ಗದಗ

ಕಾಂಗ್ರೆಸ್ಗೆ ಮತ ಕೇಳುವ ನೈತಿಕತೆ ಇಲ್ಲ: ಲಮಾಣಿ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ. 2
ಕೇಂದ್ರದ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ. ಬರೀ ಹಗರಣಗಳಲ್ಲಿ ಸಿಲುಕಿರುವ ಕಾಂಗ್ರೆಸ್ ರಾಜ್ಯದಲ್ಲಿ ವೋಟು ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಬುಧವಾರ ಪಟ್ಟಣದ ಸೋಮೇಶ್ವರ ಸಹಕಾರಿ ನೂಲಿನ ಗಿರಣಿಯಿಂದ ಪಾದಯಾತ್ರೆ ಮೂಲಕ ಪ್ರಚಾರ ಕೈಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು.
ಪಟ್ಟಣದ ವಾರ್ಡ್ಗಳಲ್ಲಿ ಮನೆ ಮನೆಗೆ ತೆರಳಿ ಹಿರಿಯರಿಗೆ, ಮಹಿಳೆಯರಿಗೆ ಕೈಮುಗಿದು ಬಿಜೆಪಿಯ ಗುರುತಿಗೆ ಮತ ನೀಡಿ ನನ್ನನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ವಿನಂತಿಸಿದರು. ಕೇಂದ್ರ ಸರ್ಕಾರ ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿದ್ದರೂ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಕಾಂಗ್ರೆಸ್ ತನ್ನ ಮೇಲಿನ ಕಳಂಕವನ್ನು ಮೊದಲು ತೊಳೆದುಕೊಂಡು ಪರಿಶುದ್ಧವಾಗಿ ಬಂದು ಜನರ ಬಳಿ ಮತ ಕೇಳಬೇಕು. ಬಿಜೆಪಿ ಸರ್ಕಾರವು ರೈತರ, ಬಡವರ, ದೀನ ದಲಿತರ ಪರವಾದ ಸರ್ಕಾರವಾಗಿದೆ ಎಂದರು.  ಪತ್ನಿ ಈರಮ್ಮ ಲಮಾಣಿ, ಜಿಪಂ ಸದಸ್ಯ ಎಂ.ಎಸ್. ದೊಡ್ಡಗೌಡರ, ಚೆಂಬಣ್ಣ ಬಾಳಿಕಾಯಿ, ಬಸಣ್ಣ ಹತ್ತಿಕಾಳ, ಸೋಮಣ್ಣ ಮುಳಗುಂದ, ಪರಸಣ್ಣ ಮುಳಗುಂದ, ನಿಂಗಪ್ಪ ಬನ್ನಿ, ಪುರಸಭೆಯ ಸದಸ್ಯ ರಾಮಣ್ಣ ರಿತ್ತಿ, ನೀಲಪ್ಪ ಹತ್ತಿ, ನಾಗರಾಜ ಚಿಂಚಲಿ, ಚೆಂದ್ರು ಹಂಪಣ್ಣವರ, ಬಸವರಾಜ ಅರಳಿ, ಶಿವಯೋಗಿ ಅಂಕಲಕೋಟಿ, ಉಮೇಶ ಬೆಳವಿಗಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರಾದೇಶಿಕ ಪಕ್ಷಗಳ ಆಧಿಪತ್ಯ
ಕನ್ನಡಪ್ರಭ ವಾರ್ತೆ, ಗದಗ, ಮೇ 2
ಮುಂದಿನ ದಿನಗಳಲ್ಲಿ ರಾಜ್ಯ, ಕೇಂದ್ರದಲ್ಲಿ ಕೆಜೆಪಿಯಂತಹ ಪ್ರಾದೇಶಿಕ ಪಕ್ಷಗಳದ್ದೆ ಆಧಿಪತ್ಯವಾಗಲಿದೆ ಎಂದು ಕೆಜೆಪಿ ಗದಗ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ ಹೇಳಿದರು.
ಅವರು ಈಚೆಗೆ ಕೆಜೆಪಿ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಗೆ ಕಾರಣರಾಗಿದ್ದ ಯಡಿಯೂರಪ್ಪರು ಇಲ್ಲದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಪಡೆಯುವುದು ಕನಸಿನ ಮಾತು. ಯಡಿಯೂರಪ್ಪ ನೇತೃತ್ವದ ಕೆಜೆಪಿ ರಾಜ್ಯಾದ್ಯಂತ ಜಯಭೇರಿ ಬಾರಿಸುವುದು ಖಚಿತ ಎಂದರು.  ಕೆಜೆಪಿ ಅಧ್ಯಕ್ಷ ಬಿಎಸ್ವೈ ರಾಜ್ಯದ ಸಿಎಂ ಆಗಿದ್ದ ವೇಳೆಯಲ್ಲಿ ರಾಜ್ಯದ ಆದಾಯದ ಮೇಲೆ ಸದಾ ಕಣ್ಣಿಟ್ಟು ಎಲ್ಲೂ ಸೋರಿಕೆಯಾಗದಂತೆ ಎಚ್ಚರ ವಹಿಸಿ, ಕೇವಲ 3 ವರ್ಷಗಳಲ್ಲಿ ರು. 30 ಸಾವಿರ ಕೋಟಿಗಳಿದ್ದ ಆಯ-ವ್ಯಯವನ್ನು 1ಲಕ್ಷ ಕೋಟಿಗೆ ಏರಿಸಿದ್ದು, ರಾಜ್ಯದ ಇತಿಹಾಸದಲ್ಲೇ ಒಂದುದೊಡ್ಡ ಸಾಧನೆ. ಅನ್ನದಾತನ ನೆರವಿಗಾಗಿ 17800 ಕೋಟಿಗಳ ಬೃಹತ್ ಗಾತ್ರದ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದು, ಭಾರತದಲ್ಲೇ ಪ್ರಪ್ರಥಮ. ಶೇ. 1ರ ಬಡ್ಡಿ ದರದಲ್ಲಿ ಕೃಷಿ ಸಾಲ, ಶೇ. 0 ಕೃಷಿ ಸಾಲ, ಸಾಲಮನ್ನಾ ಹೀಗೆ ಹಲವು ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳುವ ಮೂಲಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವಲ್ಲಿ ಶ್ರಮಿಸಿದವರಾಗಿದ್ದಾರೆ. ಇಂತಹ ಅಭಿವೃದ್ಧಿ ಕಾರ್ಯ ಕೈಗೊಂಡ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ರಾಜ್ಯದಲ್ಲಿ ಬಹುಮತದ ಗೆಲುವು ಸಾಧಿಸುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೀರಿಗೆ ಶಾಶ್ವತ ಪರಿಹಾರ: ಬಿದರೂರ
ಗದಗ:  ಗದಗ ನಗರಕ್ಕೆ 18 ತಿಂಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ದೊರೆಯಲಿದೆ ಎಂದು ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ಹೇಳಿದರು.  ಅವರು ಈಚೆಗೆ ನಗರದ ವಾರ್ಡ್ 33, 35 ರಲ್ಲಿ ಮನೆ-ಮನೆಗೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವದಿಯಲ್ಲಿ ನಗರಕ್ಕೆ ಎರಡನೆಯ ಹಂತದ ಕುಡಿಯುವ ನೀರಿನ ಯೋಜನೆ, 250 ಹಾಸಿಗೆವುಳ್ಳ ಜಿಲ್ಲಾಸ್ಪತ್ರೆ, ಪಶು ವೈದ್ಯಕೀಯ ಕಾಲೇಜು, ಮೆಡಿಕಲ್ ಕಾಲೇಜು, ಕಾಂಕ್ರಿಟ್ ರಸ್ತೆಗಳು, ಮಲೀನ ನೀರು ಶುದ್ಧೀಕರಣ ಘಟಕ (ಎಸ್.ಟಿ.ಪಿ) ಬಸವೇಶ್ವರ, ಮಹಾತ್ಮಾ ಗಾಂಧಿ ಪುತ್ಥಳಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಬಿಜೆಪಿ ಅಧಿಕಾರದಲ್ಲಿ ನಡೆದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿದ್ದೇವೆ ಎಂದು ಹೇಳುತ್ತಿರುವ ಇತರೆ ಪಕ್ಷಗಳಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಮಾದರಿಯನ್ನಾಗಿಸಲು ನನ್ನ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಆವಶ್ಯಕತೆ ಇದೆ ಎಂದರು. ಜಗನ್ನಾಥಸಾ ಬಾಂಡಗೆ, ವಿಠ್ಠಲ ಬಾಂಡಗೆ, ಶ್ರೀಕಾಂತಸಾ ಖಟವಟೆ, ಶ್ರೀನಿವಾಸ ಬಾಂಡಗೆ, ಸಿದ್ಧಣ್ಣ ಮಾರನಬಸರಿ, ಶ್ರೀಶೈಲಪ್ಪ ಚಳಗೇರಿ, ಆನಂದ ಶೇಠ, ವಿಶ್ವನಾಥ ಸೂಳಂಕಿ, ಮಂಜುನಾಥ ವೀರಲಿಂಗಯ್ಯಮಠ, ಬಾಬು ಸಿದ್ಲಿಂಗ, ಸುಧೀರ ಕಾಟೀಗರ, ವಿಜಯಕುಮಾರ ಕಳ್ಳಿಗುಡ್ಡ, ವಿಕ್ರಮ ಶೇಠ, ಮಂಜುನಾಥ ಪುಟ್ಟಪ್ಪನವರ, ವೀರೇಶ ಪುರದ, ಪಟ್ಟಣಶೆಟ್ಟರ, ಪ್ರಕಾಶ ಗೋಣೆ, ಬಾಲು ಕಾಟವಾ, ಪ್ರಶಾಂತ ನಾಯ್ಕರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.