ಭಗತ್ ಸಿಂಗ್ ದೇಶಪ್ರೇಮ ಮಾದರಿ: ಮಾಲಗಿತ್ತಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 24
ದೇಶದ ಏಕತೆಗಾಗಿ ಪ್ರಾಣತೆತ್ತ ಭಗತ್ ಸಿಂಗ್‌ರ ದೇಶಪ್ರೇಮ ಅಗಾಧವಾದದ್ದು. ಈ ನಿಟ್ಟಿನಲ್ಲಿ ಅವರ ಜೀವನ ಗಾಥೆ ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಪ್ರೊ ಆರ್.ಎಸ್. ಮಾಲಗಿತ್ತಿ ಹೇಳಿದರು.
ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಭಗತ್ ಸಿಂಗ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗತ್ ಸಿಂಗ್ ಆಂಗ್ಲರ ಕುತಂತ್ರ ನೀತಿ ವಿರುದ್ಧ ಸೆಣಸಾಡಿ ತಮ್ಮ ಸಮಾನ ಮನಸ್ಕರಲ್ಲೂ ದೇಶಪ್ರೇಮದ ಮಂತ್ರ ಬೀಜ ಬಿತ್ತುವುದರ ಜತೆಗೆ ಜನರಲ್ಲಿ ಸ್ವಾತಂತ್ರದ ಕಿಚ್ಚನ್ನು ಹಚ್ಚಿ ಕೆಚ್ಚೆದೆಯ ಧೀರನೆಂದು ಹೆಸರಾದರು. ಅಂಥವರ ನಡೆ-ನುಡಿಗಳನ್ನು ಪಾಲಿಸಿದಾಗ ಮಾತ್ರ ಇಂದಿನ ಆಚರಣೆಗಳು ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದರು. ಎಸ್‌ಎಫ್‌ಐ ಜಿಲ್ಲಾ ಮುಖಂಡ ಪೀರು ರಾಠೋಡ, ಬಾಲು ರಾಠೋಡ ಮಾತನಾಡಿ, ಭಗತ್ ಸಿಂಗ್‌ರ ತತ್ವಾದರ್ಶಗಳು ಸಾರ್ವಕಾಲಿಕ ಎಂದು ಬಣ್ಣಿಸಿದರು. ಉಪನ್ಯಾಸಕ ಯು.ಬಿ. ರಾಮಕೃಷ್ಣ, ಎ.ಎಚ್. ವಲ್ಲಿಭಾಯಿ, ಎಸ್‌ಎಫ್‌ಐ ನಗರ ಸಮಿತಿ ಅಧ್ಯಕ್ಷ ಶಿವು ಚವ್ಹಾಣ, ಬಸವರಾಜ ಹುಡಗಿ, ಫಕಿರೇಶ ಬಾರಕೇರ, ಮುತ್ತಣ್ಣ ಯರಗೇರಿ, ಬಿ.ಕೆ. ಮಾದಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

