ಪ್ರತಿಯೊಬ್ಬರೂ ಕ್ರೀಡಾಮನೋಭಾವ ಹೊಂದಲಿ: ಬಸವಂತಪ್ಪ ತಳವಾರ
ಹೊಳೆಆಲೂರ: ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾದ ಅಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.
ಈಚೆಗೆ ಅವರು ಹೊಳೆಆಲೂರ ಸಮೀಪದ ಮುದೇನಗುಡಿ ಗ್ರಾಮದ ಬಸವೇಶ್ವರ ಜಾತ್ರೆಯ ಅಂಗವಾಗಿ ನಡೆದ ರಾಜ್ಯಮಟ್ಟದ ಡಬಲ್ಸ್ ಮತ್ತು ಸಿಂಗಲ್ಸ್ ಕೇರ್‌ಂ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಇಂದು ಕ್ರೀಡೆಗಳತ್ತ ಯುವಕರ ಆಸಕ್ತಿ ಕಡಿಮೆಯಾಗುತ್ತಿದೆ. ಗ್ರಾಮಗಳಲ್ಲಿ ಕಬಡ್ಡಿ, ಕೋಕೋ, ವಾಲಿಬಾಲ್, ಕುಸ್ತಿ ಪಂದ್ಯಾವಳಿ, ಟಗರಿನ ಕಾಳಗ ಆಟಗಳೂ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರಗೌಡ ಚನ್ನಪ್ಪಗೌಡ್ರ, ಮಲ್ಲನಗೌಡ ಗಿರಿಯಪ್ಪಗೌಡ್ರ, ಗೋವಿಂದಗೌಡ ಕೆಂಚನಗೌಡ್ರ, ವಿ.ಎಸ್. ಕ್ಯಾತನಗೌಡ್ರ, ಕೊಟ್ರೇಶಗೌಡ ಚನ್ನಪ್ಪಗೌಡ್ರ, ಸುರೇಶಗೌಡ ಚನ್ನಪ್ಪಗೌಡ್ರ, ಬಸನಗೌಡ ಕ್ಯಾತನಗೌಡ್ರ, ಸಿ.ಬಿ. ಬಾಲನಗೌಡ್ರ, ಸಿದ್ದಪ್ಪ, ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

