ಗದಗ ಜಿಲ್ಲೆಯಲ್ಲಿ ಶೇ. 76.16 ರಷ್ಟು ಮತದಾನ
ಗದಗ: ಜಿಲ್ಲೆಯ ಒಂದು ನಗರಸಭೆ, 5 ಪುರಸಭೆ ಹಾಗೂ 3 ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ 200 ವಾರ್ಡ್‌ಗಳಿಗೆ ಗುರುವಾರ ನಡೆದ ಮತದಾನದಲ್ಲಿ ಶೇ. 76.16 ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ. ಅವಳಿ ನಗರದಲ್ಲಿನ 35 ವಾರ್ಡ್‌ಗಳಿಗೆ ನಡೆದ ಮತದಾನದಲ್ಲಿ 7 ವಾರ್ಡ್‌ಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ನಡುವೆ ಮಾತಿನ ಚಕಮಕಿ, ಒಂದೆಡೆ ಮತದಾನ ಯಂತ್ರ ಕೈಕೊಟ್ಟ ಘಟನೆ ನಡೆದಿದ್ದು, ಮತದಾನಕ್ಕೆ ಬಂದಿದ್ದವರಿಗೆ ಹಣ ಹಂಚುತ್ತಿದ್ದು ಆರೋಪದ ಮೇಲೆ ಬೆಟಗೇರಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗದಗನ 35ನೇ ವಾರ್ಡ್‌ನಲ್ಲಿ ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ಹಾಗೂ ಗಜೇಂದ್ರಗಡದಲ್ಲಿ ಸಚಿವ ಕಳಕಪ್ಪ ಬಂಡಿ ಮತದಾನ ಮಾಡಿದರು. ನರಗುಂದದಲ್ಲಿ ಮತದಾನದ ವೇಳೆ ಮಾಜಿ ಸಚಿವ, ಬಿಜೆಪಿ ಶಾಸಕ ಸಿ.ಸಿ. ಪಾಟೀಲ್ ಹಾಗೂ ಮಾಜಿ ಸಚಿವ, ಕಾಂಗ್ರೆಸ್‌ನ ಬಿ.ಆರ್. ಯಾವಗಲ್ಲ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 203 ವಾರ್ಡ್‌ಗಳಿದ್ದು, ಅವುಗಳಲ್ಲಿ ಮುಳಗುಂದ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಪಟ್ಟಣದಲ್ಲಿನ ತಲಾ ಒಂದು ವಾರ್ಡ್‌ಗೆ ಅವಿರೋಧವಾಗಿ ಆಯ್ಕೆ ನಡೆದಿದೆ. 914 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಗದಗ, ಬೆಟಗೇರಿ (ನಗರಸಭೆ) ಶೇ. 68, ನರಗುಂದ (ಪುರಸಭೆ) ಶೇ. 79.52, ಶಿರಹಟ್ಟಿ (ಪಟ್ಟಣ ಪಂಚಾಯ್ತಿ) ಶೇ. 78.00, ಮುಳಗುಂದ (ಪಟ್ಟಣ ಪಂಚಾಯ್ತಿ) ಶೇ. 78.68, ಲಕ್ಷ್ಮೇಶ್ವರ (ಪುರಸಭೆ) ಶೇ. 75.00, ರೋಣ (ಪುರಸಭೆ) ಶೇ. 73.89, ನರೇಗಲ್ಲ (ಪಟ್ಟಣ ಪಂಚಾಯ್ತಿ) ಶೇ. 78.00, ಗಜೇಂದ್ರಗಡ (ಪುರಸಭೆ) ಶೇ. 80.50, ಮುಂಡರಗಿ (ಪುರಸಭೆ) ಶೇ. 78.80 ಮತದಾನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

