ಗದಗ

ಗೆಲ್ಲುವ ಹುಮ್ಮಸ್ಸಿನಲ್ಲಿ ಈಜು-ಮೋಜು

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 6
ವಿಧಾನಸಭಾ ಚುನಾವಣೆಗೆ ಶಿರಹಟ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಏ. 6ರಂದು ಘೋಷಣೆ ಆದಾಗಿನಿಂದ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರಾಮಕೃಷ್ಣ ದೊಡ್ಡಮನಿ ಮೇ 5ರ ಮತದಾನದ ಬಳಿಕ ನಿರಾಳರಾಗಿದ್ದಾರೆ. ಸೋಮವಾರ ಬೆಳಗ್ಗೆ ತಮ್ಮ ಮಕ್ಕಳು, ಮೊಮ್ಮಕ್ಕಳು, ಅಳಿಯರು ಹಾಗೂ ಸ್ನೇಹಿತರೊಂದಿಗೆ ಈಜುಗೊಳಕ್ಕೆ ತೆರಳಿ, ಈಜಾಡುತ್ತ ಮೋಜಿನಲ್ಲಿ ತೊಡಗಿದ್ದರು.
ಟಿಕೆಟ್‌ಗಾಗಿ ಶ್ರಮಿಸಿದ ಫಲವಾಗಿ ಅಧಿಕೃತ ಅಭ್ಯರ್ಥಿಯಾಗಿ ದೊಡ್ಡಮನಿ ಘೋಷಣೆಯಾದರು. ಅಂದಿನಿಂದಲೂ ಶಿರಹಟ್ಟಿ ಕ್ಷೇತ್ರಕ್ಕೆ ಬರುವ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕಿನ ಕೆಲವು ಭಾಗಗಳಿಗೆ ನಿರಂತರವಾಗಿ ಭೇಟಿ ನೀಡಿ, ಮತದಾರರನ್ನು ಮಾತನಾಡಿಸಿದರು. ಈ ಆಯಾಸ ಕಳೆಯಲು ಸೋಮವಾರ ಬೆಳಗ್ಗೆ ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ರವೀಂದ್ರ ಉಪ್ಪಿನಬೆಟಗೇರಿ ಅವರ ಜಮೀನಿನಲ್ಲಿರುವ ಸ್ವಿಮಿಂಗ್ ಪೂಲ್‌ಗೆ ತಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ತೆರಳಿದ ಅವರು, ಬಿಸಿಲು ಹಾಗೂ ಚುನಾವಣೆ ಕಾವನ್ನು ತಣಿಸಿಕೊಳ್ಳಲು ಯತ್ನಿಸಿದರು.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ರಾಮಕೃಷ್ಣ ದೊಡ್ಡಮನಿ, ಚುನಾವಣೆ ನಿಗದಿಯಾದಾಗಿನಿಂದಲೂ ಕ್ಷೇತ್ರದ ಕಾಂಗ್ರೆಸ್ ಮುಖಂಡರೊಂದಿಗೆ ಅತಿ ಹೆಚ್ಚು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಭಾನುವಾರ ಮತದಾನವಾದ ಹಿನ್ನೆಲೆಯಲ್ಲಿ ಎಲ್ಲ ವಿಚಾರಗಳನ್ನು ಬದಿಗಿಟ್ಟು ತಾವು ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಈಜಾಟದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು.
ಎ.ಪಿ. ದಂಡಿನ, ವೀರೇಶ ಕುಬಸದ, ಧೃವಕುಮಾರ ಹೊಸಮನಿ, ಶೇಖರಾಜ ಹೊಸಮನಿ, ಲೋಕೇಶ ದೊಡ್ಡಮನಿ, ಶಶಿಧರ ಹೊಸಮನಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.