ಗದಗ

ಭಾಷಾ ಕೌಶಲ್ಯ ಮಿಗಿಲಾದುದು: ಡಾ. ಎಸ್.ವಿ. ಹಿತ್ತಲಮನಿ

Published On :

ಗದಗ:  ಉದ್ಯೋಗ ಪಡೆಯಲು ಪದವಿಯೊಂದೇ ಮುಖ್ಯವಲ್ಲ, ಉತ್ತಮ ಭಾಷಾ ಕೌಶಲ್ಯ ಮಿಗಿಲಾದುದು ಎಂದು ಕವಿವಿ ಧಾರವಾಡದ ಆಂಥ್ರೋಪಾಲಜಿಯ ಪ್ರಾಧ್ಯಾಪಕ ಡಾ೤ ಎಸ್.ವಿ. ಹಿತ್ತಲಮನಿ ಹೇಳಿದರು. ಸ್ಥಳೀಯ ಕೆಎಲ್‌ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿತ್ವ ವಿಕಸನಗೊಳ್ಳಲು ಬಾಹ್ಯ ವ್ಯಕ್ತಿತ್ವಕ್ಕಿಂತ ಆಂತರಿಕ ವ್ಯಕ್ತಿತ್ವ ಪ್ರಮುಖವಾದುದು. ಸಂವಹನ ಕೌಶಲ್ಯ, ನುಡಿದಂತೆ ನಡೆದು ತೋರುವ ವ್ಯಕ್ತಿತ್ವ, ನುಡಿಯಲ್ಲಿ ಸುಂದರ ಶಬ್ದ ಜೋಡಣೆ, ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಅತ್ಮಾಭಿಮಾನ, ಆತ್ಮಗೌರವ, ಸಕಾರಾತ್ಮಕ ಮನೋಭಾವ ಹಾಗೂ ನಾಯಕತ್ವ ಗುಣ ಇವೆಲ್ಲವೂ ವ್ಯಕ್ತಿತ್ವ ವಿಕಸನಕ್ಕೆ ಮೂಲ ಅಡಿಪಾಯಗಳಾಗಿವೆ ಎಂದರು. ಬೆಳಗಾವಿ ವ್ಯಕ್ತಿತ್ವ ವಿಕಸನ ಅಧಿಕಾರಿ ಸಾಧನಾ ಪೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಾನಿಕ ಆಡಳಿತ ಮಂಡಳಿಯ ಚೇರಮನ್ ಡಾ ವಿ.ಐ. ಕುರಗೋಡ ಅಧ್ಯಕ್ಷತೆ ವಹಿಸಿದ್ದರು. ಆರ್.ಬಿ. ವನಹಳ್ಳಿ, ಆಶಾ ಅಂಗಡಿ, ಪ್ರಾ. ಎಂ.ಎಂ. ಹೊಳ್ಳಿಯವರ, ಎಂ.ಬಿ. ಚನ್ನಪ್ಪಗೌಡ್ರ ಉಪಸ್ಥಿತರಿದ್ದರು. ಡಾ ಜ್ಯೋತಿ ಕಮತ ನಿರೂಪಿಸಿದರು. ಯಶೋದಾ ಗಡ್ಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.