ಮರಳು ನೀತಿ ಕೈಬಿಡಲು ರೈತ ಮುಖಂಡರ ಆಗ್ರಹ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 15
ಮರಳು ನೀತಿ ಉಲ್ಲಂಘನೆ ಮಾಡಿ ಟೆಂಡರ್ ಪಡೆದ ಗುತ್ತಿಗೆದಾರರು ತುಂಗಭದ್ರಾ ನದಿಯಲ್ಲಿ ಮರಳು ತೆಗೆಯುತ್ತಿದ್ದು, ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಗುರುವಾರ ರೈತ ಮುಖಂಡ ರಂಗಪ್ಪ ಕ್ಯಾದಗಿಹಳ್ಳಿ, ವಿಠಲ ಗಣಾಚಾರಿ, ಸುರೇಶ ಹಲವಾಗಲಿ ರೈತರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯ ತಪ್ಪಿಸಿ ತಪ್ಪು ಲೆಕ್ಕ ತೋರಿಸಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ನದಿಯಲ್ಲಿ ಅಕ್ರಮ ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಕ್ಕೂರು ತಾಂಡಾ, ಹೆಸರೂರು, ಬೆಣ್ಣಿಹಳ್ಳಿ ಗ್ರಾಮಗಳಲ್ಲಿ ಕುಡಿವ ನೀರಿನ ತೊಂದರೆಯಿದೆ. ನಿಯಮ ಮೀರಿ ಕೇವಲ 3 ಅಡಿ ಮರಳು ತೆಗೆಯುವ ಬದಲು ಯಂತ್ರಗಳಿಂದ ಹತ್ತಾರು ಅಡಿ ಆಳಕ್ಕೆ ಹೂಳೆತ್ತಿ ಮರಳು ತೆಗೆಯುವುದರಿಂದ ನೀರು ಹಿಡಿಯದೆ ಅಂತರ್ಜಲ ಕುಸಿಯುತ್ತಿದೆ. ಇದು ಪರಿಸರಕ್ಕೆ ಹಾನಿಕರವಾಗಿದ್ದು, ಕೂಡಲೇ ಮರಳು ನೀತಿ ಕೈಬಿಟ್ಟು ಒಟ್ಟಾರೆ ಮರಳು ಸಾಗಿಸುವುದನ್ನು ಸ್ಥಗಿತಗೊಳಿಸಬೇಕು.
ಈ ಬಗ್ಗೆ ಸುತ್ತಲಿನ ರೈತರು ಉಗ್ರ ಹೋರಾಟ ಮಾಡಲು ಸಿದ್ದರಾಗಿದ್ದಾರೆ. ಅವಘಡಗಳು ಸಂಭವಿಸಿದಲ್ಲಿ ಕಂದಾಯ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು. ತುಂಗಭದ್ರಾ ನದಿಯಲ್ಲಿ ನೀರು ನಿಂತರೆ ಜಾನುವಾರುಗಳಿಗೆ, ಜನತೆಗೆ ಅನುಕೂಲವಾಗುತ್ತದೆ. ಅನಧಿಕೃತ ಉಸುಕು ತೆಗೆಯುವುದನ್ನು ತಡೆಗಟ್ಟಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಅಕ್ರಮ ಮರಳು ಸಾಕಾಣಿಕೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಈ ಭಾಗದ ರೈತರು ಜಾನುವಾರುಗಳ ಜತೆ ತಹಸೀಲ್ದಾರ ಕಚೇರಿಗೆ ಮುತ್ತಿಗೆ, ಬಾರಕೋಲ್ ಚಳವಳಿ ನಡೆಸಲು ಮುಂದಾಗಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಿ.ವಿ. ಗೊಡಚಿಹಳ್ಳಿ, ಹನುಮಪ್ಪ ಹುರಳಿ, ಜಯಂತ ಕಾರಬಾರಿ, ಈಶ್ವರಪ್ಪ ಮಲಸೆಟ್ಟಿ, ಮಲ್ಲಿಕಾರ್ಜುನ ದೊಡ್ಡಮನಿ, ಮಂಜುನಾಥ ಹ್ಯಾಡ್ಲ, ಮಾರುತಿ ನಿಟ್ಟಾಲಿ, ಕುಬೇರ ಪೂಜಾರ, ದೇವಪ್ಪ ಹಲವಾಗಲಿ, ತುಳಜಪ್ಪ ಮುರಡಿ, ಕುಮಾರ ಕಾರಬಾರಿ, ಅಂಬಕ್ಕ ಕಟ್ಟಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

