ಗದಗ

ಸಾಹಿತ್ಯ ಸಮ್ಮೇಳನ: ವಿವಿಧ ಸಮಿತಿ ರಚನೆ

Published On :

ಮುಂಡರಗಿ: ಜೂ. 15, 16 ರಂದು ಮುಂಡರಗಿಯಲ್ಲಿ ನಡೆಯುವ 5ನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕಾರ್ಯದರ್ಶಿಗಳಾಗಿ ರವಿಂದ್ರ ಉಪ್ಪಿನಬೆಟಗೆರಿ, ಡಿ.ಡಿ. ಮೋರನಾಳ ಮತ್ತು ಆರ್.ಬಿ. ಬಳ್ಳಾರಿ. ಮಾಧ್ಯಮ ಸಮಿತಿಯ ಅಧ್ಯಕ್ಷರಾಗಿ ಜಿ.ಎಸ್. ಕೊರ್ಲಹಳ್ಳಿ, ಕಾರ್ಯದರ್ಶಿಯಾಗಿ ಎಚ್.ಬಿ. ವಡ್ಡಟ್ಟಿ, ಅತಿಥಿ ಉಸ್ತುವಾರಿ ಮತ್ತು ಸತ್ಕಾರ ಸಮಿತಿಯ ಅಧ್ಯಕ್ಷರಾಗಿ ಪ್ರೊ. ಎಸ್.ಆರ್. ಬಸಾಪುರ, ಕಾರ್ಯದರ್ಶಿಗಳಾಗಿ ಎಸ್.ಜಿ. ಕಡ್ಡಿ ಮತ್ತು ಪಾಲಾಕ್ಷಿ ಗಣದಿನ್ನಿ, ಶುಚಿತ್ವ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಕುರಿ, ಕಾರ್ಯದರ್ಶಿಗಳಾಗಿ ಮುದುಕಪ್ಪ ಕುಂಬಾರ, ಅಶೋಕ ಸವಣೂರ. ನೀರು ಪೂರೈಕೆ ಮತ್ತು ವಿತರಣಾ ಸಮಿತಿಯ ಅಧ್ಯಕ್ಷೆಯಾಗಿ ರಿಹಾನಾಬೇಗಂ ಕೆಲೂರ, ಕಾರ್ಯದರ್ಶಿಗಳಾಗಿ ವೀರೇಶ ಸಜ್ಜನರ, ವಿರುಪಾಕ್ಷಪ್ಪ ಕುಂಬಾರ, ಕಚೇರಿ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಎಂ.ಜಿ. ಗಚ್ಚಣ್ಣವರ, ಕಾರ್ಯದರ್ಶಿಯಾಗಿ ಮೋಹನಗೌಡ ಪಾಟೀಲ.
ಆಹ್ವಾನ ಪತ್ರಿಕಾ ವಿತರಣಾ ಸಮಿತಿಯ ಅಧ್ಯಕ್ಷರಾಗಿ ದಿಲೀಪಕುಮಾರ ಜೋಶಿ, ಕಾರ್ಯದರ್ಶಿಯಾಗಿ ಮಂಜುನಾಥ ಚಳ್ಳಮರದ ಮತ್ತು ಕೃಷ್ಣಮೂರ್ತಿ ಸಾಹುಕಾರ. ಪುಸ್ತಕ ವಾಣಿಜ್ಯ ಮಳಿಗೆ ಸಮಿತಿಯ ಅಧ್ಯಕ್ಷರಾಗಿ ವೀರೇಶ ಸಜ್ಜನರ, ಕಾರ್ಯದರ್ಶಿಯಾಗಿ ವೀರಣ್ಣ ತುಪ್ಪದ. ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷರಾಗಿ ಡಾ. ವಿ.ಬಿ. ಹಿರೇಮಠ, ಕಾರ್ಯದರ್ಶಿ ಡಾ. ಅರ್ಜುನ ಗೊಳಸಂಗಿ, ಪುಸ್ತಕ ಪ್ರಕಟಣಾ ಸಮಿತಿಯ ಅಧ್ಯಕ್ಷರಾಗಿ ಪ್ರಾ. ಕೆ.ಎಚ್. ಬೇಲೂರ, ಕಾರ್ಯದರ್ಶಿಯಾಗಿ ಡಾ. ಶರಣಬಸವ ವೆಂಕಟಾಪುರ, ಎಂ.ಕೆ. ಲಮಾಣಿ. ವೇದಿಕೆ ಅಲಂಕಾರ ಸಮಿತಿ-ಅಧ್ಯಕ್ಷರಾಗಿ ಷಹಜಾನ್ ಮುದಕವಿ, ಕಾರ್ಯದರ್ಶಿಯಾಗಿ ವಿಜಯ ಕಿರೇಸೂರ ಮತ್ತು ಎನ್.ಎಂ. ಚಿತ್ರಗಾರ. ಶಾಮಿಯಾನ, ಧ್ವನಿ ಬೆಳಕು ಅಲಂಕಾರ ಸಮಿತಿ ಅಧ್ಯಕ್ಷರಾಗಿ ಆನಂದಗೌಡ ಪಾಟೀಲ, ಕಾರ್ಯದರ್ಶಿಯಾಗಿ ಧೃವಕುಮಾರ ಹೊಸಮನಿ ಅವರನ್ನು ಆಯ್ಕೆ ಮಾಡಲಾಗಿದೆ. ನಗರ ಶೃಂಗಾರ ಸಮಿತಿಯ ಅಧ್ಯಕ್ಷರಾಗಿ ಬಸವರಾಜ ನವಲಗುಂದ, ಕಾರ್ಯದರ್ಶಿಯಾಗಿ ಸುರೇಶ ಮಾಗಡಿ, ವೇದಿಕೆ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಡಿ.ಎಸ್. ತಳವಾರ, ಕಾರ್ಯದರ್ಶಿಯಾಗಿ ವಿ.ಎಸ್.ದಲಾಲಿ, ಎ.ಕೆ. ಮುಲ್ಲಾನವರ. ಉಟೋಪಚಾರ ಸಮಿತಿಯ ಅಧ್ಯಕ್ಷರಾಗಿ ಕರಬಸಪ್ಪ ಹಂಚಿನಾಳ, ಕಾರ್ಯದರ್ಶಿಗಳಾಗಿ ಎಂ.ಎ. ರಡ್ಡೇರ, ಶಿವು ನವಲಗುಂದ.
ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಡಿ.ಜಿ. ಹಿರೇಮಠ, ಕಾರ್ಯದರ್ಶಿಯಾಗಿ ಮುತ್ತು ಹಾಳಕೇರಿ, ಮೆರವಣಿಗೆ ಸಮಿತಿಯ ಅಧ್ಯಕ್ಷರಾಗಿ ಬಸವರಾಜ ಮುದ್ದಿ, ಕಾರ್ಯದರ್ಶಿಯಾಗಿ ರಾಮು ಕಲಾಲ, ಸ್ವಾಗತ ವಿಚಾರಣಾ, ಮಾಹಿತಿ ಸಮಿತಿಯ ಅಧ್ಯಕ್ಷರಾಗಿ ಎಸ್.ಎಚ್.ಬೀರಕಬ್ಬಿ, ಕಾರ್ಯದರ್ಶಿಗಳಾಗಿ ಎಸ್.ಎನ್. ನದಾಫ, ಎ.ವಿ. ಪ್ರಭು, ವಸತಿ ಸಮಿತಿಯ ಅಧ್ಯಕ್ಷರಾಗಿ ಬಸವರಾಜ ಮೇಟಿ, ಟಿ.ಬಿ. ಮೇಟಿ, ಕಾರ್ಯದರ್ಶಿಯಾಗಿ ವೆಂಕನಗೌಡ ಪಾಟೀಲ, ಸಾರಿಗೆ ಪ್ರವಾಸ ಸೌಲಭ್ಯ ಸಮಿತಿ ಅಧ್ಯಕ್ಷರಾಗಿ ಕಾಂತರಾಜ ಹಿರೇಮಠ, ಪ್ರಶಾಂತ ಅಸಲಿ, ಕಾರ್ಯದರ್ಶಿಯಾಗಿ ನಿರಂಜನಮೂರ್ತಿ. ಸ್ವಯಂ ಸೇವಕ ಸಮಿತಿ ಅಧ್ಯಕ್ಷರಾಗಿ ವೈ.ಎಚ್. ಬಚೇನಳ್ಳಿ, ಮೌನೇಶ ಪತ್ತಾರ, ಕಾರ್ಯದರ್ಶಿಗಳಾಗಿ ಎಚ್.ಎಂ. ಹದ್ಲಿ ಮತ್ತು ಸುಜಾತಾ ಬೆಟಗೇರಿ, ಸುರಕ್ಷಾ ಸಮಿತಿಯ ಅಧ್ಯಕ್ಷರಾಗಿ ಚಂದ್ರಹಾಸ ಉಳ್ಳಾಗಡ್ಡಿ, ಕಾರ್ಯದರ್ಶಿ ಸಿಪಿಐ ಸುನೀಲ್ ಸವದಿ ಮುಂಡರಗಿ, ಸ್ಮರಣಿಕೆ, ಮಾಲಾರ್ಪಣೆ ಸಮಿತಿಯ ಅಧ್ಯಕ್ಷೆಯಾಗಿ ಸೀತಾ ಬಸಾಪುರ, ಕಾರ್ಯದರ್ಶಿಯಾಗಿ ಬಸವರಾಜ ರಾಮೇನಹಳ್ಳಿ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ವೀಣಾ ಪಾಟೀಲ, ಕಾರ್ಯದರ್ಶಿಗಳಾಗಿ ಗೀತಾ ತಲೆಗೌಡ್ರ, ಗಿರಿಜಾ ಹಸಬಿ, ಶಾಂತಾ ಕಲ್ಲಕುಟಗರ ಇವರನ್ನು ನೇಮಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.