ರೋಣ ಪುರಸಭೆ: ಶೇ. 73.89 ಮತದಾನ
ರೋಣ: ಪುರಸಭೆಯ 23 ವಾರ್ಡ್ಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ. 73.89ರಷ್ಟು ಮತದಾನವಾಗಿದೆ. ವಾರ್ಡ 4ರಲ್ಲಿ ಬಿಜೆಪಿ -ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಬಿಟ್ಟರೆ ಉಳಿದೆಲ್ಲ ಕಡೆ ಮತದಾನ ಶಾಂತವಾಗಿ ನಡೆದಿದೆ. 23 ವಾರ್ಡ್ಗಳಲ್ಲಿ ಒಟ್ಟು 15,254 ಮತಗಳಿದ್ದು, ಅದರಲ್ಲಿ 11,272 ಮತಗಳು ಚಲಾವಣೆಗೊಂಡಿವೆ. 5672 ಪುರುಷರು, 5600 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಸುಮಾರು 30 ಮಹಿಳೆಯರ ಹಾಗೂ ಒಬ್ಬ ಪುರುಷರ ಹೆಸರು ಎರಡೆರಡು ವಾರ್ಡ್ಗಳ ಪಟ್ಟಿಯಲ್ಲಿ ಪ್ರತ್ಯಕ್ಷವಾಗಿ ಗೊಂದಲ ಮೂಡಿಸಿತು. ವಾರ್ಡ್ ನಂ. 6ರಲ್ಲಿ ಮತದಾನ ಮಾಡಲು ಬಂದ ಒಬ್ಬರು ಗುರುತಿಗಾಗಿ ಆಧಾರ್ ಕಾರ್ಡ್ ತೋರಿಸಿದರೂ ಅವಕಾಶ ಕಲ್ಪಿಸದೆ ಸಮಸ್ಯೆಯಾಯಿತು. ತಹಸೀಲ್ದಾರ್ ಎಸ್.ಆರ್. ಕಡಿವಾಲ ಆಧಾರ ಕಾರ್ಡ್ ತೋರಿಸಿದವರಿಗೂ ಮತದಾನಕ್ಕೆ ವಕಾಶ ನೀಡುವಂತೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

