ಆತ್ಮವಿಶ್ವಾಸದ ಬದುಕಿಗೆ ಕ್ರೀಡೆ ಪೂರಕ
ಗದಗ: ಕ್ರೀಡಾ ಚಟುವಟಿಕೆ ಮತ್ತು ಸ್ಪರ್ಧಾತ್ಮಕ ಮನೋಭಾವಗಳ ಬದುಕನ್ನು ಕಟ್ಟಿಕೊಳ್ಳಬೇಕು. ಆತ್ಮವಿಶ್ವಾಸದ ಬದುಕಿಗೆ ಕ್ರೀಡೆಗಳು ಪೂರಕವೆಂದು ಹುಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ ಹೇಳಿದರು. ಈಚೆಗೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯ ಏಕಾಗ್ರತೆ ಸಾಧಿಸಲು ಕ್ರೀಡೆಗಳು ಅವಶ್ಯ. ಮನಸ್ಸು ಮತ್ತು ಆತ್ಮಶುದ್ಧಿಗೆ ಅತ್ಯಾವಶ್ಯಕ ಸಾಧನವಾಗಿದೆ. ಮಕ್ಕಳು ಕ್ರಮಬದ್ಧವಾದ ಕ್ರೀಡೆಗಳಲ್ಲಿ ಹೆಚ್ಚು-ಹೆಚ್ಚಾಗಿ ಭಾಗವಹಿಸಬೇಕು. ಕ್ರೀಡೆಗಳಲ್ಲಿ ಆಸಕ್ತಿಯೊಂದಿದ್ದರೆ ಸಾಲದು ಅದರ ಜತೆಗೆ ಶ್ರದ್ಧೆ, ಪರಿಶ್ರಮ, ಅಭ್ಯಾಸ, ತರಬೇತಿ ಮೊದಲಾದವುಗಳು ಇರಲೇಬೇಕು. ಅಂದರೆ ಕ್ರೀಡೆಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಉಮೇಶ ಅರಹುಣಸಿ, ಪ್ರೊ. ಚಂದ್ರಪ್ಪ ಎಚ್.ಎಸ್, ಕ್ರೀಡಾ ನಿರ್ದೇಶಕ ಭೀಮಪ್ಪ ಆಲೂರು ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಆರ್.ಪಿ. ನದಾಫ್, ನಾಗರಾಜ ಹಾವಿನಾಳ, ಎಫ್.ಬಿ. ಆನಿ, ಡಾ. ಮಾನಪ್ಪ ಹೊನ್ನಕಾಂಬಳೆ, ರಂಜನಾ ಭಂಡಾರೆ, ಸವಿತಾ ಪಾಟೀಲ, ಮುತ್ತಣ್ಣ ಬದನಿಕಾಯಿ, ಪದ್ಮಾ ತಳಕಲ್ಲ, ನವೀನ ತಿರ್ಲಾಪುರ, ಈಶ್ವರ ಚೋಬಾರಿ, ಮಹಾಂತೇಶ ಕರ್ಲವಾಡ, ಡಾ, ಸುಜಾತ ಬರದೂರ, ಮಲ್ಲಿಕಾರ್ಜುನ ಅಂಗಡಿ ಇತರರು ಪಾಲ್ಗೊಂಡಿದ್ದರು. ಚನ್ನಮ್ಮ ಹೂಗಾರ ಸ್ವಾಗತಿಸಿದರು. ಪ್ರೊ. ನವೀನ ತಿರ್ಲಾಪುರ ನಿರೂಪಿಸಿದರು. ಅಶ್ವಿನಿ ಬ್ಯಾಹಟ್ಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

