ಜನರಿಂದ ಬೆಂಬಲ: ಬಿದರೂರ
ಗದಗ: ಐದು ವರ್ಷಗಳಲ್ಲಿನ ನನ್ನ ಅಧಿಕಾರಾವಧಿಯಲ್ಲಿ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಮತದಾರರು ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯ ಗಮನಿಸಿ ಮತ ನೀಡುವಂತೆ ಶಾಸಕ ಹಾಗೂ ಗದಗ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ಹೇಳಿದರು.
ಈಚೆಗೆ ಅವರು ನಗರದ 10ನೇ ವಾರ್ಡ್ನಲ್ಲಿ ನಗರಸಭೆ ಸದಸ್ಯ ಮಾಧವ ಗಣಾಚಾರಿ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು. ಹೋದಲ್ಲೆಲ್ಲ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಕಾಂತಿಲಾಲ ಬನ್ಸಾಲಿ, ಶ್ರೀಕಾಂತ ಖಟವಟೆ, ತೋಟಸಾ ಭಾಂಡಗೆ, ಸದಾನಂದ ಪಿಳ್ಳಿ, ಪರಶುರಾಮ ಹೆಬಸೂರ, ಶ್ರೀನಿವಾಸ ಭಾಂಡಗೆ, ಜಗನ್ ರಾಜಪುರೋಹಿತ, ಶಿವಾಜಿ ಸಿಂಗದ, ಜಗದೀಶ ನೀಲಕಂಠಮಠ, ಕಿಟ್ಟು ಬಸಣ್ಣವರ, ಶೇಖಪ್ಪ ಕರಬಿಷ್ಠಿ, ದೇವಪ್ಪ ಚಿಕ್ಕಣ್ಣವರ, ಬಸವರಾಜ ಹರ್ತಿ, ಭಾಷಾಸಾಬ್ ಅಣ್ಣಿಗೇರಿ, ಶಿವಾನಂದ ಬಾರಕೇರ, ಈಶ್ವರ ಮಾನೇದ, ಅಶೋಕ ಬಾರಕೇರ, ಶಿವಾನಂದ ವಸ್ತ್ರದ, ಮಂಜು ವಸ್ತ್ರದ, ಈಶಪ್ಪ ಚಿಕ್ಕಣ್ಣವರ, ಬಸವರಾಜ ಚೌಡಕಿ, ಹುಚ್ಚಯ್ಯ ವಸ್ತ್ರದ, ಲಕ್ಷ್ಮ ನಾವಳ್ಳಿ, ಲಕ್ಷ್ಮೀದೇವಿ ನಾಯ್ಡು, ತಿಪ್ಪಮ್ಮ ಬಾಗೋಡಿ, ಸತ್ಯಮ್ಮ ಗುಜಮಾಗಡಿ, ವಿಜಯಲಕ್ಷ್ಮೀ ಕಲಾಲ ಮುಂತಾದವರು ಪಾಲ್ಗೊಂಡಿದ್ದರು.
ಅಭಿವೃದ್ಧಿಗೆ ಕೆಜೆಪಿ ಗೆಲ್ಲಿಸಿ: ರಾಜಶ್ರೀ
ರೋಣ: ರೋಣ ಮತ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಜನತೆ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೆಜೆಪಿಯನ್ನು ಗೆಲ್ಲಿಸಿ ಎಂದು ಕೆಜೆಪಿ ಅಭ್ಯರ್ಥಿ ಶರಣಬಸಪ್ಪ ಮೆಣಸಿನಕಾಯಿ ಅವರ ಪರವಾಗಿ ಪತ್ನಿ ರಾಜಶ್ರೀ ಮನವಿ ಮಾಡಿದರು.
ಬುಧವಾರ ಪಟ್ಟಣದ ಸಂತೋಜಿ ಓಣಿ, ಹೋರಪೇಟಿ ಓಣಿ, ಅಂಬೇಡ್ಕರ್ ನಗರ, ಸಾಂಬಾರ ಚಾಳ, ಶ್ರೀನಗರ, ಕಲ್ಯಾಣ ನಗರ ಮುಂತಾದ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಸ್ವಾತಂತ್ರ್ಯ ಬಂದು 65 ವರ್ಷವಾದರೂ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಡವರ, ರೈತರ, ಶ್ರಮಿಕರ, ಕಾರ್ಮಿಕ, ವಿದ್ಯಾರ್ಥಿಗಳ, ಮಹಿಳೆಯರ ಏಳ್ಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಇಂದಿಗೂ ಜನತೆ ಮನದಲ್ಲಿವೆ. ರಾಜ್ಯ ಮತ್ತು ಕ್ಷೇತ್ರಕ್ಕೆ ಬಿಎಸ್ವೈ ಕೊಡುಗೆ ಅಪಾರವಾಗಿದೆ. ಅವರ ಅಭಿವೃದ್ಧಿಪರ ಕಾರ್ಯಗಳೇ ಕೆಜೆಪಿ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.
ವಿಜಯಲಕ್ಷ್ಮೀ ಬುಳ್ಳಾ, ಕಮಲಾ ಪಪ್ತಿ, ಲಕ್ಷ್ಮವ್ವ ಮೆಣಸಗಿ, ಬಂದೆಮ್ಮ ಹರಳಿಕಟ್ಟಿ, ಸರಳಾ ಚಿತ್ತರಗಿ, ಹುಸೇನಸಾಬ ಭಾಗವಾನ, ರಾಜು ರಾಠೋಡ, ಕಳಕೇಶ ಅರಸಿದ್ದಿ, ಮಹಬೂಬ ರಾಟಿ ಭಾಗವಹಿಸಿದ್ದರು.
ಕಳಕಪ್ಪ ಬಂಡಿ ಮತಯಾಚನೆ
ರೋಣ: ರಾಜ್ಯದಲ್ಲಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಕಲ್ಯಾಣನಗರ, ಶ್ರೀನಗರ, ಸಿದ್ಧಲಿಂಗೇಶ್ವರ ನಗರ, ಹೊರಪೇಟಿ ಓಣಿ, ಲಿಂಗನಗೌಡ್ರ ಓಣಿ, ಸಂತೋಜಿಯವರ ಓಣಿ, ಬಸವೇಶ್ವರ ನಗರ, ಜಗ್ಗಲ ಓಣಿ ಸೇರಿದಂತೆ ಹಲವಡೆ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.
ರೋಣ ಕ್ಷೇತ್ರದಲ್ಲಿ ರಸ್ತೆ, ನೀರು, ಶಿಕ್ಷಣ ಸೇರಿದಂತೆ ಅನೇಕ ಸೌಕರ್ಯಗಳನ್ನು ಜನತೆಗೆ ಸಮರ್ಪಕವಾಗಿ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಹಾಕಿಕೊಂಡ ಯೋಜನೆಗಳು ಫಲಕಾರಿಯಾಗಲು ಮತದಾರ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದರು. ಅಶೋಕ ನವಲಗುಂದ, ಮುತ್ತಣ್ಣ ಲಿಂಗನಗೌಡ್ರ, ಅರ್ಜುನ ಕೊಪ್ಪಳ, ಗುರುರಾಜ ಕುಲಕರ್ಣಿ, ಶಿವಣ್ಣ ಪಲ್ಲೇದ, ಶಿವಾನಂದ ಜಿಡ್ಡಿಬಾಗೀಲ, ವೀರೇಶ ದೊಡ್ಡಣ್ಣವರ, ಕಳಕಪ್ಪ ಸಂತೋಜಿ, ಶ್ರೀಧರ ದಲಬಂಜನ, ಸಂಗಪ್ಪ ಜಿಡ್ಡಿಬಾಗಿಲ, ಪುರಸಭೆ ಸದಸ್ಯ ಬಸನಗೌಡ ಪಾಟೀಲ, ಬಸವರಾಜ ರಂಗನಗೌಡ್ರ, ಮುದಿಯಪ್ಪ ಜೋಗಣ್ಣವರ ಮುಂತಾದವರು ಭಾಗವಹಿಸಿದ್ದರು.
ಅವಳಿ ನಗರದಲ್ಲಿ ಮಳೆ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಗುರುವಾರ ಸಂಜೆ ರಭಸದ ಗಾಳಿಯಿಂದ ಕೂಡಿದ ಮಳೆಯಾದ ಘಟನೆ ಜರುಗಿದೆ. ಮಳೆಯ ವೇಳೆ ಬೀಸಿದ ಗಾಳಿಯಿಂದ ವಿವಿದೆಡೆ ಹಲವಾರು ವಿದ್ಯುತ್ ಕಂಬಗಳು, ಮರಗಳು ನೆಲಕ್ಕೆ ಉರುಳಿದ ಹಿನ್ನೆಲೆಯಲ್ಲಿ ಅವಳಿ ನಗರದಾದ್ಯಂತ ಸಂಜೆಯಿಂದ ವಿದ್ಯುತ್ ನಿಲುಗಡೆಯಾಗಿ ಸಾರ್ವಜನಿಕರು ಪರದಾಡುವಂತಾಯಿತು. ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಮುಖ್ಯರಸ್ತೆಯ ವಿದ್ಯುತ್ ಕಂಬವೊಂದು ಬಿದ್ದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಸ್ತವ್ಯಸ್ಥವಾಯಿತು. ಮಳೆಗಿಂತ ಜೋರಾಗಿ ಬೀಸಿದ ಗಾಳೆಯೇ ಹಲವು ತೊಂದರೆಗಳಿಗೆ ಕಾರಣವಾಯಿತು.
ಬಿಜೆಪಿಗೆ ತಕ್ಕ ಪಾಠ ಕಲಿಸಿ: ಯಾವಗಲ್ಲ
ಗದಗ: 5 ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ರಾಜ್ಯವನ್ನು ಅದೋಗತಿಗೆ ತಂದಿದ್ದು, ಈ ಬಾರಿ ಮತದಾರರೂ ಬಿಜೆಪಿಗೆ ತಕ್ಕ ಪಾಠ ಕಲಿಸುವಂತೆ ನರಗುಂದ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್ಲ ಮನವಿ ಮಾಡಿದರು.
ಅವರು ಮಂಗಳವಾರ ನರಗುಂದ ವಿಧಾನಸಭೆ ಕ್ಷೇತ್ರದ ಹೊಂಬಳ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಸಮಾಜದ ಎಲ್ಲ ವರ್ಗಗಳನ್ನು ಬೆಳಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಶ್ರಮಿಸುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಡಿ.ಆರ್. ಪಾಟೀಲ, ಬಿ.ಆರ್. ಹಿರೇಗೌಡ್ರ, ದೇಸಾಯಿಗೌಡ ಪಾಟೀಲ, ಗಿರೀಶಗೌಡ ಪಾಟೀಲ ಮಾತನಾಡಿ, ನರಗುಂದ ಮತಕ್ಷೇತ್ರ ಪಕ್ಷದ ಅಭ್ಯರ್ಥಿ ಬಿ.ಆರ್.ಯಾವಗಲ್ಲಗೆ ಮತ ನೀಡುವಂತೆ ಮನವಿ ಮಾಡಿದರು.
ಎಚ್.ಜಿ. ಹಿರೇಗೌಡ್ರ, ತಾಪಂ ಅಧ್ಯಕ್ಷ ಶೇಖಅಬ್ದುಲ್ ಕರೀಂ ಕರೂರ, ಗ್ರಾಪಂ ಅಧ್ಯಕ್ಷೆ ರೇಣುಕಾ ಪರಸಪ್ಪನವರ, ಉಪಾಧ್ಯಕ್ಷೆ ರತ್ನಮ್ಮ ಲಕ್ಕುಂಡಿ, ವಿ.ಜಿ. ಕನಾಜ, ಪಿ.ಜಿ. ಕೊರವನವರ, ಎಚ್.ಎಂ. ಸೊಪ್ಪಿನ, ಸಿ.ಎಸ್. ರಾಜೂರ, ಆರ್.ಡಿ. ಹೊಸಮನಿ, ಎಚ್.ಎನ್. ಹಾದಿಮನಿ, ಎಂ.ಎಚ್. ಬಾಳಮ್ಮನವರ, ಸಿ.ಬಿ. ಬೂದಿಹಾಳ, ಜಿ.ಎಫ್. ಕೆಂಬಾವಿಮಠ, ಬಿ.ವೈ. ಕುಂದರಗಿ, ಕೆ.ಎಂ. ಹೊಳಗಿ, ಫಕ್ಕೀರಪ್ಪ ಹೆಬಸೂರ, ಕೆ.ಜಿ. ಫಲದೊಡ್ಡಿ, ನಿಂಗಪ್ಪ ಪಡಗದ ಮುಂತಾದವರು ಪಾಲ್ಗೊಂಡಿದ್ದರು. ಐ.ಎಸ್. ಹುಣಸಿಕಟ್ಟಿ ನಿರೂಪಿಸಿದರು.
ಚುನಾವಣೆ: ವಾಹನ ಸೌಲಭ್ಯ
ಗದಗ: ಮೇ 5 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲೆಯ ಶಿರಹಟ್ಟಿ, ರೋಣ ಮತ್ತು ನರಗುಂದ ಮತಕ್ಷೇತ್ರಗಳಿಗೆ ಗದಗದಿಂದ ಚುನಾವಣಾ ಕಾರ್ಯಕ್ಕೆ ವಾಹನಗಳು ತೆರಳಲಿವೆ. ಈ ವಿಧಾನಸಭಾ ಮತ ಕ್ಷೇತ್ರಗಳಿಗೆ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಅಥವಾ ಸಿಬ್ಬಂದಿ ಈ ವಾಹನಗಳಲ್ಲಿ ತಮ್ಮ ಕಾರ್ಯಕ್ಷೇತ್ರಕ್ಕೆ ತೆರಳಬಹುದಾಗಿದೆ. ಈ ವಾಹನಗಳು ಮೇ 4 ರಂದು ಬೆಳಗ್ಗೆ 6 ಗಂಟೆಗೆ ಗದಗನ ಮುನ್ಸಿಪಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೈದಾನದಿಂದ ಹೊರಡಲಿವೆ. ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಈ ಸೌಲಭ್ಯದ ಲಾಭ ಪಡೆದುಕೊಳ್ಳುವಂತೆ ಗದಗದ ಉಪ ವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಸಾರಾಯಿ ವಶ
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಗ್ರಾಮದ ಮುತ್ತಪ್ಪ ನಾರಾಯಣಪ್ಪ ಕಲಾಲ ಎಂಬುವರು ಮನೆಯಲ್ಲಿ ಅನಧಿಕೃವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ರು. 4.248 ಮೌಲ್ಯದ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ವಶ
ನರಗುಂದ: ತಾಲೂಕಿನ ಜಗಾಪುರ ಗ್ರಾಮಕ್ಕೆ ಭೇಟಿ ನೀಡಿದ ಚುನಾವಣಾಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 46 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರ ಜರುಗಿದೆ. ಸುಮಾರು ರು. 20 ಸಾವಿರ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯು ಪರಾರಿಯಾಗಿದ್ದಾನೆ. ಈ ಕುರತು ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ: ಓರ್ವ ಸಾವು
ನರಗುಂದ: ನೀರು ತರಲು ಹೋದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಕುರ್ಲಗೇರಿ ಗ್ರಾಮದ ಬಳಿ ಜರುಗಿದೆ. ಅಪರಿಚಿತ ವಾಹನವು ಲಕ್ಷ್ಮಣ ತಳವಾರ (24) ಇವರಿಗೆ ಡಿಕ್ಕಿ ಹೊಡೆದಿದ್ದು ತೀವ್ರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ನರಗುಂದ ಆಸ್ಪತ್ರೆಗೆ ದಾಖಲಿಸಲು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಳಿ: ಬಟ್ಟೆ ವಶ
ಗದಗ: ಬೆಟಗೇರಿಯ ಕಂಗೂರಿ ಓಣಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ಗೆ ಮತ ನೀಡುವಂತೆ ಮತದಾರರಿಗೆ ಸೀರೆ, ಪ್ಯಾಂಟ್, ಶರ್ಟ್ ಬಟ್ಟೆಗಳನ್ನು ವಿತರಿಸುವ ಸಂದರ್ಭದಲ್ಲಿ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ರು. 21050 ಮೌಲ್ಯದ ಬಟ್ಟೆಗಳನ್ನು ವಶ ಪಡಿಸಿಕೊಂಡಿದ್ದಾರೆ. ಇಲ್ಲಿನ ನಿವಾಸಿ ಕೊಟ್ರೇಶ ಮಲ್ಲೇಶ ಐಲಿ ಎಂಬುವರು ಬಟ್ಟೆಗಳನ್ನು ಹಂಚುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

