ವೃತ್ತಿ ರಂಗಭೂಮಿ ಬಗ್ಗೆ ತಾತ್ಸಾರ: ವಿಷಾದ
ಗದಗ: ಜನರ ತಾತ್ಸಾರ ಮನೋಭಾವನೆಯಿಂದ ಇತ್ತೀಚಿನ ದಿನಗಳಲ್ಲಿ ವೃತ್ತಿ ರಂಗಭೂಮಿ ಕಲಾವಿದರು ಕಣ್ಮರೆಯಾಗುತ್ತಿದ್ದಾರೆ ಎಂದು ಗದಗ-ಬೆಟಗೇರಿ ನಗರಸಭೆ ಸದಸ್ಯ ಅನಿಲ ಗರಗ ಹೇಳಿದರು.
ಬುಧವಾರ ಗಾಂಧಿ ವೃತ್ತದ ಬಳಿ ಇರುವ ಮರಾಠಿ ವಾಙ್ಮಯ ಪ್ರೇಮಿ ಮಂಡಳದ ಸಭಾಭವನದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಲಯ ಕಲಾಮನೆಯ 20ನೇ ವಾರ್ಷಿಕೋತ್ಸವದ ನಿಮಿತ್ತ ರಂಗಚಿತ್ರ ಪ್ರದರ್ಶನ, ಸಂಮಾನ, ರಂಗಗೀತೆಗಳು ಹಾಗೂ ಕಲಾವಿದ ಪ್ರೊ,ವಿ.ಬಿ. ಹಿರೇಗೌಡರ ಶ್ರದ್ಧಾಂಜಲಿ ಮತ್ತು ಅವರ ಕಲಾಕೃತಿ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಆಗದಿರುವುದು ಬೇಸರದ ಸಂಗತಿ. ಯುವಕ-ಯುವತಿಯರು ಸಿನಿಮಾ, ಟೀವಿ, ಕಂಪ್ಯೂಟರ್‌ನ ವ್ಯಾಮೋಹಕ್ಕೆ ಒಳಗಾಗಿದ್ದು, ರಂಗಭೂಮಿ ಕಲೆ ಅವನತಿಯತ್ತ ಸಾಗುತ್ತಿದೆ. ಸರ್ಕಾರವೂ ರಂಗಕಲಾವಿದರನ್ನು ಕಡೆಗಣಿಸುತ್ತಿದೆ. ಸರ್ಕಾರ ಈ ಕೂಡಲೇ ರಂಗ ಕಲಾವಿದರ ನೋವನ್ನು ಅರಿತು, ಅವರಿಗೆ ರು. 10 ಸಾವಿರ ಮಾಶಾಸನ ನೀಡಬೇಕು. ಅಂದಾಗ ಮಾತ್ರ ರಂಗಕಲೆ ನಂಬಿ ಬದುಕುತ್ತಿರುವ ಕಲಾವಿದರ ಕುಟುಂಬಕ್ಕೆ ಆಧಾರವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗ ಕಲಾವಿದ ಬಸವರಾಜ ಬೆಂಗೇರಿ, ಪ್ರಶಸ್ತಿ ಪ್ರದಾನ ಮಾಡಿದ ಅಜಿತ ಘೋರ್ಪಡೆ ಹಾಗೂ ಪ್ರೊ,ಅನ್ನದಾನಿ ಹಿರೇಮಠ ಮಾತನಾಡಿದರು. ಎಸ್.ವಿ. ಚವಡಿ, ಬಿ.ಬಾಬು, ಸುರೇಶ ಕುಂಬಾರ ಉಪಸ್ಥಿತರಿದ್ದರು. ಬೆಟಗೇರಿಯ ಹೊಸಗರಡಿ ದೊಡ್ಡಾಟ ಕಲಾ ಮೇಳದ ಅಶೋಕ ಸುತಾರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಲಯಕಲಾ ಮನೆಯ ಕಾರ್ಯಾಧ್ಯಕ್ಷ ಶಂಕರಗೌಡ ಪಾಟೀಲ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

