ಲಕ್ಷ್ಮೇಶ್ವರ: ಸಂಜೆ ಹೊತ್ತಿಗೆ ಬಿರುಸಿನ ಮತದಾನ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 5
ಸಮೀಪದ ಸುರಣಗಿ ಗ್ರಾಮದ ಬೂತ್ ನಂ 171ರಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಮತಯಂತ್ರ ಕೈಕೊಟ್ಟು 1 ಗಂಟೆಗೆ ಹೆಚ್ಚು ಕಾಲ ಮತದಾನ ಪ್ರಕ್ರಿಯೆ ಬಂದ್ ಆದ ಘಟನೆ ಜರುಗಿದ್ದು, ನಂತರ ಅಧಿಕಾರಿಗಳು ಮತಯಂತ್ರವನ್ನು ಸರಿಪಡಿಸಿ ಮತದಾನ ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಡಲಾಯಿತು. ಇದನ್ನು ಹೊರತುಪಡಿಸಿದರೆ ಬೇರೆಡೆ ಯಾವುದೆ ತೊಂದರೆಯಾದ ಬಗ್ಗೆ ತಿಳಿದು ಬಂದಿಲ್ಲ.
ಭಾನುವಾರ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಪಟ್ಟಣದಲ್ಲಿ ಬಹುತೇಕ ಶಾಂತಿಯುತವಾಗಿ ಸಾಗಿತು. ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಬೆಳಗ್ಗೆ ತುಸು ನಿಧಾನಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ಮಧ್ಯಾಹ್ನ ಹೊತ್ತಿಗೆ ತುಸು ವೇಗ ಪಡೆದುಕೊಂಡು ಸಂಜೆಯ ವೇಳೆಗೆ ಬಿರುಸಿನಿಂದ ಮತದಾರರು ಮತ ಚಲಾಯಿಸಿದ ದೃಶ್ಯ ಸಾಮಾನ್ಯವಾಗಿತ್ತು. ಮತದಾರರಿಗೆ ಚುನಾವಣಾ ಆಯೋಗ ವಿತರಿಸಿದ್ದ ಗುರುತಿನ ಚೀಟಿಗಳು ಸರಿಯಾಗಿ ತಲುಪಿರದ ಕಾರಣ ಬೆಳಗ್ಗೆ ಮತದಾರರಲ್ಲಿ ಕೊಂಚ ಗಲಿಬಿಲಿ ಉಂಟಾಗಿತ್ತು. ನಂತರ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಚೀಟಿ ವಿತರಿಸುವ ಕಾರ್ಯದಲ್ಲಿ ತೊಡಗಿ ಸಮಸ್ಯೆ ಬಗೆಹರಿಸಿದರು. ಮಧ್ಯಾಹ್ನ 4ರ ವರೆಗೆ ಶೇ. 45ರಷ್ಟು ಮತದಾನವಾದ ಬಗ್ಗೆ ಲಕ್ಷ್ಮೇಶ್ವರದ ಉಪ ತಹಸೀಲ್ದಾರ್ ಮೋಹನ ಕಟ್ಟಿಮನಿ ತಿಳಿಸಿದರು. ಶಾಸಕ ರಾಮಣ್ಣ ಲಮಾಣಿ ಸ್ವಗ್ರಾಮ ಕುಂದ್ರಳ್ಳಿಯಲ್ಲಿ ಬೆಳಗ್ಗೆ ಮತಚಲಾಯಿಸಿ ಗೆಲವು ನನ್ನದೆ ಎಂದು ಮುಗುಳ್ನಗೆ ಬೀರಿದರು. ಬೆಳಗ್ಗೆ ಕೆಜೆಪಿಯ ಅಭ್ಯರ್ಥಿ ಶೋಭಾ ಲಮಾಣಿ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ನಂ 2ರಲ್ಲಿ ಮತ ಚಲಾಯಿಸಿದರು. ಮಾಜಿ ಶಾಸಕ ಬಿಎಸ್ಆರ್ ಕಾಂಗ್ರೆಸ್ನ ಗದಗ ಜಿಲ್ಲಾಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ ಪಟ್ಟಣದ ಚಾವಡಿಯಲ್ಲಿ ಮತ ಚಲಾಯಿಸಿದರು. ಸಮೀಪದ ಮುಕ್ತಿಮಂದಿರ ವಿಮಲ ರೇಣುಕ ವೀರ ಮುಕ್ತಿಮುನಿ ಶ್ರೀಗಳು ಪಟ್ಟಣದ ಸರ್ಕಾರಿ ಹೆಣ್ಣುಮಕ್ಕಳ ಶಾಲೆ ನಂ 2ರಲ್ಲಿ, ಕಾಂಗ್ರೆಸ್ ಪಕ್ಷದ ರಾಜ್ಯ ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಟಿ. ಈಶ್ವರ ಪಟ್ಟಣದ ಇಂದಿರಾ ನಗರದ ಶಾಲೆಯಲ್ಲಿ ಮತ ಚಲಾಯಿಸಿದರು. ಪೊಲೀಸ್ ಇಲಾಖೆ ಮತ್ತು ಅರೆ ಸೇನಾ ಪಡೆಗಳು ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

