ಹಾವೇರಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿದ್ದೂ ಕಾರಣ
ಗದಗ: ಗದಗ ಜಿಲ್ಲೆಯಲ್ಲಿ ಬಿಜೆಪಿ ಹಿನ್ನಡೆಗೆ ಹಾವೇರಿ ಕೇಂದ್ರೀಕೃತ ರಾಜಕೀಯ ಬೆಳೆದು ಬಂದದ್ದು ಮತ್ತೊಂದು ಪ್ರಮುಖ ಕಾರಣ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳು ಹಾಗೂ ನಿಗಮ ಮಂಡಳಿಗಳಿಗೂ ಹಾವೇರಿ ಜಿಲ್ಲೆಯವರನ್ನೇ ನೇಮಕ ಮಾಡಲಾಗಿದೆ. ಶಿಕ್ಷಕರ ಕ್ಷೇತ್ರದ ಟಿಕೆಟ್ ಹಾವೇರಿ ಜಿಲ್ಲೆಯ ಕುಬೇರಪ್ಪಗೆ, ಪದವಿಧರ ಕ್ಷೇತ್ರದ ಟಿಕೆಟ್ ಧಾರವಾಡ ಜಿಲ್ಲೆಯ ಮೋಹನ ಲಿಂಬಿಕಾಯಿಗೆ, ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಟಿಕೆಟ್ ಹಾವೇರಿ ಜಿಲ್ಲೆಯ ಶಿವರಾಜ ಸಜ್ಜನಗೆ, ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಹಾವೇರಿ ಜಿಲ್ಲೆಯ ಶಿವಕುಮಾರ ಉದಾಸಿಗೆ, ಎಂಎಲ್ಸಿಗೆ ನಾಮನಿರ್ದೇಶನ ಮಾಡಿದ್ದು ಹಾವೇರಿ ಜಿಲ್ಲೆಯ ಸೋಮಣ್ಣ ಬೇವಿನಮರದರನ್ನು. ಈ ರೀತಿಯಾಗಿ ಬಹುತೇಕ ನಿಗಮ ಮಂಡಳಿಗಳಿಗೆ ಹಾವೇರಿ ಹಾಗೂ ಧಾರವಾಡ ಜಿಲ್ಲೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಐದು, ಗದಗ ಜಿಲ್ಲೆಯಲ್ಲಿ ನಾಲ್ಕು ಬಿಜೆಪಿ ಶಾಸಕರಿದ್ದಾರೆ. ಐದು ಬಿಜೆಪಿ ಶಾಸಕರಿದ್ದ ಹಾವೇರಿ ಜಿಲ್ಲೆಗೆ ಆದ್ಯತೆ ನೀಡಿದಷ್ಟು, ನಾಲ್ಕು ಬಿಜೆಪಿ ಶಾಸಕರಿದ್ದ ಗದಗ ಜಿಲ್ಲೆಗೆ ಒಂದೂ ಸ್ಥಾನ ನೀಡಲಿಲ್ಲ. ಗದಗ ಬಿಜೆಪಿ ಶಾಸಕರು ಕೊಡಿಸುವಲ್ಲಿ, ಪಡೆದುಕೊಳ್ಳುವಲ್ಲಿ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಗದಗ ಜಿಲ್ಲೆಯಲ್ಲಿ ಬಿಜೆಪಿ ವಲಯದಲ್ಲಿ 2ನೇ ದರ್ಜೆಯ ನಾಯಕರು ಬೆಳೆಯಲಿಲ್ಲ. ಇದು ಗದಗ ಜಿಲ್ಲೆಯಲ್ಲಿ ಬಿಜೆಪಿಯ ಇಂದಿನ ದಯನೀಯ ಸ್ಥಿತಿಗೆ ಪಕ್ಷದ ನಾಯಕರೂ ಕಾರಣರಾಗಿದ್ದಾರೆ. ಸ್ಥಾನಮಾನ ಪಡೆದುಕೊಂಡ ಹಾವೇರಿ ಜಿಲ್ಲೆಯ ಕೆಲವರು ಬಿಜೆಪಿಗೆ ದ್ರೋಹ ಮಾಡಿದ್ದಾರೆ.
2008ರಲ್ಲಾದ ಕ್ಷೇತ್ರ ಮರುವಿಂಗಡನೆಯಲ್ಲಿ ಗದಗ ಜಿಲ್ಲೆಯ ಬಹುತೇಕ ಭಾಗವು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದರೂ ಹಾವೇರಿ ಲೋಕಸಭಾ ಕ್ಷೇತ್ರವನ್ನು ಹಾವೇರಿ-ಗದಗ ಲೋಕಸಭಾ(ಉಡುಪಿ-ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದಂತೆ ಕರೆಯಬೇಕಿತ್ತು) ಕ್ಷೇತ್ರ ಎಂದು ಕರೆಯದೇ ಅನ್ಯಾಯ ಮಾಡಲಾಗುತ್ತಿದೆ. ಈ ಕಾರಣದಿಂದ ಹಾವೇರಿ ಕೇಂದ್ರೀಕೃತ ರಾಜಕೀಯ ಬೆಳೆದು ಬಂದಿದ್ದರಿಂದ ಗದಗ ಜಿಲ್ಲೆಯ ವರ್ಚಸ್ಸು ಕಡಿಮೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

