರ್ಗ ಅನುಸರಿಸಿ ಗುಟ್ಕಾ ಮಾರಾಟ ಮಾಡದೇ, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ವ್ಯಾಪಾರಸ್ಥರ ಸಹಕಾರ ಅಗತ್ಯವಾಗಿದೆ.
ಗುಟ್ಕಾ ಮಾರಾಟ ಮತ್ತು ದಾಸ್ತಾನಗಳ ಮೇಲೆ ದಾಳಿ ನಡೆಯುತ್ತಿದಂತೆ ಹಲವಾರು ಅಂಗಡಿಕಾರರು ತಮ್ಮ ಅಂಗಡಿಯಲ್ಲಿನ ಗುಟ್ಕಾ ಚೀಟಿಗಳನ್ನು ಬೇರೆಡೆ ಸ್ಥಳಾಂತರಿಸಿದರು. ಸುದ್ದಿ ಪಟ್ಟಣದ ತುಂಬೆಲ್ಲ ಹಬ್ಬುತ್ತಿದಂತೆ ಗುಟ್ಕಾ ದಾಸ್ತಾನು ಮಾಡಿದ ಕೆಲ ಅಂಗಡಿಗಳನ್ನು ಮಾರಾಟಗಾರರು ಬಂದ್ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.