ಗದಗ

ಹಿಂಸಾತ್ಮಕ ಜಾತ್ರೆ ಬಹಿಷ್ಕರಿಸಿ: ಚನ್ನವೀರ ಶ್ರೀ

Published On :

ಗದಗ: ಜಾತ್ರೆಗಳು ಶರಣ ಸಂಸ್ಕೃತಿಯ ಯಾತ್ರೆಗಳಾಗಬೇಕು. ಜಾತ್ರೆಗಳು ಸುಲಿಗೆ, ಕೊಲೆ, ಬಲಿದಾನದಂತಹ ಹಿಂಸಾತ್ಮಕ ಕ್ರಿಯೆಗಳಿಂದ ಮುಕ್ತವಾಗಬೇಕು. ಹಿಂಸಾತ್ಮಕ ಜಾತ್ರೆಗಳನ್ನು ಜನತೆ ಬಹಿಷ್ಕರಿಸಬೇಕು ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಶ್ರೀಗಳು ಹೇಳಿದರು. ಭಾನುವಾರ ತಾಲೂಕಿನ ಹೊಸಳ್ಳಿ ಗ್ರಾಮದ ಬೂದೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಕಡುಬಿನ ಕಾಳಗ ಕಾರ್ಯಕ್ರಮದ ನಂತರ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೊಟ್ಟೆ ಮತ್ತು ನೆತ್ತಿ ತುಂಬಿಸುವ ಜಾತ್ರೆಗಳಲ್ಲಿ ಬೂದೀಶ್ವರ ಮಠದ ಜಾತ್ರೆ ಅನನ್ಯವಾದದು ಎಂದರು. ಸಮ್ಮುಖ ವಹಿಸಿದ್ದ ಬಳಗಾನೂರಿನ ಚನ್ನವೀರ ಶರಣರ ಮಠದ ಶಿವಶಾಂತವೀರ ಶ್ರೀಗಳು, ಶರಣರ ಶರೀರ ಅನಿತ್ಯವಾದದು. ನಮ್ಮ ನಡವಳಿಕೆಯಲ್ಲಿ ಸಮಾಜ, ಧರ್ಮ, ಗುರುಗಳಿಗೆ ವಿಶೇಷ ಗೌರವ ನೀಡಿ ಸೇವೆ ಸಲ್ಲಿಸಿದರೆ ಬದುಕು ಹಸನಾಗುವುದು ಎಂದರು. ಅಭಿನವ ಬೂದೀಶ್ವರ ಶ್ರೀಗಳು, ಜಾತ್ರೆಗಳು ಜನರ ಬದುಕಿಗೆ ಸಫಲತೆಯನ್ನು ನೀಡುವ ಸ್ಪೂರ್ತಿಯ ಸೆಲೆಗಳಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಬೂದೀಶ್ವರರ ಪಟ್ಟಾಧಿಕಾರದ 13ನೇ ಮಹೋತ್ಸವದ ಅಂಗವಾಗಿ ಶ್ರೀಮಠದ ಭಕ್ತರು ಅಭಿನವ ಶಾಂತಲಿಂಗ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಕುರ್ತಕೋಟಿ ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ, ಕೆ.ಎಲ್. ಜೈನ್, ಗಂಗಾಧರ ಕೋಟಿ, ಮುದಕಯ್ಯ ಶಾಸ್ತ್ರಿಗಳು ಮೂರೊಳ, ಸಂಗಪ್ಪಜ್ಜ ಅಂಗಡಿ ಇದ್ದರು. ಶಿವಲಿಂಗಯ್ಯ ಸಿದ್ದಾಪುರ ನಿರೂಪಿಸಿದರು. ಡಾ. ಶರಣಬಸವ ವೆಂಕಟಾಪುರ ವಂದಿಸಿದರು. ಅಂದಾನಯ್ಯ ಗವಾಯಿಗಳಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು. ನಿವೃತ್ತ ಪ್ರಾಚಾರ್ಯ ಬಿ.ಎಂ. ಹುರಕಡ್ಲಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.