ಗದಗ

ಆಧುನಿಕತೆ ಪ್ರಭಾವದಿಂದ ಶಾಂತಿ, ನೆಮ್ಮದಿ ಮಾಯ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 6
ಇಂದು ಆಧುನಿಕತೆಯ ಪ್ರಭಾವದಿಂದ ಸಂತೋಷ, ಸಂಪ್ರೀತಿ, ಕರುಣೆ, ಮಮತೆಗಳು ಇಲ್ಲವಾಗಿ ಸಮಾಜದಲ್ಲಿರುವ ಸಂತಸ ದೂರವಾಗುತ್ತಿದೆ ಎಂದು ಶಿಗ್ಗಾಂವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಜಾತ ದೇವರಮನಿ ಆತಂಕ ವ್ಯಕ್ತಪಡಿಸಿದರು.
ಅವರು ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಜನಪದವನ್ನು ಉಳಿಸಿ ಬೆಳೆಸುವಲ್ಲಿ ಯುವಕರ ಪಾತ್ರ ಕುರಿತು ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜನಪದರು ಜೀವನವನ್ನು ಬಹಳ ಸಂತೃಪ್ತಿಯಿಂದ ಅನುಭವಿಸುತ್ತಿದ್ದರು. ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಿ ಎಲ್ಲರೂ ಒಂದಾಗಿ ಬಾಳುವಂತೆ ನಡೆದುಕೊಂಡು ಬದುಕನ್ನು ಸ್ವಚ್ಛಂದವಾಗಿ ಕಾಣುತ್ತಿದ್ದರು.
ಇಂದು ನಮ್ಮ ಯುವ ಜನತೆ ಆಧುನಿಕತೆಯ ಪ್ರಭಾವದಿಂದ ಶಾಂತಿಯನ್ನು ಕಳೆದುಕೊಂಡು ಜೀವನ ಪ್ರೀತಿಯಿಂದ ವಂಚಿತರಾಗುತ್ತಿದ್ದು, ಇದರಿಂದ ಬೇರ್ಪಟ್ಟು ನಮ್ಮ ಹಿಂದಿನ ಜನಪದವನ್ನು ಸ್ವೀಕರಿಸಿ ಅನ್ಯೋನ್ಯತೆಯನ್ನು ಹೊಂದುವುದು ಅವಶ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ ಮಾತನಾಡಿದರು. ಕನ್ನಡ ಅಧ್ಯಾಪಕ ಪ್ರೊ. ಅಣ್ಣಪ್ಪ ರೊಟ್ಟಿಗವಾಡ ಉಪನ್ಯಾಸ ನೀಡಿದರು. ರಾಜ್ಯಶಾಸ್ತ್ರ ಅಧ್ಯಾಪಕ ಪ್ರೊ. ನಾಗರಾಜ ಹಾವಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಪ್ರೊ. ಆರ್.ಪಿ. ನದಾಫ, ಎಫ್.ಬಿ. ಆನಿ, ಸವಿತಾ. ಪಾಟೀಲ, ರಂಜನಾ ಭಂಡಾರೆ, ಡಾ. ಎಂ.ಕೆ. ಹೊನಕಾಂಬಳೆ, ಬಿ.ವೈ.ಆಲೂರ ಪ್ರೊ. ಈಶ್ವರಗೌಡ ಚೋಬಾರಿ ಪಾಲ್ಗೊಂಡಿದ್ದರು. ಪ್ರೊ. ಅಣ್ಣಪ್ಪ ರೊಟ್ಟಿಗವಾಡ ಸ್ವಾಗತಿಸಿದರು. ಡಾ. ಸುಜಾತ ಬರದೂರ ನಿರೂಪಿಸಿದರು. ಡಾ. ಸದಾಶಿವ ದೊಡಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.