ನೀತಿ ಸಂಹಿತೆ ಉಲ್ಲಂಘಿಸಬೇಡಿ
ಮುಂಡರಗಿ: ಮಾ. 7 ರಂದು ಜರುಗಲಿರುವ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಮಾಡುವ ಹಣದ ಖರ್ಚು ಹಾಗೂ ಪ್ರಚಾರಕ್ಕೆ ಅನುಸರಿಸಬೇಕಾದ ನಿಯಮಗಳ ಕುರಿತು ಶನಿವಾರ ಬೆಳಗ್ಗೆ ಪಟ್ಟಣದ ಪುರಸಭೆ ಸಭಾಭನವದಲ್ಲಿ ಜಿಲ್ಲಾ ಚುನಾವಣಾ ವೀಕ್ಷಕ ಎಸ್.ಜಿ. ಪಾಟೀಲ್ ವಿವರವಾಗಿ ತಿಳಿಸಿದರು.
ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಎಲ್ಲೆಂದರಲ್ಲಿ ಬ್ಯಾನರ್ಸ್, ಪೋಸ್ಟರ್ ಹಚ್ಚುವಂತಿಲ್ಲ. ಯಾವುದೇ ಖಾಸಗಿ ವ್ಯಕ್ತಿಗಳ ಮನೆಯ ಮುಂದಿನ ಗೋಡೆಗೆ ಅಥವಾ ಕಾಂಪೌಂಡ್ಗೆ ಹಚ್ಚುವಂತಿಲ್ಲ. ಪ್ರಚಾರ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಭ್ಯರ್ಥಿಗಳು ಮತ್ತೊಬ್ಬ ಅಭ್ಯರ್ಥಿಯ ಖಾಸಗಿ ಜೀವನದ ಬಗ್ಗೆ ಟೀಕಿಸುವಂತಿಲ್ಲ. ಜಾತಿ ಹೆಸರಿನಲ್ಲಿ ಟೀಕಿಸುವಂತಿಲ್ಲ. ಜಾತಿ ಆಧಾರದ ಮೇಲೆ ಯಾರೊಬ್ಬರೂ ಮತ ಕೇಳುವಂತಿಲ್ಲ. ಕೋಮುಭಾವನೆಗಳನ್ನು ಕೆರಳಿಸುವಂತಿಲ್ಲ. ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ಚುನಾವಣೆ ಪ್ರಚಾರ ಮಾಡುವಂತಿಲ್ಲ. ಮತದಾರರಿಗೆ ಯಾವುದೇ ಹಣ ನೀಡುವಂತಿಲ್ಲ. ಆಮಿಷಗಳನ್ನು ಒಡ್ಡಬಾರದು. ಪಕ್ಷದ ಧ್ವಜ ಹಾಕಬೇಕಾದರೆ ಮನೆಯವರ ಒಪ್ಪಿಗೆ ಕಡ್ಡಾಯವಾಗಿ ಪಡೆದುಕೊಂಡು, ಪುರಸಭೆ ಅನುಮತಿ ಪಡೆದಿರಬೇಕು ಎಂದರು. ಇನ್ನೋರ್ವ ಅಧಿಕಾರಿ ಡಿ. ಮೋಹನ ಚುನಾವಣೆಯ ಲೆಕ್ಕ ಪತ್ರ ವಹಿಸುವ ಬಗ್ಗೆ ಅಭ್ಯರ್ಥಿಗಳಿಗೆ ಪೂರಕ ಮಾಹಿತಿ ಒದಗಿಸಿದರು.
ಇದಕ್ಕೂ ಮೊದಲು ಚುನಾವಣೆ ನಡೆಯುವ ಭೂತ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ವಾರ್ಡ್ಗಳ ವಿವಿಧ ಪಕ್ಷಗಳ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ಎ.ಟಿ.ನರೇಗಲ್, ಹುಬ್ಬಳ್ಳಿಮಠ, ಡಾ. ಎಸ್.ವಿ. ತಿಗರಿಮಠ, ಎಂ.ಎ. ರಡ್ಡೇರ, ಜಿ.ಪಿ. ಶಿವಕುಮಾರ, ಶ್ರೀರಾಮ ಕುಲಕರ್ಣಿ, ಕೆ.ಬಿ. ಗಂಜಿಹಾಳ, ಶಿವಶಂಕರೇಗೌಡ, ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ವಿವೇಕಾನಂದ ಪಾಲ್ಗೊಂಡಿದ್ದರು. ತಹಸೀಲ್ದಾರ್ ಎ.ಟಿ. ನರೇಗಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎ. ರಡ್ಡೇರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

