ಗದಗ

ಕಾನೂನು ಜ್ಞಾನದಿಂದ ದೌರ್ಜನ್ಯ ತಡೆ ಸಾಧ್ಯ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 10
ಮಹಿಳೆಯರಿಗಾಗಿ ಅನೇಕ ರೀತಿಯ ಕಾನೂನುಗಳು ಇದ್ದು, ಮಹಿಳೆಯರು ತಮ್ಮ ರಕ್ಷಣೆಗಾಗಿ ಕಾನೂನಿನ ಸಹಕಾರ ಪಡೆಯಬೇಕಾಗಿದೆ. ಸ್ಲಂನಲ್ಲಿ ವಾಸಿಸುವ ಮಹಿಳೆಯರು ಇಂಥ ಕಾನೂನು ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಕಾನೂನು ಬಗ್ಗೆ ತಿಳಿದುಕೊಂಡಾಗ ಮಾತ್ರ ಮಹಿಳೆಯರ ದೌರ್ಜನ್ಯ ತಡೆಗಟ್ಟಲು ಸಾಧ್ಯ ಎಂದು ನ್ಯಾಯವಾದಿ ಸುಮಾ ಸಂಕಣ್ಣವರ ಅಭಿಪ್ರಾಯ ಪಟ್ಟರು. ಅವರು ಸೋಮವಾರ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಜಿಲ್ಲಾ ಮಹಿಳಾ ಸಮಿತಿಯಿಂದ ನಗರದ ರಂಗಾವಧೊತನಗರ ಭವನದಲ್ಲಿ ಸ್ಲಂ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಕಾನೂನು ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
1991ರಲ್ಲಿ ಭ್ರೂಣ ಹತ್ಯೆ ತಡೆ ಕಾಯ್ದೆ ಜಾರಿಗೆ ಬಂದರೂ ಭ್ರೂಣ ಹತ್ಯೆ ನಡೆಯುತ್ತಿವೆ. ಬಾಲ್ಯವಿವಾಹ ತಡೆ ಕಾಯ್ದೆ ಜಾರಿಗೆ ಬಂದರೂ ಕಾಯ್ದೆಯನ್ನು ಲೆಕ್ಕಿಸದೆ ಬಾಲ್ಯ ವಿವಾಹ ನಡೆಯುತ್ತಿವೆ. ಬಾಲ್ಯ ವಿವಾಹ ಮಾಡಿಸಿದರೆ 2 ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಜೀವನ ಸೌಂರಕ್ಷಣೆ, ಸ್ವಾಧೀನ ಮುಂತಾದ ಕಾನೂನು ಮಾಹಿತಿಗಳ ಬಗ್ಗೆ ಸುಮಾ ಸಂಕಣ್ಣವರ ತಿಳಿಸಿದರು.
ಗದಗ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣವೇಣಿ, ಸಮಾಜದಲ್ಲಿ ನಡೆಯುತ್ತಿರುವ ಅಪರಾಧವನ್ನು ತಡೆಗಟ್ಟಲು ಕಾನೂನಿನ ಜ್ಞಾನ ಅಗತ್ಯ ಎಂದರು.
ನಗರಸಭೆ ಸದಸ್ಯ ಶ್ರೀನಿವಾಸ ಕರಿ ಮಾತನಾಡಿದರು. ಸ್ಲಂ ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ ಮ್ಯಾಗೇರಿ, ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ, ಮಹಿಳಾ ಸಮಿತಿಯ ಅಧ್ಯಕ್ಷ ಉಮಾದೇವಿ ಕಾತರಕಿ, ತಿಪ್ಪವ್ವ ಮುಟಗಾರ, ಬಸವರಾಜ ಯಡ್ಡವಣ್ಣವರ, ಯಲಪ್ಪ ರಾಮಗಿರಿ, ಶರೀಫ ಬಿಳೆಯಲಿ, ಆರತಿ, ಮೆಹರುನಿಸ್ಸಾ ಢಾಲಾಯತ, ನಜ್ಜಮುನ್ನಿಸ್ಸಾ, ಅಶೋಕ ಕುಸಬಿ, ಪರುಶರಾಮ ಕಾಳೆ, ಅನೀಲ ಕಾಳೆ, ಸಂತೋಷ ಬಣಕಾರ ಸೇರಿದಂತೆ ಸ್ಲಂ ಜನರು ಪಾಲ್ಗೊಂಡಿದ್ದರು. ಇಮ್ತಿಯಾಜ. ಮಾನ್ವಿ ನಿರೂಪಿಸಿದರು. ಶರೀಫ ಬಿಳೆಯಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.