ಸುಲಭ ಶೌಚಾಲಯ: ಒತ್ತಾಯ
ಗಜೇಂದ್ರಗಡ: ಪಟ್ಟಣದ ವಿವಿಧ ಬಡಾವಣೆಯಲ್ಲಿ ನೀರಿನ ಸೌಕರ್ಯ ಇಲ್ಲದೆ ಸ್ಥಗಿತಗೊಂಡ ಸುಲಭ ಶೌಚಾಲಯ ಪುನರ್ ಪ್ರಾರಂಭಿಸಬೇಕು ಎಂದು ಪಟ್ಟಣದ ಸಾರ್ವಜನಿಕರು ಪುರಸಭೆಗೆ ಒತ್ತಾಯಿಸಿದ್ದಾರೆ.
ಸ್ಥಳೀಯ ನಾನಾ ಬಡಾವಣೆಯಲ್ಲಿ ಎಸ್ಎಫ್ಸಿ ಯೋಜನೆ ಲಕ್ಷಾಂತರ ಅನುದಾನ ವೆಚ್ಚದಿಂದ ನಿರ್ಮಲ ನಗರ ಮಾದರಿಯ 18ಕ್ಕೂ ಹೆಚ್ಚು ಸುಲಭ ಶೌಚಾಲಯ ನಿರ್ಮಿಸಲಾಗಿದೆ. ಕೆಲ ಸುಲಭ ಶೌಚಾಲಯ ದುರ್ನಾತ ಬೀರುತ್ತ ಜನರ ಪಾಲಿಗೆ ಇದ್ದು ಇಲ್ಲದಂತಾಗಿವೆ. ವಾಜಪೇಯಿ ನಗರ ಸೇರಿದಂತೆ ಇತರ ಕಡೆಯ ಶೌಚಾಲಯಗಳು ಸೂಕ್ತ ನಿರ್ವಹಣೆ ಇಲ್ಲದೆ ಬಾಗಿಲು ಮುಚ್ಚಿವೆ. ಮಹಿಳೆಯರು, ಮಕ್ಕಳು ಬಯಲು ಶೌಚಾಲಯಕ್ಕೆ ಅಲೆದಾಡುವುದು ಇಲ್ಲಿ ಸಾಮಾನ್ಯವಾಗಿದೆ. ಮಹಿಳೆಯರ ತೊಂದರೆ ನಿವಾರಣೆಗೆ ಸರ್ಕಾರ ಲಕ್ಷಾಂತರ ರು. ಹಣ ವೆಚ್ಚಮಾಡಿ ನಿರ್ಮಿಸಿರುವ ಈ ಸುಲಭ ಶೌಚಾಲಯ ಕಟ್ಟಡ ಕೆಲವು ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಈಗ ಸಂಪೂರ್ಣವಾಗಿ ಹಾಳಾಗುವ ಹಂತಕ್ಕೆ ತಲುಪಿವೆ.
ಪಟ್ಟಣದ ಮುಖ್ಯ ವಾಣಿಜ್ಯ ಮಾರುಕಟ್ಟೆ ಬೀದಿಯ ಜೋಡು ರಸ್ತೆಯಲ್ಲಿರುವ ಮೂತ್ರಾಲಯ, ಕಾಲಕಾಲೇಶ್ವರ, ಬಸವೇಶ್ವರ ವೃತ್ತ ಸೇರಿದಂತೆ ಇನ್ನಿತರ ಕಡೆ ಇರುವ ಮೂತ್ರಾಲಯಗಳು ಸ್ಚಚ್ಛ ಮಾಡಿ ಅದೆಷ್ಟೋ ವರ್ಷಗಳು ಕಳೆದಿದೆ. ಇದರಿಂದ ಮೂತ್ರಾಲಯಗಳು ರೋಗ ಉತ್ಪಾದನೆ ಫ್ಯಾಕ್ಟರಿಯಾಗಿ ಮಾರ್ಪಾಡಾಗಿವೆ. ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತು ಶೌಚಾಲಯ, ಮೂತ್ರಾಲಯಗಳ ದುಸ್ಥಿತಿ ಹೋಗಲಾಡಿಸುವ ಕ್ರಮ ಕೈಗೊಳ್ಳಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

