ಗದಗ

ಎಸ್ಸೆಸ್ಸೆಲ್ಸಿ: ಸುಮತಿ ಗೌರಿ ಜಿಲ್ಲೆಗೆ ಪ್ರಥಮ

Published On :

 ನಿಂಗರಾಜ ಬೇವಿನಕಟ್ಟಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಮೇ 7
ಕಠಿಣ ಪರಿಶ್ರಮ, ಪ್ರಯತ್ನದಿಂದ ನಿರೀಕ್ಷಿತ ಪ್ರತಿಫಲ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿ ಸ್ಥಳೀಯ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಮತಿ ಎಲ್. ಗೌರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 618 ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ.
2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸ್ಥಳೀಯ ಅನ್ನದಾನ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಮತಿ ಎಲ್. ಗೌರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ತನ್ನ ಪ್ರತಿಭೆ ಮೆರೆದಿದ್ದಾಳೆ.
ಪರೀಕ್ಷೆಯಲ್ಲಿ ನನಗೇನು ಭಯವಾಗಲಿಲ್ಲ. ಮೌಲ್ಯಮಾಪನ ಯಾವ ರೀತಿ ಮಾಡುತ್ತಾರೆಂಬ ಭಯವಿತ್ತು. ಆದರೆ, ಉತ್ತಮ ಫಲಿತಾಂಶ ನನಗೆ ದೊರೆತಿದ್ದು ಸಂಪೂರ್ಣ ತೃಪ್ತಿ ತಂದಿದೆ. 625ಕ್ಕೆ 618 ಅಂಕ ಪಡೆದಿರುವುದು ಸಂತಸದ ಸಂಗತಿ.
ನಾನು ಅಭ್ಯಾಸವನ್ನು ಇಷ್ಟಪಟ್ಟು ಮಾಡುತ್ತಿದ್ದೆ. ಸಮಯವನ್ನು ಅನಾವಶ್ಯಕವಾಗಿ ವ್ಯಯ ಮಾಡದೇ ವಿದ್ಯಾಭ್ಯಾಸಲ್ಲಿ ತೊಡಗುತ್ತಿದ್ದೆ, ರಾತ್ರಿ ಸರಿಯಾಗಿ 10 ಗಂಟೆಗೆ ಮಲಗುತ್ತಿದ್ದೆ. ಮತ್ತು ಬೆಳಗ್ಗೆ 5.30ಕ್ಕೆ ಏಳುತ್ತಿದ್ದೆ. ಕ್ಲಿಷ್ಟಕರವೆನಿಸುವ ವಿಷಯವನ್ನು ಮೊದಲು ಓದಿ ನಂತರ ಉಳಿದ ವಿಷಯವನ್ನು ಅಭ್ಯಸಿಸುತ್ತಿದ್ದೆ. ಇದಕ್ಕೆ ನನಗೆ ಉತ್ತಮ ಪ್ರತಿಫಲ ದೊರೆತಿದೆ ಎನ್ನುತ್ತಾಳೆ ಸಾಧನೆಗೈದ ವಿದ್ಯಾರ್ಥಿನಿ. ಕನ್ನಡ-125, ಇಂಗ್ಲೀಷ-98, ಹಿಂದಿ-98, ಗಣಿತ-100, ವಿಜ್ಞಾನ-98 ಮತ್ತು ಸಮಾಜ ವಿಜ್ಞಾನದಲ್ಲಿ-99 ಅಂಕ ಪಡೆದು ಎಲ್ಲರೂ ನಿಬ್ಬೆರಾಗಾಗುವಂತೆ ಮಾಡಿದ್ದಾಳೆ.
8 ತಿಂಗಳಿಂದ ಮನೆಯಲ್ಲಿ ಟಿವಿಯನ್ನು ಸ್ಥಗಿತಗೊಳಿಸಿದ್ದಾರೆ.  ಆಧುನಿಕತೆಯ ವೈಭವೀಕರಣದ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ದೂರದರ್ಶನದಿಂದ ದೂರ ಉಳಿದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯ. ಹೀಗಾಗಿ ಮೊಬೈಲ್ ಹಾಗೂ ದೂರದರ್ಶನದಿಂದ ದೂರ ಉಳಿಯಬೇಕಾಯಿತು. ಪಿಯುಸಿ ವಿಭಾಗದಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು, ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯಬೇಕೆಂಬ ಆಸೆ ವ್ಯಕ್ತಪಡಿಸಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.