ಗದಗ

ಜನಪದ ಗೀತೆ ಮಹಾಕಾವ್ಯಕ್ಕೆ ಕಮ್ಮಿಯಲ್ಲ: ತೋಂಟದ ಶ್ರೀ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 10
ಜನಪದ ಹಾಡುಗಳಲ್ಲಿ ಜೀವನ ದರ್ಶನವಿದೆ. ಅನುಭಾವದ ಮೆಲಕು ಇದೆ, ಅಂತರಂಗ ಬಹಿರಂಗ ಶುದ್ಧಿಯ ಸಂದೇಶವಿದೆ. ಜನಪದ ಗೀತೆಗಳು ಯಾವ ಮಹಾಕಾವ್ಯಕ್ಕೂ ಕಡಿಮೆಯಲ್ಲ ಎಂದು ಜ. ತೋಂಟದ ಡಾ.ಸಿದ್ದಲಿಂಗ ಶ್ರೀಗಳು ಹೇಳಿದರು.
ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2118ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಾನಪದ ಹಾಡುಗಳಲ್ಲಿ ಜೀವ ಹೃದಯ ಅಂತಃಕರಣವಿದೆ. ಅದು ಕಷ್ಟಗಳನ್ನು ಮರೆಸುತ್ತದೆ. ನಮ್ಮ ಹಿರಿಯರಿಗೆ ಬಡತನವಿದ್ದರೂ ಹೃದಯ ಶ್ರೀಮಂತಿಕೆಗೆ ಕೊರತೆ ಇರಲಿಲ್ಲ. ಸರಳವಾದ ಮಾತು, ಹಾಡುಗಳಲ್ಲಿ ಬದುಕಿನ ಸತ್ಯದರ್ಶನ ಮಾಡಿಸುವ ಪರಿ ಮಾರ್ಮಿಕ.  ಒಬ್ಬ ಅನಾಮಿಕ ಹೆಣ್ಣುಮಗಳು ಹಾಡಿದ ತ್ರಿಪದಿಗಳು ಹರಿಶ್ಚಂದ್ರ ಕಾವ್ಯಕ್ಕೆ ಸಮನಾಗಿವೆ ಎಂದರು.
ಗದುಗಿನ ಆದರ್ಶ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಬಾಹುಬಲಿ ಜೈನರ್ ಜಾನಪದ ಗೀತೆಗಳ ಗಾಯನ ನಡೆಸಿಕೊಟ್ಟರು. ಶ್ವೇತಾ ಶಿಗ್ಲಿ ಧರ್ಮಗ್ರಂಥ ಪಠಣ ಗೈದರು. ಸೈನಾಜ ಬೇಲೇರಿ ಧರ್ಮಚಿಂತನೆ ಮಾಡಿದರು. ತೋಂಟದಾರ್ಯ ವಿದ್ಯಾಪೀಠದ ಐಟಿಐ ಸಿಬ್ಬಂದಿಯನ್ನು ಶ್ರೀಗಳು ಆಶೀರ್ವದಿಸಿದರು. ಸಂಘದ ಪದಾಧಿಕಾರಿ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಈರಣ್ಣ ಹೊನಗಣ್ಣವರ, ಗುರುಬಸವಲಿಂಗ ತಡಸದ, ಪ್ರಭಯ್ಯ ಹಿರೇಮಠ ಪಾಲ್ಗೊಂಡಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡರ ಸ್ವಾಗತಿಸಿದರು. ಶಿವಾನುಭವ ಸಮಿತಿ ಚೇರಮನ್ ಪ್ರೊ. ಎಸ್.ಎನ್. ಆದಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.