ಪರಿಶ್ರಮಕ್ಕೆ ಫಲ ಖಚಿತ: ಶಾಂತವೀರ ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 24
ಕಾಯಕವೇ ಕೈಲಾಸವೆಂಬ ಬಸವಣ್ಣವರ ವಚನದಲ್ಲಿ ಗಾಢ ಸತ್ಯವಿದೆ. ಪರಿಶ್ರಮಕ್ಕೆ ಫಲ ಸಿಕ್ಕೆ ಸಿಗುತ್ತದೆ. ಪರಿಶ್ರಮ, ಛಲ ಹಾಗೂ ಆತ್ಮವಿಶ್ವಾಸದಿಂದ ಎಲ್ಲರೂ ಎತ್ತರದ ಶಿಖರಕ್ಕೆ ಏರಬಹುದೆಂದು ಬಳಗಾನೂರ ಚನ್ನವೀರ ಶರಣರ ಮಠದ ಶಿವಶಾಂತವೀರ ಶ್ರೀಗಳು ಹೇಳಿದರು.
ಗುರುವಾರ ಸ್ಥಳೀಯ ಯಂಗ್ ಇಂಡಿಯಾ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಗಳಾದ ತರುಣ ಭಾರತ ಚಿಟ್ಸ್ ಹಾಗೂ ಅಭಿವೃದ್ಧಿ ಪ್ರಾಪರ್ಟಿಸ್, ಗದಗ ಇವುಗಳನ್ನು ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಗದಗ ಜಿಲ್ಲೆ ಪ್ರಗತಿಯತ್ತ ಸಾಗುತ್ತಿದೆ. ಹೊಸ ತಂತ್ರಜ್ಞಾನ ಬಳಸಿ ಹೊಸ ಉದ್ಯೋಗಗಳಿಂದ ಅಭಿವೃದ್ಧಿಗೆ ಮಾದರಿಯಾಗಿರುವ ವೆಂಕನಗೌಡ ಗೋವಿಂದಗೌಡ್ರ ಅವರ ಕಾರ್ಯ ಶ್ಲಾಘನೀಯ ಎಂದರು.
ನರಗುಂದ ಬೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಮಾತನಾಡಿದರು. ನರಗುಂದದ ಶ್ರೀ ಸಿದ್ದವೀರ ಶಿವಯೋಗಿ ಶಿವಾಚಾರ್ಯಯರು ಉಪಸ್ಥಿತರಿದ್ದರು.
ಬೆನ್ನಕೊಪ್ಪ ಗ್ರಾಮದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಅಮಿನಬಿ ವಾಲಿಕಾರ ಅವರಿಗೆ ಗೋವಿಂದಗೌಡ್ರ ಪರಿವಾರದಿಂದ ಧನ ಸಹಾಯವನ್ನು ಬಳಗಾನೂರಿನ ಶಿವಶಾಂತವೀರ ಶ್ರೀಗಳು ವಿತರಿಸಿದರು. ಯಂಗ್ ಇಂಡಿಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ವೆಂಕನಗೌಡ ಗೋವಿಂದಗೌಡ್ರ ಸ್ವಾಗತಿಸಿದರು.
ಮಲ್ಲೇಶ ಮುಂಡರಗಿ ನಿರೂಪಿಸಿದರು. ಸುರೇಶಗೌಡ ಪರ್ವತಗೌಡ್ರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

