ಆಟೋರಿಕ್ಷಾ ಚಾಲಕ ಜವಳೇಕರ್ ಪಾದಯಾತ್ರೆ
ಗಜೇಂದ್ರಗಡ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿ.ಎಸ್. ಪಾಟೀಲರು ಗೆದ್ದರೆ ತುಳಜಾಪುರ, ಪಂಢರಾಪುರ, ಸಾಯಿ ಬಾಬಾರವರ ಶಿರಡಿ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಳ್ಳುವ ಸಂಕಲ್ಪ ಮಾಡಿದ್ದ ಗಜೇಂದ್ರಗಡದ ಆಟೋರಿಕ್ಷಾ ಚಾಲಕ ಮಾರ್ಕಂಡೆಯ (ಸಿದ್ಧಾರೂಢ)ನಂದನ್ ಜವಳೇಕರ ಪಾದಯಾತ್ರೆಗೆ ಭಾನುವಾರ ಶಾಸಕ ಜಿ.ಎಸ್. ಪಾಟೀಲ್ ಚಾಲನೆ ನೀಡಿದರು.
ರಾಜ್ಯದಲ್ಲಿ ಸತತ ಬರದಿಂದ ತತ್ತರಿಸಿದ ಜನರ ಸಂಕಷ್ಟ ನಿವಾರಣೆ ಹಾಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ರೋಣ ಕ್ಷೇತ್ರದಲ್ಲಿ ಜಿ.ಎಸ್. ಪಾಟೀಲರು ಶಾಸಕರಾಗಲು ಹರಕೆ ಹೊತ್ತಿದ್ದೆನು. ಅದರಂತೆ ಗಜೇಂದ್ರಗಡದಿಂದ 850 ಕಿ.ಮೀ. ದೂರದ ಪುಣ್ಯ ಕ್ಷೇತ್ರಗಳಿಗೆ ಪಾದಯಾತ್ರೆ ಮೂಲಕ ತೆರಳಿ ಹರಕೆ ನೆರವೇರಿಸುವುದಾಗಿ ಪಾದಯತ್ರೆ ಕೈಗೊಂಡ ಮಾರ್ಕಾಂಡೆಯ ತಿಳಿಸಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರೋಣ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ನೂರಾರು ಶ್ರೀಸಾಮಾನ್ಯರು ದೇವರಿಗೆ ಹರಕೆ ಹೊತ್ತಿದ್ದಾರೆ. ಕೆಲವರು ದೀಡ್ ನಮಸ್ಕಾರ ಹಾಕಿದರೆ, ಇನ್ನೂ ಕೆಲವರು ಪುಣ್ಯಕ್ಷೇತ್ರಕ್ಕೆ ಪಾದಯಾತ್ರೆ ನಡೆಸಿದ್ದಾರೆ. ಸಹಸ್ರಾರು ಜನ ಹಲವಾರು ದೇಗುಲದಲ್ಲಿ ವಿಶೇಷ ಪೂಜೆ, ಪುನಸ್ಕಾರ, ಅನ್ನ ಸಂತರ್ಪಣೆ ನಡೆಸಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಮೋಹನಸಾ ರಾಯಬಾಗಿ, ದತ್ತುಸಾ ರಾಯಬಾಗಿ, ಮುರ್ತುಜಾ ಡಾಲಾಯತ್, ಮೌಲಾಸಾಬ ನಾಲಬಂದ, ಎಂ.ಎಚ್. ಕೋಲಕಾರ, ಮಿಸ್ಕಿನ್, ಕೊಟ್ರೇಶ ಚಿಲಕಾ, ರವಿ ಗಡೇದವರ, ವಿ.ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಪಿ.ಸಿ. ರಾಯಬಾಗಿ, ಗಿರೀಶ ರಂಗ್ರೇಜಿ, ಶಶಿಧರ ಹೂಗಾರ, ಸುರೇಶ ಚವಡಿ, ವಿ.ಬಿ. ಹಪ್ಪಳದ, ಶ್ರೀಧರ ಚುಂಚಾ, ಪಾಂಡುರಂಗ ಶೀಲವೇರಿ, ಕಳಕಪ್ಪ ಜಾಡಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

