ಗದಗ

ಪವಾಡ ಸೃಷ್ಟಿಸುವವರ ಬಗ್ಗೆ ನಿಗಾ ಇರಲಿ

Published On :

ಗದಗ: ಪವಾಡಗಳ ಹೆಸರಿನಲ್ಲಿ ಸುಳ್ಳುಗಳನ್ನು ಸೃಷ್ಟಿಸಿ ಜನರನ್ನು ಮೋಸಗೊಳಿಸುವವರ ಬಗ್ಗೆ ಬಹಳ ಎಚ್ಚರಿಕೆಯನ್ನು ವಹಿಸುವುದು ಅಗತ್ಯವಿದೆ ಎಂದು ಗದಗ ಕೆ.ಎಸ್.ಎಸ್. ಕಾಲೇಜಿನ ಪ್ರೊ. ಜೆ.ಸಿ.ಜಂಪಣ್ಣನವರ ಅಭಿಪ್ರಾಯ ಪಟ್ಟರು. ಈಚೆಗೆ ಅವರು ತಾಲೂಕಿನ ಬಿಂಕದಕಟ್ಟಿಯಲ್ಲಿ ನಡೆಯುತ್ತಿರುವ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ಶಿಬಿರದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಮತ್ತು ಗ್ರಾಮಸ್ಥರನ್ನು ಬಳಸಿಕೊಂಡು ಅನೇಕ ರೀತಿಯ ಪವಾಡಗಳನ್ನು ತೋರಿಸಿ ಅವುಗಳ ಹಿಂದಿನ ಮರ್ಮವನ್ನು ತಿಳಿಸಿಕೊಟ್ಟು ಸುಳ್ಳು ಪವಾಡ ತಿಳಿಸಿದರು. ಕಾಲೇಜಿನ ಉಪನ್ಯಾಸಕ ನವೀನ ತೀರ್ಲಾಪುರ ಮಾತನಾಡಿ, ಜನರು ಪ್ರತಿಯೊಂದು ವಿಷಯಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಪರಾಮರ್ಶಿಸಬೇಕು ಎಂದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹ-ಪ್ರಾಧ್ಯಾಪಕ ಡಾ. ಉಮೇಶ ಅರಹುಣಸಿ ಮಾತನಾಡಿ, ಜನರು ಯಾವುದೇ ಪರಿಶ್ರಮವಿಲ್ಲದೇ ಪವಾಡಗಳ ಮೂಲಕ ಎಲ್ಲವನ್ನು ಪಡೆಯಬೇಕು ಎಂಬ ಮನೋಭಾವನೆಯನ್ನು ತೊರೆಯಬೇಕು ಮತ್ತು ಏನನ್ನಾದರೂ ಪಡೆಯಬೇಕಾದರೆ ತಕ್ಕ ಶ್ರಮದ ಅವಶ್ಯಕತೆ ಇದೆ ಎಂಬುದನ್ನು ಅರಿಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಂಕದಕಟ್ಟಿ ಗ್ರಾಪಂ ಸದಸ್ಯ ಕೃಷ್ಣರಡ್ಡಿ ನಡುವಿನಮನಿ ವಹಿಸಿದ್ದರು. ಕಾಲೇಜಿನ ಅಧೀಕ್ಷಕ ಎಂ.ಎಲ್. ಗೌಡಪ್ಪಗೌಡರ ಮುಂತಾದವರು ಉಪಸ್ಥಿತರಿದ್ದರು. ತೇಜಸ್ವಿನಿ ದೇಸಾಯಿ ಸ್ವಾಗತಿಸಿದರು. ಪ್ರಭು ಅಂಗಡಿ ನಿರೂಪಿಸಿದರು, ಮಂಜುನಾಥ ಅಂಗಡಿ ವಂದಿಸಿದರು.

ಬಿಎಸ್ಸಾರ್,ಗೆ ನೇಮಕ
ಗದಗ:
ಬಿಎಸ್,ಆರ್ ಕಾಂಗ್ರೆಸ್ ಗದಗ ಬೆಟಗೇರಿ ನಗರ ರೈತ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಜಕ್ಕಪ್ಪ ಹುಬ್ಬಳ್ಳಿ ಇವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.