ಶಾಂತಿಯುತ ಮತದಾನ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 7
ಮುಂಡರಗಿ ಪುರಸಭೆಯ 23 ವಾರ್ಡ್ಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ. 78.80 ರಷ್ಟು ಶಾಂತಿಯುತ ಮತದಾನವಾಗಿದೆ. ಬಿರುಬಿಸಿಲನ್ನು ಲೆಕ್ಕಿಸದೇ ಮತದಾರರು ಮತಗಟ್ಟೆಗಳಿಗೆ ತೆರಳಿ ತಮ್ಮ ಮತ ಚಲಾಯಿಸಿದರು.
ವಾರ್ಡ್ 10ರ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ರವಿಚಂದ್ರ ಸುಣಗಾರ ಅವರ ಮತವನ್ನು ಬೇರೆಯವರು ಹಾಕಿರುವ ಘಟನೆ ಜರುಗಿದೆ.
ಬೆಳಗ್ಗೆಯಿಂದ ಮತದಾರರು ತಮ್ಮ ಮತ ಚಲಾಯಿಸುವ ಮೂಲಕ ಮಧ್ಯಾಹ್ನ 1ರ ಹೊತ್ತಿಗೆ ಶೇ. 50ರಷ್ಟು ಮತದಾನವಾಗಿತ್ತು. ನಂತರ 4 ಗಂಟೆಯ ವೇಳೆಗೆ ಉಳಿದ ಮತದಾರರು ಮತ ಹಾಕುವ ಮೂಲಕ ಹೆಚ್ಚಿನ ಮತದಾನವಾಗಿದೆ. 23ನೇ ವಾರ್ಡಿನ ರಾಮೇನಹಳ್ಳಿಯಲ್ಲಿ ಅತಿ ಹೆಚ್ಚು ಶೇ. 89.88 ರಷ್ಟು ಮತದಾನವಾದರೆ, ಮುಂಡರಗಿ ಪಟ್ಟಣದ ವಾರ್ಡ್ 8ರಲ್ಲಿ ಶೇ. 70.94 ಅತಿ ಕಡಿಮೆ ಮತದಾನವಾಗಿದೆ.
ಅಭ್ಯರ್ಥಿ ಮತವೇ ಮಾಯ: 10ನೇ ವಾರ್ಡ್ನ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರವಿಚಂದ್ರ ಸುಣಗಾರ ಅವರು ತಮ್ಮ ಮತ ಚಲಾಯಿಸುವ ಮೊದಲೇ ಬೇರೆ ಯಾರೋ ಅವರ ಮತ ಚಲಾಯಿಸಿ ಹೋಗಿದ್ದರು. ಇದರಿಂದ ಸುಣಗಾರ ಸಿಟ್ಟಿಗೆದ್ದು ತಾವು ಮತದಾನ ಮಾಡಿರದಿದ್ದರೂ ತಮ್ಮ ಮತಹಾಕಿ ಹೋಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಸಿಪಿಐ ಸುನಿಲ್ ಸವದಿ ವಾತಾವರಣವನ್ನು ತಿಳಿಗೊಳಿಸಿ, ಒಂದು ವೇಳೆ ಸುಣಗಾರ ಅವರ ಮತವನ್ನು ಬೇರೆಯವರು ಚಲಾಯಿಸಿದ್ದೇ ಆದಲ್ಲಿ ಅವರಿಗೆ ಟೆಂಡರ್ ಓಟಿನಲ್ಲಿ ಮತದಾನ ಮಾಡಲು ಅವಕಾಶವಿದೆ. ಮಾಡಲಿ ಎಂದು ಪ್ರಕರಣಕ್ಕೆ ತೆರೆ ಎಳೆದರು.
ಅನೇಕ ವಾರ್ಡ್ಗಳಲ್ಲಿ ವೃದ್ಧರು ಸ್ವಯಂ ಪ್ರೇರಣೆಯಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

